HEALTH TIPS

No title

                  ಚಂದ್ರಯಾನ-2 ವಿಳಂಬ : ಶುರುವಾಯ್ತು ಭಾರತ, ಇಸ್ರೇಲ್ ಪೈಪೋಟಿ
    ನವದೆಹಲಿ: ಭಾರತದ ಮಹತ್ವಾಕಾಂಕ್ಷಿಯ ಚಂದ್ರಯಾನ-2  ಯೋಜನೆಯಲ್ಲಿ ವಿಳಂಬವಾಗಿದ್ದು,  ಮುಂದಿನ ವರ್ಷಕ್ಕೆ ಮುಂದೂಡಲಾಗುತ್ತಿದೆ.
      ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಚಂದ್ರಯಾನ -2 ಯೋಜನೆ ಕೈಗೊಳ್ಳಲು ಸಿದ್ಧತೆ ನಡೆಸಲಾಗಿತ್ತು. ಆದರೆ, ತಾಂತ್ರಿಕ ಕಾರಣದಿಂದಾಗಿ ಅದನ್ನು ಮುಂದಿನ ವರ್ಷ ಕಾರ್ಯಗತಗೊಳಿಸಲು  ಯೋಜನೆ ಹಾಕಿಕೊಳ್ಳಲಾಗಿದೆ.
    ಚಂದ್ರಯಾನ-2 ಯೋಜನೆ ಈ ವರ್ಷದ ಅಕ್ಟೋಬರ್ ತಿಂಗಳಿನಿಂದ  ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿರುವುದನ್ನು ಯು ಎರ್ ರಾವ್ ಬಾಹ್ಯಾಕಾಶ ಕೇಂದ್ರದ ನಿದರ್ೇಶಕ ಡಾ. ಅಣ್ಣದೂರೈ ಸ್ಪಷ್ಟಪಡಿಸಿದ್ದಾರೆ.
     ಈ  ವಿಳಂಬತೆ  ಈಗ ಇಸ್ರೇಲ್ ದೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಭಾರತಕ್ಕಿಂತ ಮೊದಲೇ  ಚಂದ್ರಯಾನ ಆರಂಭಿಸಲು  ಇಸ್ರೇಲ್  ಮುಂದಾಗಿದೆ.ಇಸ್ರೇಲ್ ಮೂಲದ  ಸ್ಪೆಸ್ ಐಎಲ್ ಕಂಪನಿ  ಇದೇ ವರ್ಷದ ಡಿಸೆಂಬರ್ ತಿಂಗಳಲ್ಲಿ  ಚಂದ್ರಯಾನ ಆರಂಭಿಸಲು ಪ್ರಯತ್ನಿಸುತ್ತಿದೆ.
   ಅಮೆರಿಕಾದ ಪಾಲ್ಕನ್ -9 ರಾಕೆಟ್ ಗಳನ್ನು ಬಳಸಿಕೊಂಡು ಇಸ್ರೇಲ್ ಚಂದ್ರಯಾನ-2 ಆರಂಭಿಸುತ್ತಿದ್ದು, 2019 ಫೆಬ್ರವರಿ 13 ರಂದು ಚಂದ್ರನ ಕಕ್ಷೆ ಪ್ರವೇಶಿಸುವ ಭರವಸೆಯನ್ನು ಇಸ್ರೇಲ್ ಹೊಂದಿದೆ. ಚಂದ್ರನ ಮೇಲೆ ಇಳಿಯಲು  ಈಗ ಭಾರತ ಮತ್ತು ಇಸ್ರೇಲ್ ನಡುವೆ ಪೈಪೋಟಿ ಶುರುವಾಗಿದ್ದು, ಯಾರು  ಮೊದಲು ಇಳಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries