HEALTH TIPS

No title

                     ಅಪಾಯದ ಮಟ್ಟ ಮೀರಿ ಹರಿದ ಶಿರಿಯಾ
      ಕುಂಬಳೆ: ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ ಕೊಳ್ಳಗಳು ಸೇರಿದಂತೆ ನದಿಗಳು ತುಂಬಿ ಹರಿಯುತ್ತಿವೆ. ಪೆಮರ್ುದೆ ಸಮೀಪದಿಂದ ಹರಿದು ಕುಂಬಳೆ ಬಳಿಯ ಅರಬ್ಬಿ ಸುಮುದ್ರ ಸೇರುವ ಶಿರಿಯಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಂಗಡಿ ಮೊಗರು ಸಮೀಪ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಶಿರಿಯಾ ನದಿ ನೀರು ಸಮೀಪದ ಮಸೀದಿ ಪರಿಸರಕ್ಕೆ ಆವರಿಸಿದೆ. ಅಂಗಡಿಮೊಗರು ಸೇತುವೆಯ ಇಕ್ಕೆಡೆಯಲ್ಲಿರುವ ಮಸೀದಿಗಳ ಪ್ರಾಂಗಣವು ನದಿ ನೀರಿನಿಂದ ಆವೃತವಾಗಿದೆ. ಶಿರಿಯಾ ನದಿ ಸಮೀಪವಿರುವ ತೆಂಗು ಮತ್ತು ಕಂಗಿನ ತೋಟಗಳಲ್ಲಿ ನದಿ ನೀರು ಹರಿದಿದ್ದು ಸಮೀಪದ ಪ್ರದೇಶವಾಸಿಗಳು ಭಯಭೀತರಾಗಿದ್ದಾರೆ. ಮಣಿಯಂಪಾರೆ, ಕನಿಯಾಲ ಸೇರಿದಂತೆ ಕಿದೂರು, ಬಂಬ್ರಾಣ ಪ್ರದೇಶದ ಹೊಲ ಗದ್ದೆಗಳಲ್ಲಿ ನದಿ ನೀರು ಆವೃತವಾಗಿದೆ. ನದಿ ನೀರಿನ ರಭಸ ಹೆಚ್ಚಾದ ಕಾರಣ ಸಮೀಪವತರ್ಿ ಪ್ರದೇಶವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.
       ದಶಕಗಳ ಹಿಂದಿನ ಪ್ರವಾಹದ ನೆನಪು!
ಶಿರಿಯಾ ನದಿಗೆ ಮಣಿಯಂಪಾರೆ ಹಾಗೂ ಬಂಬ್ರಾಣದಲ್ಲಿ ಎರಡು ಆಣೆಕಟ್ಟುಗಳಿದ್ದು, ಕಿರು ಅಣೆಕಟ್ಟಿನ ಗೇಟುಗಳನ್ನು ತೆರೆಯಲಾಗಿದೆ. ಎರಡು ದಶಕಗಳ ಹಿಂದೆ ಇದೇ ರೀತಿಯ ಪ್ರವಾಹ ಭೀತಿ ಶಿರಿಯಾ ನದಿ ತಟ ಪ್ರದೇಶದಲ್ಲಿ ಸಂಭವಿಸಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಡಿ ಪ್ರದೇಶದ ಮಾಣಿಲ ಪ್ರದೇಶದ ಸಣ್ಣ ಹೊಳೆಗಳು ಶಿರಿಯಾ ನದಿ ಸೇರುತ್ತಿದ್ದು ಗಡಿ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹ ಭೀತಿ ಹೆಚ್ಚಿದೆ ಎನ್ನಲಾಗಿದೆ. ಉಳಿದಂತೆ ಉಪ್ಪಳ ಹೊಳೆ, ಮಂಜೇಶ್ವರ ಹೊಳೆಗಳು ತುಂಬಿ ಹರಿಯುತ್ತಿವೆ.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries