HEALTH TIPS

No title

ಕಾಟುಕುಕ್ಕೆ ಶಾಲೆ ಎನ್ ಎಸ್ ಎಸ್ ನಿಂದ ನೆರೆ ಸಂತ್ರಸ್ತರಿಗೆ ನೆರವು
   ಪೆರ್ಲ:ನೆರೆಹಾವಳಿಯಿಂದ ತತ್ತರಿಸಿರುವ ಕೇರಳದ 13 ಜಿಲ್ಲೆಗಳ ಜನತೆಗೆ ಅಗತ್ಯ ಸಾಮಾಗ್ರಿಗಳನ್ನು  ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕಂಡರಿ ಶಾಲೆಯ ಎನ್ ಎಸ್ ಎಸ್ ಘಟಕದ  ವತಿಯಿಂದ ಯೋಜನಾಧಿಕಾರಿ ಮಹೇಶ ಏತಡ್ಕ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು ಅವರಿಗೆ  ಹಸ್ತಾಂತರಿಸಲಾಯಿತು.
   ಜಿಲ್ಲಾಧಿಕಾರಿಯವರು ಎನ್ ಎಸ್ ಎಸ್  ಘಟಕಕ್ಕೆ ಅಭಿನಂದನೆಯನ್ನು  ಸಲ್ಲಿಸಿ, ತರಗತಿಯಲ್ಲಿ ಕಲಿತಿರುವ ಜೀವನದ ಮೌಲ್ಯಗಳನ್ನು  ಇತರರಿಗೆ ಸಹಾಯವನ್ನು ಮಾಡುವುದರ ಮೂಲಕ ಪ್ರಾಯೋಗಿಕವಾಗಿ ಬದುಕಿನಲ್ಲಿ ಅಳವಡಿಸಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಈ ವೇಳೆ ಉಪಸ್ಥಿತರಿದ್ದ ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕ್ಕುನ್ನು, ಉಪ ಜಿಲ್ಲಾಧಿಕಾರಿ, ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಕಂಗೆಟ್ಟಿರುವ ಕೇರಳವನ್ನು ಪುನರ್ ನಿಮರ್ಾಣ ಮಾಡುವಲ್ಲಿ ಎನ್ಎಸ್ಎಸ್ ಕೈಜೋಡಿಸುತ್ತಿರುವುದು  ಶ್ಲಾಘನೀಯ ಎಂದರು.
     ಅಧ್ಯಾಪಕರಾದ ರಾಜೇಶ್ ಸಿ.ಎಚ್., ಸುಪ್ರೀತ್, ಎನ್ ಎಸ್ ಎಸ್ ಕಾರ್ಯದಶರ್ಿಗಳಾದ ಅವಿನಾಶ್, ಭೂಮಿಕಾ, ಅಹ್ಮದ್ ಮಶೂಕ್, ಕವಿತಾ ಎಸ್.ಪೈ ನೇತೃತ್ವವನ್ನು ವಹಿಸಿ ಸಂತ್ರಸ್ತರಿಗೆ ಅಗತ್ಯ ವಿರುವ ಸುಮಾರು 30 ಸಾವಿರ ರೂ. ಮೌಲ್ಯದ ಬಟ್ಟೆ ಬರೆ, ಕುಡಿಯುವ ನೀರು, ಆಹಾರವಸ್ತುಗಳು, ಫೀನೋಯಿಲ್, ಬ್ಲೀಚಿಂಗ್ ಪೌಡರ್, ನ್ಯಾಪ್ಕಿನ್ , ಬರೆಯುವ ಪುಸ್ತಕ ಇತರ ಕಲಿಕಾ ಪರಿಕರಗಳು, ಪಾಲಕ ಶ್ರೀಧರನ್ ವತಿಯಿಂದ 10 ಸಾವಿರ ರೂ. ಮೌಲ್ಯದ ಬರೆಯುವ ಪುಸ್ತಕಗಳು ಸಹಾಯ ರೂಪದಲ್ಲಿ  ಒಳಗೊಂಡಿದ್ದವು. ಶಾಲಾ ಬಸ್ ಚಾಲಕರಾದ ಮಹಾಲಿಂಗ, ಚನಿಯಪ್ಪ  ಸಹಕರಿಸಿದರು. ಸುಮಾರು 50 ರಷ್ಟು ಎನ್.ಎಸ್.ಎಸ್ ಸ್ವಯಂಸೇವಕರು ನೆರವು ಕಾರ್ಯದಲ್ಲಿ ಭಾಗಿಯಾಗಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries