HEALTH TIPS

No title

        ರಾಜ್ಯ ಪ್ರವಾಹ 'ತೀವ್ರ ಸ್ವರೂಪದ ವಿಪತ್ತು' ಎಂದು ಘೋಷಿಸಿದ ಕೇಂದ್ರ, ಕೃಷಿ ಸಾಲ ಮರುಪಾವತಿ 1 ವರ್ಷ ಮುಂದೂಡಿಕೆ
     ನವದೆಹಲಿ: ಶತಮಾನದ ಅತ್ಯಂತ ಭೀಕರ ಕೇರಳ ಪ್ರವಾಹವನ್ನು 'ತೀವ್ರ ಸ್ವರೂಪದ ವಿಪತ್ತು' ಎಂದು ಕೇಂದ್ರ ಸಕರ್ಾರ ಸೋಮವಾರ ಘೋಷಿಸಿದೆ.
ಕೇರಳದ ಭೀಕರ ಪ್ರವಾಹ ಮತ್ತು ಭೂ ಕುಸಿತಗಳ ತೀವ್ರತೆ ಮತ್ತು ಪ್ರಮಾಣವನ್ನು ಗಮನಿಸಿದರೆ ಇದೊಂದು 'ತೀವ್ರ ಸ್ವರೂಪದ ವಿಪತ್ತು' ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
    ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ ಅವರು ಕೇರಳ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಒತ್ತಾಯಿಸಿದ್ದರು. ಆದರೆ ಕೇಂದ್ರ ಸಕರ್ಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ಬದಲು 'ತೀವ್ರ ಸ್ವರೂಪದ ವಿಪತ್ತು' ಎಂದು ಘೋಷಿಸಿದೆ.
  ಬೆಳೆ ನಷ್ಟದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕೇರಳದ ರೈತರ ನೆರವಿಗೆ ಧಾವಿಸಿದ ಬ್ಯಾಂಕ್ ಗಳು, ರಾಜ್ಯ ಸಕರ್ಾರದ ಮನವಿಗೆ ಸ್ಪಂದಿಸಿ ಕೃಷಿ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷಗಳ ಕಾಲ ಮುಂದೂಡಿವೆ.
   ಈ ಮಧ್ಯೆ, ನೂರಾರು ಪ್ರವಾಹ ಸಂತ್ರಸ್ಥರ ಜೀವ ಉಳಿಸಿದ ಮೀನುಗಾರರಿಗೆ ರಾಜ್ಯ ಸಕರ್ಾರ ನೀಡಿದ್ದ 3 ಸಾವಿರಿ ರುಪಾಯಿ ಭತ್ಯೆಯನ್ನು ಪಡೆಯಲು ಮೀನುಗಾರರು ನಿರಾಕರಿಸಿದ್ದಾರೆ.
   ಭಾರಿ ಮಳೆ ಹಾಗೂ ಪ್ರವಾಹಕ್ಕೆ ಸಿಲುಕು ದೇವರ ನಾಡಿನಲ್ಲಿ 200ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಅಲಪುಳ, ತ್ರಿಶೂರ್ ಮತ್ತು ಎನರ್ಾಕುಲಂ ಜಿಲ್ಲೆಗಳಲ್ಲಿ ಇನ್ನೂ ನೂರಾರು ಮಂದಿ ತಮ್ಮ ಮನೆಯಲ್ಲಿ ಆಹಾರ, ಕುಡಿಯಲು ನೀರು ಸಿಗದೆ ಪರದಾಡುತ್ತಿದ್ದಾರೆ.
  ಸೋಮವಾರ  ಅಲ್ಪ ಮಟ್ಟಿಗೆ ಮಳೆ ತಗ್ಗಿದ್ದು, ರಕ್ಷಣಾ ಕಾಯರ್ಾಚರಣೆ ಭರದಿಂದ ಸಾಗುತ್ತಿದೆ. ಸೋಮವಾರ 10 ಸಾವಿರ ಮಂದಿಯನ್ನು ರಕ್ಷಿಸಲಾಗಿದ್ದು, ಇದುವರೆಗೆ 38 ಸಾವಿರ ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
   ರಾಜ್ಯದ 3,734 ಕ್ಯಾಂಪ್ ಗಳಲ್ಲಿ ಒಟ್ಟು 8,46,680 ಸಂತ್ರಸ್ಥರು ಇದ್ದು, ರಕ್ಷಣಾ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸುವುದು ನಮ್ಮ ಮುಂದಿನ ಗುರಿ ಎಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಹೇಳಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries