ಕುಕ್ಕಂಗೋಡ್ಳಿನಲ್ಲಿ ನಾಗರ ಪಂಚಮಿ
ಬದಿಯಡ್ಕ: ವಿಶೇಷವಾಗಿ ನಾಗನ ಗುಹಾ ಸಾನ್ನಿಧ್ಯವಿರುವ ಕುಕ್ಕಂಗೋಡ್ಲು ಶ್ರೀಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಆಗಸ್ಟ್ 15ರಂದು ನಾಗರ ಪಂಚಮಿಯನ್ನು ಆಚರಿಸಲಾಗುವುದು. ಅಂದು ಬೆಳಗ್ಗೆ 7ಗಂಟೆಗೆ ನಾಗನ ಗುಹಾ ಸಾನ್ನಿಧ್ಯ ಸ್ಥಳದಲ್ಲಿ ಸೀಯಾಳ ಅಭಿಷೇಕ, ಹಾಲು ಪಾಯಸ ಹಾಗೂ ನಾಗತಂಬಿಲ ಸೇವೆ ನಡೆಯಲಿದೆ. ನಂತರ ಶ್ರೀ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ನಡೆಯಲಿದೆ. ಸೀಯಾಳ ಮತ್ತು ಹಾಲು ತರುವವರು ಬೆಳಗ್ಗೆ 7 ಗಂಟೆಗೆ ಮುಂಚಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಲಾಗಿದೆ.