ಯಕ್ಷಗಾನವನ್ನು ಉಳಿಸುವ ತರಬೇತಿ ಕೇಂದ್ರದ ಪ್ರಯತ್ನ ಶ್ಲಾಘನೀಯ : ಸುಂದರಕೃಷ್ಣ ಮಧೂರು
ಮಧೂರು: ಅಚ್ಚಗನ್ನಡದ ಕಲೆ ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರವು ಕಳೆದ 17 ವರ್ಷಗಳಿಂದ ಪ್ರಯತ್ನಿಸುತ್ತಿದೆ. ಈ ಕೇಂದ್ರದ ಸದಸ್ಯರು ಕಲೆಯ ನಿರಂತರ ಕಲಿಕೆ, ತರಬೇತಿಯಲ್ಲಿ ತೊಡಗಿಸಿಕೊಂಡಿದ್ದು ಇವರ ಈ ಪ್ರಯತ್ನ ಶ್ಲಾಘನೀಯ ಎಂದು ಹಿರಿಯ ಯಕ್ಷಗಾನ ಕಲಾವಿದ ಸುಂದರಕೃಷ್ಣ ಮಧೂರು ಅಭಿಪ್ರಾಯಪಟ್ಟರು.
ಅವರು ಕುತ್ಯಾಳದ ಯಕ್ಷಗಾನ ತರಬೇತಿ ಕೇಂದ್ರದ ಇತ್ತೀಚೆಗೆ ನಡೆದ 17 ನೇ ವಾಷರ್ಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಅಚ್ಯುತ ಬಲ್ಯಾಯ ಕೂಡ್ಲು ವಹಿಸಿದರು. ಈ ಸಂದರ್ಭದಲ್ಲಿ ಖ್ಯಾತ ಹಿಮ್ಮೇಳ ಪರಿಕರ ತಯಾರಕರೂ, ಕಲಾವಿದರೂ ಆಗಿರುವ ಕೂಡ್ಲು ಸದಾನಂದ ರಾವ್ ಅವರನ್ನು ಶ್ರೀ ಕ್ಷೇತ್ರ ಕುತ್ಯಾಳದ ಮೊಕ್ತೇಸರರಾದ ಕೆ.ಜಿ.ಶ್ಯಾನ್ಭಾಗ್ ಸಮ್ಮಾನಿಸಿದರು. ಚಂದ್ರಮೋಹನ ಕೂಡ್ಲು ಸಮ್ಮಾನ ಪತ್ರವನ್ನು ವಾಚಿಸಿದರು.
ವಾಷರ್ಿಕೋತ್ಸವದ ಸಮಗ್ರ ಕಾರ್ಯಕ್ರಮವನ್ನು ಜಿ.ಕೆ.ಅಡಿಗ ಸೂಲರ್ು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ವಾಲಿಮೋಕ್ಷ ಕಥಾಭಾಗದ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ರಾಮ್ಪ್ರಸಾದ್ ಮಯ್ಯ ಕೂಡ್ಲು, ಸುರೇಂದ್ರ ಕೂಡ್ಲು, ರಿತೇಶ್ ಅಡ್ಕ, ಶಂಕರ ಕೊಮ್ಮಂಗಳ, ಕಿಶೋರ್ ಕುಮಾರ್ ಕೂಡ್ಲು ಹಾಗೂ ರಂಜಿತ್ ಗೋಳಿಯಡ್ಕ ಪಾಲ್ಗೊಂಡಿದ್ದರು.
ಮುಮ್ಮೇಳದಲ್ಲಿ ಸುಂದರಕೃಷ್ಣ ಮಧೂರು, ಅಚ್ಯುತ ಬಲ್ಯಾಯ ಕೂಡ್ಲು, ಜಿ.ಕೆ.ಅಡಿಗ ಸೂಲರ್ು, ಕೃಷ್ಣಮೂತರ್ಿ ಅಡಿಗ ಕೂಡ್ಲು ಹಾಗೂ ಸುರೇಶ್ ಮಣಿಯಾಣಿ ಕೂಡ್ಲು ಭಾಗವಹಿಸಿದರು.
ತರಬೇತಿ ಕೇಂದ್ರದ ಸದಸ್ಯರಿಂದ ಯಕ್ಷಗಾನ ಬಯಲಾಟ ವಿರೋಚನ ಕಾಳಗ ಜರಗಿತು. ಹಿಮ್ಮೇಳದಲ್ಲಿ ತಲ್ಪನಾಜೆ ವೆಂಕಟ್ರಮಣ ಭಟ್, ರಾಮ್ಪ್ರಸಾದ್ ಮಯ್ಯ ಕೂಡ್ಲು, ಹರೀಶ್ ಅಡೂರು, ರಿತೇಶ್ ಅಡ್ಕ ಮತ್ತು ಅಪರ್ಿತ ಶೆಟ್ಟಿ ಕೂಡ್ಲು ಭಾಗವಹಿಸಿದರು. ಮುಮ್ಮೇಳದಲ್ಲಿ ಅಚ್ಯುತ ಬಲ್ಯಾಯ, ಚಂದ್ರಮೋಹನ, ಅರುಣ್ ಪಾಟಾಳಿ, ಕಿಶೋರ್ ಕೂಡ್ಲು, ರಂಜಿತ್ ಗೋಳಿಯಡ್ಕ, ವಿಘ್ನೇಶ್ ಕಾರಂತ, ರಾಕೇಶ್ ಗೋಳಿಯಡ್ಕ, ಸುಜನ್ ಕೂಡ್ಲು, ಹರಿಪ್ರಸಾದ್ ಆಚಾರ್ಯ, ವೈಷ್ಣವಿ, ಶಮಿತಾ ಶಾನ್ಭಾಗ್, ಲತೇಶ್ ಆಚಾರ್ಯ, ಶ್ರೀರಾಮ್, ಆಕಾಶ್ ಕೂಡ್ಲು, ವಿಕಾಸ್ ಜಿ.ಕೆ, ಸುರೇಶ್ ಮಣಿಯಾಣಿ, ಅನ್ವಿತ್ ಕೂಡ್ಲು, ಕೃಷ್ಣರಾಜ ಅಡಿಗ ಕುಂಬ್ಳೆ, ಅಜರ್ುನ್ ಕೂಡ್ಲು, ಶ್ರೀವತ್ಸ ಮತ್ತು ಕೃಷ್ಣ ಭಾಗವಹಿಸಿದರು. ಕೃಷ್ಣಮೂತರ್ಿ ಅಡಿಗ ಸ್ವಾಗತಿಸಿ, ಸುರೇಶ್ ಮಣಿಯಾಣಿ ವಂದಿಸಿದರು. ಗೋಪಾಲಕೃಷ್ಣ ಬಲ್ಯಾಯ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.