HEALTH TIPS

No title

         ತಲಪಾಡಿ ಟೋಲ್ ಗೇಟ್ ನಲ್ಲಿ ಕೆ ಎಲ್ 14 ವಾಹನಗಳಿಗೆ ಟೋಲ್ ರಿಯಾಯಿತಿ ಆಗ್ರಹಿಸಿ: ರಾಷ್ಟೀಯ ಹೆದ್ದಾರಿ ಹೋರಾಟ ಸಮಿತಿ ಅಸ್ತಿತ್ವಕ್ಕೆ
  ಮಂಜೇಶ್ವರ:  ತಲಪಾಡಿ ಟೋಲ್ ಬೂತಿನಲ್ಲಿ ಕಾಸರಗೋಡು ಜಿಲ್ಲೆುಂದ ನೋಂದಾುತವಾಗಿರುವ ಕೆ ಎಲ್ 14 ನೋಂದಾವಣೆ ಸಂಖ್ಯೆಯಲ್ಲಿರುವ ವಾಹನಗಳಿಗೆ ಟೋಲ್ ವಿನಾಯಿತಿ ನೀಡುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಗುರುವಾರ ಬೆಳಿಗ್ಗೆ ಅಸ್ತಿತ್ವ ನೀಡಲಾಯಿತು.
   ಹೊಸಂಗಡಿ ಗೇಟ್ ವೇ ಅಡಿಟೋರಿಯಂ ನಲ್ಲಿ ಮಂಜೇಶ್ವರ ಬ್ಲಾಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ರವರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ತಲಪಾಡಿ ಟೋಲ್ ಗೇಟ್ ನಲ್ಲಿ ಕೆ ಎಲ್ 14 ವಾಹನಗಳಿಗೆ ಟೋಲ್ ರಿಯಾಯಿುವಂತೆ ಹೋರಾಟ ನಡೆಸಲು  ಹಾಗೂ ಇತರ ಲೋಪದೋಷಗಳನ್ನು ಕಾನೂನಾತ್ಮಕವಾಗಿ ಎದುರಿಸಲು ಹೋರಾಟ ಸಮಿತಿಗೆ ನೀಡಲಾಯಿತು.
   ಇತ್ತಿಚೆಗೆ ಉಡುಪಿಯಲ್ಲಿ ನವಯುಗ್ ಕಂಪನಿಯ ಅಧಿಕಾರಿಗಳು ಊರವರೊಂದಿಗೆ ಚಚರ್ಿಸಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಕೆ ಎ 19 ಹಾಗೂ ಕೆ ಎ 20 ನೋಂದಾವಣೆಯ ವಾಹನಗಳಿಗೆ ಸೆಪ್ಟಂಬರ್ 2018 ರ ತನಕ ಟೋಲ್ ರಿಯಾುತಿಯನ್ನು ನೀಡಲು ಸಮ್ಮತಿಸಿದಾರೆ. ಈ ನಿಟ್ಟಿನಲ್ಲಿ ಕೆ ಎಲ್ 14 ಗೆ ಯಾಕೆ ನೀಡುವುದಿಲ್ಲವೆಂಬ ಪ್ರಶ್ನೆ ಉದ್ಬವಿಸಿದೆ. ಈಗಾಗಲೇ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಟೋಲ್ ರಿಯಾಯಿತಿಯನ್ನು ನೀಡುತಿದ್ದರೂ. ಉಳಿದ ಎರಡು ನೋಂದಾವಣೆ ಸಂಖ್ಯೆಗಳಿಗೆ ರಿಯಾುತಿ ನೀಡಿರುವ ಹಿನ್ನೆಲೆಯಲ್ಲಿ ಕೆ ಎಲ್ 14 ಗೂ ರಿಯಾಯಿತಿ ನೀಡಬೇಕಾದದು ಅನಿವಾರ್ಯ ಎಂಬುದಾಗಿ ಹೋರಾಟ ಸಮಿತಿ ಅಭಿಪ್ರಾಯಪಟ್ಟಿದೆ. ಈ ನಿಟ್ಟಿನಲ್ಲಿ ಇದೇ ತಿಂಗಳು 29 ಅಥವಾ 30 ನೇ ದಿನಾಂಕದಂದು ಹೋರಾಟ ಸಮಿತಿಯು ಕಾಸರಗೋಡು ಸಂಸದ , ಶಾಸಕರನ್ನು
ಒಳಗೊಂಡು ಜಿಲ್ಲಾಧಿಕಾರಿಯವರ ಸಮ್ಮುಖದಲ್ಲಿ ಚಚರ್ೆ ನಡೆಸಿ ಹೋರಾಟವನ್ನು ಯಾವ ರೀತಿಯಲ್ಲಿ ನಡೆಸಬಹುದೆಂಬ ತೀಮರ್ಾನವನ್ನು ಕೈಗೊಳ್ಳಲಿದೆ.
   ಈ ಸಂದರ್ಭ ಜನಪ್ರತಿನಿಧಿಗಳಾದ ಹಷರ್ಾದ್ ವಕರ್ಾಡಿ, ಅಜೀಝ್ ಹಾಜಿ, ಮುಕ್ತಾರ್ ವಿವಿಧ ರಾಜಕೀಯ ಪಕ್ಷಗಳ ನೇತಾರರಾದ ಹರೀಶ್ ಚಂದ್ರ ಮಂಜೇಶ್ವರ, ಪ್ರಶಾಂತ್ ಕನಿಲ, ಜಯರಾಂ ಬಲ್ಲಂಗುಡೇಲ್, ಮುಸ್ತಫ ಎಂ ಡಿ ಕಡಂಬಾರ್, ನಾಸರ್ ಇಡಿಯ, ಹಮೀದ್ ಹೊಸಂಗಡಿ, ಅಬೂ ತಮಾಮ್, ಪದ್ಮನಾಭ ಕಡಪ್ಪುರ ಸಹಿತ ಹಲವು ಪ್ರಮುಖರು ಹಾಗೂ ವಿವಿಧ ಸಂಘಟನೆಯ ನೇತಾರರು ಪಾಲ್ಗೊಂಡರು

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries