HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಕುಕ್ಕಾರು ಶಾಲಾ ಮಕ್ಕಳ ಹೋರಾಟಕ್ಕೆ ತಾತ್ವಿಕ ಜಯ-ರಜೆಯಲ್ಲಿ ತೆರಳಿದ ಶಿಕ್ಷಕ
    ಉಪ್ಪಳ: ಮಂಗಲ್ಪಾಡಿ ಸರಕಾರಿ ಫ್ರೌಢಶಾಲೆಯ ಹೈಸ್ಕೂಲು ವಿಭಾಗದ ಕನ್ನಡ ಗಣಿತ ಶಿಕ್ಷಕನ ಹುದ್ದೆಗೆ ಮಲೆಯಾಳ ಮಾತ್ರ ತಿಳಿದಿರುವ ಶಿಕ್ಷಕರೋರ್ವರನ್ನು ನೇಮಿಸಿರುವ ವಿವಾದಾತ್ಮಕ ಘಟನೆಯ ಬಳಿಕ ಶಾಲಾ ರಕ್ಷಕ ಶಿಕ್ಷಕ ಸಂಘ ಹಾಗೂ ಕನ್ನಡ ಹೋರಾಟ ಸಮಿತಿಯ ಪ್ರಬಲ ಪ್ರತಿಭಟನೆಯ ಬಳಿಕ ರಜೆಯ ಮೇಲೆ ತೆರಳಿದ್ದ ಶಿಕ್ಷಕ ಬುಧವಾರ ಮತ್ತೆ 120 ದಿನಗಳ ರಜೆಯ ಮೇಲೆ ತೆರಳಿದ್ದು, ಪ್ರತಿಭಟನಾ ಹೋರಾಟಕ್ಕೆ ಸಂದ ಮಹತ್ವದ ಜಯವಾಗಿ ದಾಖಲಾಯಿತು.
   ಹತ್ತು ದಿನಗಳ ಓಣಂ ರಜಾವಧಿಯ ಬಳಿಕ  ಬುಧವಾರ ಶಾಲೆ ಪುನರಾರಂಭಗೊಂಡಿದ್ದು ಮಲೆಯಾಳ ಮಾತ್ರ ಗೊತ್ತಿರುವ ಶಿಕ್ಷಕನ ನಿಲುವಿನ ಬಗ್ಗೆ ಶಂಕೆಗಳಿದ್ದವು. ಈ ನಿಟ್ಟಿನಲ್ಲಿ ಬುಧವಾರ ಬೆಳಿಗ್ಗೆ ಶಾಲೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ನೂರಾರು ಮಂದಿ ಸದಸ್ಯರು, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ, ಕನ್ನಡ ಹೋರಾಟ ಸಮಿತಿ ಮೊದಲಾದವರು ಆಗಮಿಸಿ ಮಲೆಯಾಳದಲ್ಲಿ ಗಣಿತ ಕಲಿಸಲು ಸಾಧ್ಯವಿಲ್ಲ ಎಂಬ ಪಟ್ಟುಹಿಡಿದರು. ಜೊತೆಗೆ ಶಾಲಾ ಹೊರಾವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. 
   ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಲತಾ ಅವರು ಕಾಯರ್ಾಲಯದಲ್ಲಿ ಸುಧೀರ್ಘ ಚಚರ್ೆ ನಡೆಸಿ ಮಲೆಯಾಳ ಶಿಕ್ಷಕನಲ್ಲಿ ಪರಿಸ್ಥಿತಿಯ ಮಹತ್ವದ ಬಗ್ಗೆ ಮರಳಿ ಮನವರಿಕೆ ಮಾಡಲಾಯಿತು.ಪರಿಸ್ಥಿತಿಯ ತೀವ್ರತೆ ಅರಿತು ಆ ಶಿಕ್ಷಕ 120 ದಿನಗಳ ರಜೆ ಬರೆದು ತೆರಳಿದರು.
   ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಅಂಬಾರ್, ಮಾತೃಸಂಘದ ಅಧ್ಯಕ್ಷೆ ಯಶೋಧ ರೈ, ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ, ಸದಸ್ಯೆ ಫರೀದಾ ಸಕೀರ್, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಜಿಲ್ಲಾಧ್ಯಕ್ಷ ರವೀಂದ್ರನಾಥ ಕೆ.ಆರ್., ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದಶರ್ಿ ಭಾಸ್ಕರ ಕೆ, ಮೊಹಮ್ಮದ್ ಉಪ್ಪಳ ಗೇಟ್, ನಾರಾಯಣ ಭಟ್ ಮೈರ್ಕಳ, ಸತೀಶ್ ಒಡ್ಡಂಬೆಟ್ಟು, ದಿನೇಶ್ ಚೆರುಗೋಳಿ, ಅಶೋಕ ಮಾಸ್ತರ್ ಕೊಡ್ಲಮೊಗರು ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
   ಶಾಲೆಗೆ ಗುರುವಾರ(ಇಂದಿನಿಂದ)ದಿಂದ ಹೈಸ್ಕೂಲು ಗಣಿತ ಶಿಕ್ಷಕರಾಗಿ ದಿನವೇತನ ಆಧಾರದಲ್ಲಿ ಕನ್ನಡ ಶಿಕ್ಷಕರೋರ್ವರನ್ನು ನೇಮಿಸಲಾಗುತ್ತಿದೆ ಎಂದು ಮುಖ್ಯೋಪಾಧ್ಯಾಯಿನಿ ಲತಾ ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಅಂಬಾರ್ ತಿಳಿಸಿದ್ದಾರೆ.

     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries