ತಾಲೂಕಾಸ್ಪತ್ರೆಗಾಗಿ ಇಂದಿನಿಂದ (16) ಕಠಿಣ ಚಳವಳಿ
ಬದಿಯಡ್ಕ: ಬದಿಯಡ್ಕಕ್ಕೆ ಸರಕಾರ ನೀಡಲು ಮುಂದಾಗಿದ್ದ ತಾಲೂಕು ಆಸ್ಪತ್ರೆಯನ್ನು ಬೇಡಡ್ಕಕ್ಕೆ ಸ್ಥಳಾಂತರಿಸಿರುವ ಹುನ್ನಾರದ ವಿರುದ್ಧ ತಾಲೂಕು ಆಸ್ಪತ್ರೆಯ ಜನಪರ ಕ್ರಿಯಾ ಸಮಿತಿ ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ಪರಿಸರದಲ್ಲಿ ಹಮ್ಮಿಕೊಂಡ ಅನಿಧರ್ಿಷ್ಟಾವಧಿ ಚಳವಳಿ ಪ್ರತಿಭಟನೆಯ ಬುಧವಾರದ ಚಳವಳಿಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಕೀಮ್ ಕುನ್ನಿಲ್ ಉದ್ಘಾಟಿಸಿದರು.
ಅಖಿಲ ಕೇರಳ ಯಾದವ ಸಭಾ ರಕ್ಷಾಧಿಕಾರಿ ಗಂಗಾಧರ ಯಾದವ್ ಅಧ್ಯಕ್ಷತೆ ವಹಿಸಿ ಮಾತನಾಡಿ ಬದಿಯಡ್ಕದ ಜನರಿಗೆ ಹೋರಾಟದ ಮೂಲಕವೇ ಎಲ್ಲವನ್ನೂ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿರುವುದು ಖೇಧಕರ. ಈ ಮೊದಲು ಇಲ್ಲಿ ನಡೆಸಿದ ಹೋರಾಟಗಳೆಲ್ಲವೂ ಫಲ ನೀಡಿದ್ದು ಈ ಹೋರಾಟಕ್ಕೂ ನ್ಯಾಯ ದೊರಕುವುದರಲ್ಲಿ ಎರಡು ಮಾತಿಲ್ಲ. ಜಾತಿ ಮತ ಬೇಧ ಮರೆತು ಎಲ್ಲ ಜನರೂ, ಸಂಘ ಸಂಸ್ಥೆಗಳೂ ಒಗ್ಗಟ್ಟಿನಿಂದ ಹೋರಾಡುವುದರ ಮೂಲಕ ನ್ಯಾಯಯುತವಾಗಿ ದೊರೆಯಬೇಕಾದ ತಾಲೂಕಾಸ್ಪತ್ರೆಯನ್ನು ಇಲ್ಲೇ ಸ್ಥಾಪಿಸುವಂತೆ ಮಾಡುವುದು ಕಷ್ಟವಲ್ಲ ಎಂದು ಅಭಿಪ್ರಾಯ ಪಟ್ಟರು.
ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ವಾರಿಜಾಕ್ಷನ್, ಕ್ರಿಯಾ ಸಮಿತಿಯ ಕಾರ್ಯಧ್ಯಕ್ಷ ಮಾಹಿನ್ ಕೇಳೋಟ್, ಪ್ರಧಾನ ಕಾರ್ಯದಶರ್ಿ ಜಗನ್ನಾಥ ಶೆಟ್ಟಿ, ಅನ್ವರ್ ಓಝೋನ್, ಬದ್ರುದ್ದೀನ್ ಮಾಸ್ಟರ್, ತಿರುಪತಿ ಕುಮಾರ್ ಭಟ್, ಚಂದ್ರಹಾಸ್ ರೈ ಪೆರಡಾಲಗುತ್ತು, ಮುನೀರ್, ನಾರಾಯಣ, ಅಶ್ರಫ್ ಮುನಿಯೂರು , ಶ್ಯಾಮ ಪ್ರಸಾದ್ ಮಾನ್ಯ ಉಪಸ್ಥಿತರಿದ್ದರು.
ಪ್ರಸ್ತುತ ನಡೆಯುತ್ತಿರುವ ಅನಿಧರ್ಿಷ್ಟಾವಧಿ ಚಳವಳಿಯ ಭಾಗವಾಗಿ ಇಂದಿನಿಂದ (16)ಕಠಿಣ ಚಳವಳಿ ಹಾಗೂ ಪ್ರತಿಭಟನಾ ಜಾಥ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಬೆಳಗ್ಗೆ 9ಗಂಟೆಗೆ ಬದಿಯಡ್ಕ ಬಸ್ಸು ನಿಲ್ದಾಣ ಪರಿಸರದಿಂದ ಪ್ರಾರಂಭವಾಗುವ ಪ್ರತಿಭಟನಾ ಜಾಥದ ಬಳಿಕ ಆಸ್ಪತ್ರೆಯ ಎದುರು ಧರಣಿ ಹೂಡಿ ನಿರಂತರ ಸತ್ಯಾಗ್ರಹವನ್ನು ಪ್ರಾರಂಭಿಸಲಾಗುವುದು.