ಪಾವಂಜೆಯಲ್ಲಿ ಅನುರಣಿಸಿತು 'ಯಕ್ಷ ಕಾವ್ಯಾಂತರಂಗ'
ಸಿರಿಬಾಗಿಲು ಪ್ರತಿಷ್ಠಾನದವರ ವಿನೂತನ ಕಾರ್ಯಕ್ರಮ
ಕುಂಬಳೆ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೊಡು ಸಂಸ್ಥೆಯು ಇತ್ತೀಚೆಗೆ 'ಯಕ್ಷ ಕಾವ್ಯಾಂತರಂಗ -1'ಎನ್ನುವ ವಿನೂತನ ಕಾರ್ಯಕ್ರಮವನ್ನು ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಶಾರದ್ವತ ಯಜ್ಞಾಂಗಣದಲ್ಲಿ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮಾರಕ ಕಲಾಪೋಷಕ ವೇದಿಕೆಯ ಸಹಕಾರದೊಂದಿಗೆ ಯಶಸ್ವಿಯಾಗಿ ಆಯೋಜಿಸಿತು.
ಹಿರಿಯ ಪ್ರಸಂಗಕರ್ತ ಅರ್ಥಧಾರಿ ಶ್ರೀಧರ ಡಿ.ಎಸ್. ನಿದರ್ೇಶನ ಹಾಗೂ ನಿರೂಪಣೆಯಲ್ಲಿ ಯಕ್ಷಗಾನ ಕವಿ- ಕಾವ್ಯ ಪರಿಚಯದೊಂದಿಗೆ ಕೃತಿಕಾರರ ಕೃತಿಗಳನ್ನು ಪರಿಚಯಿಸಿ ಮಟ್ಟುಗಳನ್ನು ಹೆಸರಿಸಿ ಕವಿರಚನೆಯ ಸಂದರ್ಭದ ಮಹತ್ವವನ್ನು ತಿಳಿಸಿ ಅನುಭವಿ ಭಾಗವತರಿಂದ ಹಿಮ್ಮೇಳ ಸಹಿತ ಹಾಡಿಸುವ ಮೂಲಕ ದಾಖಲಾರ್ಹವಾಗಿ ಯಕ್ಷ ಕಾವ್ಯಾಂತರಂಗ ವಿಶಿಷ್ಟವಾಗಿ ಮೂಡಿಬಂತು.
ಕಾರ್ಯಕ್ರಮವನ್ನು ತೆಂಕುತಿಟ್ಟಿನ ಹಿರಿಯ ಭಾಗವತ ಅಗರಿ ರಘುರಾಮ ಭಾಗವತರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿ ಮಾತನಾಡಿ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಓರ್ವ ವೃತ್ತಿಕಲಾವಿದನಾಗಿ ಯಕ್ಷಗಾನದ ಒಳ ಹೊರಗನ್ನು ಪರಿಚಯಿಸುವಲ್ಲಿ ನಡೆಸುತ್ತಿರುವ ಪ್ರಯತ್ನ ಶ್ಲಾಘನಾರ್ಹ ಎಂದರು.
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಧರ್ಮದಶರ್ಿ ಡಾ.ಯಾಜಿ.ಹೆಚ್.ನಿರಂಜನ ಭಟ್ ಸಮಾರಂಭದಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ ಮಾತನಾಡಿ ರಾಮಕೃಷ್ಣ ಮಯ್ಯರು ತನ್ನ ತಂದೆ ಗಡಿನಾಡು ಕಾಸರಗೋಡಿನ ಹಿರಿಯ ಸಾಹಿತಿ ಸಂಶೋಧಕ ಸಿರಿಬಾಗಿಲು ವೆಂಕಪ್ಪಯ್ಯರ ಹೆಸರನ್ನು ಶಾಶ್ವತಗೊಳಿಸುವ ಪ್ರಯತ್ನವಾಗಿ ಪ್ರತಿಷ್ಠಾನವನ್ನು ಹುಟ್ಟುಹಾಕಿ ಏಕಾಂಗಿ ಸಾಹಸದಿಂದ ಯಕ್ಷಗಾನದ ಅಂತರಂಗವನ್ನು ತಿಳಿಸುವ ವಿವಿಧ ಕಮ್ಮಟ, ಶಿಬಿರ ಪ್ರದರ್ಶನಗಳನ್ನು ನಡೆಸುತ್ತ ಯಕ್ಷಗಾನಕಲೆಯ ಮಹತ್ವವನ್ನು ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾರ್ಯಕ್ರಮವನ್ನು ಶ್ಲಾಘಿಸಿ ಶುಭ ಹಾರೈಸಿದರು.
ಹವ್ಯಾಸಿ ಪತ್ರಕರ್ತ ಹಾಗೂ ಪ್ರಸಂಗಕರ್ತ ಯೋಗೀಶ ರಾವ್ ಚಿಗುರುಪಾದೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಬಹರೈನ್ ಯಕ್ಷಗಾನ ತಂಡದ ಸಲಹೆಗಾರ ರಮೇಶ್ ಮಂಜೇಶ್ವರ, ಕಲಾಪೋಷಕ ಯಾದವ ಕೋಟ್ಯಾನ್ ಪೆಮರ್ುದೆ, ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ ಸ್ಮಾರಕ ಕಲಾಪೋಷಕ ವೇದಿಕೆಯ ಅಧ್ಯಕ್ಷ ಶಶೀಂದ್ರ ಕುಮಾರ್, ಕಲಾ ಪೋಷಕ ರಮೇಶ ಟಿ.ಎನ್. ಅತಿಥಿಗಳಾಗಿ ಶುಭ ಹಾರೈಸಿದರು.
ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣಮಯ್ಯ ಸಿರಿಬಾಗಿಲು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಹೇಶ್ ಸುಳ್ಯ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಭಾಗವತರಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಬಲಿಪ ಪ್ರಸಾದ ಭಟ್, ರವಿಚಂದ್ರ ಕನ್ನಡಿಕಟ್ಟೆ ,ಹಿಮ್ಮೇಳವಾದಕರಾಗಿ ಅಡೂರು ಗಣೇಶರಾವ್, ಲಕ್ಷ್ಮೀಶ ಅಮ್ಮಣ್ಣಾಯ, ಚಕ್ರತಾಳದಲ್ಲಿ ಮುರಾರಿ ಭಟ್ ಪಂಜಿಗದ್ದೆ ಭಾಗವಹಿಸಿದ್ದರು.
ಅವಲೋಕನ ಕಾರರಾಗಿ ಕನರ್ಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಹಿರಿಯ ಪ್ರಸಂಗಕರ್ತ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಕಾರ್ಯಕ್ರಮದ ಸಮಗ್ರ ಅವಲೋಕನಗೈದು ಪ್ರಸ್ತುತಿಗೊಂಡ ಮೂಲ ಹಾಡುಗಳ ಮಟ್ಟುಗಳು ಹಾಗೂ ಭಾಗವತರು ಹಾಡಿದ ರಾಗಗಳನ್ನು ಎಳೆಎಳೆಯಾಗಿ ವಿವರಿಸಿ ಒಪ್ಪು ತಪ್ಪುಗಳನ್ನು ತಿಳಿಸಿ ಯಕ್ಷಗಾನದಲ್ಲಿ ಕಾಲಕ್ಕನುಗುಣವಾಗಿ, ಭಾವಕ್ಕನುಗುಣವಾಗಿ ಸಂದರ್ಭಕ್ಕನುಗುಣವಾಗಿ ರಾಗಗಳ ಹಾಗೂ ಮಟ್ಟುಗಳ ಬಳಕೆಯ ಬಗ್ಗೆ ಬೆಳಕು ಚೆಲ್ಲಿದರು. ಹಾಗೂ ಒಟ್ಟು ಕಾರ್ಯಕ್ರಮದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಇನ್ನೋರ್ವ ಅವಲೋಕನಕಾರ ಉಪನ್ಯಾಸಕ ಹವ್ಯಾಸಿ ಭಾಗವತ ಪ್ರೊ.ಯಸ್.ವಿ. ಉದಯಕುಮಾರ್ ಶೆಟ್ಟಿ ಯಕ್ಷಗಾನದ ಗಾನ ಪರಂಪರೆ ನಡೆದುಬಂದ ದಾರಿಯನ್ನು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಆಯ್ದ ಹತ್ತು ಪ್ರಾಚೀನ ಕವಿಗಳಾದ ಪಾತರ್ಿಸುಬ್ಬ, ಅಜಪುರ ವಿಷ್ಣು, ದೇವಿದಾಸ, ಕೆಳದಿಸುಬ್ಬ, ಹಟ್ಟಿಯಂಗಡಿ ರಾಮಭಟ್ಟ, ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ, ನಂದಳಿಕೆ ಲಕ್ಷ್ಮೀನಾರಾಯಣಪ್ಪ, ಕೊಗರ್ಿ ಸೂರ್ಯನಾರಾಯಣ ಉಪಾಧ್ಯಾಯ, ಅಗರಿ ಶ್ರೀನಿವಾಸ ಭಾಗವತ ಹಾಗೂ ಐದು ವರ್ತಮಾನಕವಿಗಳಾದ ಬಲಿಪ ನಾರಾಯಣ ಭಾಗವತರು, ಹೊಸತೋಟ ಮಂಜುನಾಥ ಭಾಗವತರು, ಪ್ರೊ.ಅಮೃತಸೋಮೇಶ್ವರ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಶ್ರೀಧರ ಡಿ.ಎಸ್. ಅವರ ಪ್ರಸಂಗಗಳ ತಲಾ ಮೂರು ಪದ್ಯಗಳನ್ನು ವೈವಿಧ್ಯಮಯ ಛಂದಸ್ಸುಗಳಿಂದ ಆಯ್ದು ಪ್ರಸ್ತುತ ಪಡಿಸಲಾಗಿದ್ದುದು ಗಮನಾರ್ಹವಾಯಿತು.