HEALTH TIPS

No title

              ರಾಮಕೃಷ್ಣ ಕಾಟುಕುಕ್ಕೆಯವರಿಂದ ಮತ್ತೊಂದು ದಾಖಲೆ- 12 ಗಂಟೆಗಳ ನಿರಂತರ ನಾಮ ಸಂಕೀರ್ತನಾ ಗಾಯನ
     ಪೆರ್ಲ: ರಾಮಾಯಣ ಮಾಸಾಚರಣೆಯ ಪ್ರಯುಕ್ತ ಶನಿವಾರ ಕಾಟುಕುಕ್ಕೆ  ಶ್ರೀಸುಬ್ರಾಯ ದೇವರ ಸನ್ನಿಧಿಯಲ್ಲಿ  ಸೂಯರ್ೋದಯದಿಂದ ಸೂಯರ್ಾಸ್ತದ ವರೆಗೆ  ಅನ್ನ ,  ನೀರು  ಸೇವಿಸದೇ ಕುಳಿತಲ್ಲಿಂದ  ಏಳದೇ  "ಸುಮ್ಮನೆ ದೊರಕುವುದೇ ಶ್ರೀರಾಮನ ದಿವ್ಯನಾಮ " ಎನ್ನುವ ಶೀಷರ್ಿಕೆಯೊಂದಿಗೆ  ಹರಿನಾಮ  ಸಂಕೀರ್ತನಾಕಾರರಾದ ,ಭಜಕ ಗುರುವರ್ಯ ರಾಮಕೃಷ್ಣ  ಕಾಟುಕುಕ್ಕೆಯವರು ನಿತ್ಯ ಶ್ರೀರಾಮನ  ನಾಮವನ್ನು ಸತತ  12  ಗಂಟೆಗಳ  ಕಾಲ  ಸ್ಮರಿಸುವ  ಮೂಲಕ  ಭಕ್ತಿ ಸಾಧನೆ  ಮೆರೆದರು.
  ಭಗವಂತನ ದೃಢ   ಭಕ್ತಿ ಭಾವದೆಡೆಗೆ ಮನುಜರನ್ನು  ಸೆಳೆದು  ಪ್ರತಿಯೊಬ್ಬರ  ದಿನ ನಿತ್ಯದ  ಬದುಕಿನ  ಜಂಜಾಟಗಳನ್ನು  , ಒತ್ತಡಗಳಿಂದ  ಮುಕ್ತರಾಗಲು  ಭಗವಂತನ ದಿವ್ಯ   ನಾಮ  ಸ್ಮರಣೆಯೊಂದೇ  ದಾರಿ ಎನ್ನುವ ಯುಕ್ತಿ ಮತ್ತು  ಉದ್ದೇಶದೊಂದಿಗೆ  ಕಾರ್ಯಕ್ರಮ  ಸಂಪನ್ನಸಗೊಂಡಿತು.
    ಶ್ರೀಕ್ಷೇತ್ರದ  ಅರ್ಚಕ  ರಾಮಚಂದ್ರ ಭಟ್ ದೀಪ  ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸೂಯರ್ೋದಯದಿಂದ  ಸೂಯರ್ಾಸ್ತದ ವರೆಗೆ,  ಬೆಳಿಗ್ಗೆ  6ರಿಂದ  ಸಂಧ್ಯಾಕಾಲದ  ವರೆಗೆ  ಸುಮಾರು  12ಗಂಟೆಗಳ ಕಾಲ ಅಖಂಡ  ಶ್ರೀರಾಮನ  ಸಂಕೀರ್ತನೆ  ನಡೆಯಿತು.
   ದಾಸಸಂಕೀರ್ತನೆ, ದಾಸಸಾಹಿತ್ಯದ  ಸಾಂಪ್ರದಾಯಿಕ  ಭಜನಾ ಸಂಕೀರ್ತನೆಗಳ ಮೂಲಕ ಕನ್ನಡವನ್ನು ಉಳಿಸುವ ಕಾಯಕವನ್ನೂ  ಮಾಡುತ್ತಿರುವ  ರಾಮಕೃಷ್ಣ ಕಾಟುಕುಕ್ಕೆಯವರು  ಕಾಸರಗೋಡು ಜಿಲ್ಲೆಯಲ್ಲಿ ಪ್ರಪ್ರಥಮವಾಗಿ   ಭಜನಾ ತರಬೇತಿಯನ್ನು ಹುಟ್ಟು ಹಾಕಿದ ಮೊದಲಿಗರು. ಹೊರರಾಜ್ಯ ಕನರ್ಾಟಕ ಮತ್ತು ಮುಂಬಯಿಗಳಲ್ಲಿ ಅನೇಕ  ತಾಯಂದಿರ ಮತ್ತು ಮಕ್ಕಳ ಭಜನಾ  ಸಂಘಗಳ ಸೃಷ್ಟಿಗೆ  ಕಾರಣಕರ್ತರಾಗಿದ್ದಾರೆ.
   ಏನಂತಾರೆ-ಸಾಧನೆಯ ಬಗ್ಗೆ :
       ಭಕ್ತಿ ಭಾವದ  ಭಜನಾ ಸಂಸ್ಕೃತಿಯಲ್ಲಿ ಸಂಸ್ಕಾರ, ದೇವ ಹಾಗೂ ಗುರು ಭಕ್ತಿ ಸಾಧ್ಯವಾಗುತ್ತದೆ. ಆಧುನಿಕ ಯುಗದಲ್ಲಿ ಮುಂದಿನ ಪೀಳಿಗೆಗೆ ಸಂಕೀರ್ತನಾ ಸಂಸ್ಕೃತಿಯನ್ನು ತಿಳಿಸಿಕೊಡುವ  ಮೂಲಕ ನಮ್ಮ ಸಾಂಪ್ರಾದಾಯಿಕ,ಧಾಮರ್ಿಕ  ನೆಲೆಗಟ್ಟನ್ನು  ದೃಢಗೊಳಿಸುವುದು ಆದ್ಯ ಕರ್ತವ್ಯವೂ  ಹೌದು. ಭಜನೆ  ಎನ್ನುವುದು  ಪ್ರಚಾರ ಮತ್ತು ಸ್ವಯಂ ಹೆಸರು-ಪ್ರತಿಷ್ಠೆಯ  ವಸ್ತುವಾಗದೆ  ದೇವರನ್ನು  ಸಂತೃಪ್ತಿಪಡಿಸುವ  ಉದ್ದೇಶ  ಹೊಂದಿದ್ದರೆ  ಮಾತ್ರ ಮಾಡಿದ  ಸೇವೆಯನ್ನು ಭಗವಂತ ಸ್ವೀಕರಿಸಲು, ಭಕ್ತಿಯ ಪರಿಪೂರ್ಣತೆ  ಸಾಕ್ಷಾತ್ಕಾರಗೊಳ್ಳುಲು  ಸಾಧ್ಯ  ಎನ್ನುವ  ಸದ್ದುದ್ಧೇಶವನ್ನು ಮುಂದಿಟ್ಟುಕೊಂಡು  ರಾಮಾಯಣ  ಮಾಸಾಚರಣೆಯ  ಸುಸಂದರ್ಭದಲ್ಲಿ  ಇಂತಹ  ಕಾರ್ಯವನ್ನು  ಹಮ್ಮಿಕೊಳ್ಳಲಾಯಿತೆಂದು  ರಾಮಕೃಷ್ಣ ಕಾಟುಕುಕ್ಕೆಯವರು  ತಿಳಿಸಿದರು.



   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries