HEALTH TIPS

No title

      ಪೆರ್ಲದಲ್ಲಿ ಇಂದು ರಾಷ್ಟ್ರೀಯ ಭಾವೈಕ್ಯತಾ ಕಾವ್ಯ ಲಹರಿ
  ಪೆರ್ಲ: ಪೆರ್ಲದ ನೇತಾಜಿ ಸಾರ್ವಜನಿಕ ಗ್ರಂಥಾಲಯದ ಆಶ್ರಯದಲ್ಲಿ ಒಂದು ದೇಶ, ಒಂದೇ ಆಶಯ, ಹಲವು ಕವಿತೆಗಳು ಎಂಬ ಪರಿಕಲ್ಪನೆಯಡಿ ರಾಷ್ಟ್ರೀಯ ಭಾವೈಕ್ಯತಾ ಕಾವ್ಯ ಲಹರಿ ಎಂಬ ವಿಶಿಷ್ಟ ಕವಿಗೋಷ್ಠಿ ಇಂದು ಅಪರಾಹ್ನ 2 ರಿಂದ ಎಣ್ಮಕಜೆ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಲಿದೆ.
   ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕವಿಗೋಷ್ಠಿಯನ್ನು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಪ್ರಧಾನ ಕಾರ್ಯದಶರ್ಿ ಅಹಮ್ಮದ್ ಹುಸೈನ್ ಪಿ.ಕೆ ಉದ್ಘಾಟಿಸುವರು. ಭಾರತೀಯ ಸೇನಾ ಯೋಧ ಸದಾಶಿವ ನಾಯ್ಕ ಖಂಡಿಗೆ, ಶಿಕ್ಷಕಿ ಸಿಸ್ಟರ್ ಜಾಸ್ಮಿನ್ ಕಯ್ಯಾರ್, ಶಿಕ್ಷಕಿ ತಾಹಿರಾ ಅಶ್ರಫ್ ಪೈವಳಿಕೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ನೇತಾಜಿ ಗ್ರಂಥಾಲಯದ ಅಧ್ಯಕ್ಷ ರಾಮಕೃಷ್ಣ ರೈ ಕುದ್ವ, ಕಾರ್ಯದಶರ್ಿ, ರಂಗನಟ, ಶಿಕ್ಷಕ ಉದಯ ಸಾರಂಗ್ ಉಪಸ್ಥಿತರಿರುವರು.
  ಭಾವೈಕ್ಯತಾ ಕಾವ್ಯ ಲಹರಿಯಲ್ಲಿ ಹರೀಶ್ ಪೆರ್ಲ, ಪದ್ಮಾವತಿ ಏದಾರು, ಸಂದೀಪ್ ಬದಿಯಡ್ಕ, ಸುಭಾಶ್ ಪೆರ್ಲ, ಮಣಿರಾಜ್ ವಾಂತಿಚ್ಚಾಲ್, ಪ್ರೀಯಾ ಸಾಯ, ಮಮತಾ ಬಜಕ್ಕೂಡ್ಳು, ಶ್ರೀನಿವಾಸ ಸ್ವರ್ಗ, ವಸಂತಲಕ್ಷ್ಮೀ ಪುತ್ತೂರು, ನಾರಾಯಣ ಕುಂಬ್ರ, ಶಾಂತಾ ರವಿ ಕುಂಟಿನಿ, ಚೇತನಾ ಕುಂಬಳೆ, ಜ್ಯೋಸ್ನ್ಯಾ ಎಂ.ಕಡಂದೇಲು, ಹರೀಶ್ ಸುಲಾಯ ಒಡ್ಡಂಬೆಟ್ಟು, ಬಾಲಕೃಷ್ಣ ಬೇರಿಕೆ, ರಿತೇಶ್ ಕಾಟುಕುಕ್ಕೆ, ಚಿನ್ಮಯಕೃಷ್ಣ ಕಡಂದೇಲು, ವಿದ್ಯಾವಾಣಿ ಮಠದಮೂಲೆ, ಡಾ.ರವಿಶಂಕರ ನೆಗಳಗುಳಿ, ಚಿತ್ರರಂಜನ್ ಕಡಂದೇಲು, ಡಾ.ಎಸ್.ಎನ್.ಭಟ್ ಪೆರ್ಲ, ಮಧುರಕಾನನ ಗಣಪತಿ ಭಟ್ ದಭರ್ೆ, ನಿರ್ಮಲ ಖಂಡಿಗೆ, ಡಾ.ಪ್ರಶಾಂತ್ ಕುಮಾರ್ ಕಲ್ಲಡ್ಕ, ಶ್ಯಾಮಲಾ ರವಿರಾಜ್ ಕುಂಬಳೆ, ದಯಾನಂದ ರೈ ಕಲ್ವಾಜೆ, ಪ್ರಭಾವತಿ ಕೆದಿಲಾಯ ಪುಂಡೂರು ಮೊದಲಾದ ಕವಿಗಳು ಭಾಗವಹಿಸುವರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries