HEALTH TIPS

No title

                    ಬಂಬ್ರಾಣ ಜಿಬಿಎಲ್ಪಿ ಶಾಲಾ ಹಿತಸಂರಕ್ಷಣಾ ಸಮಿತಿ ರಚನೆ
     ಕುಂಬಳೆ: ಬಂಬ್ರಾಣ ಜಿಬಿಎಲ್ಪಿ ಶಾಲೆಯ ಸ್ಥಳದಲ್ಲಿ  ಆವರಣ ಗೋಡೆ ನಿಮರ್ಿಸಿ ಶಾಲಾ ಸ್ಥಳವನ್ನು  ಸಂರಕ್ಷಿಸಲು ಕಾಸರಗೋಡು ಜಿಲ್ಲಾಧಿಕಾರಿಯವರ ನಿದರ್ೇಶ ಪ್ರಕಾರ ಬಂಬ್ರಾಣ ಗ್ರಾಮಾಧಿಕಾರಿಗಳಿಗೆ 2018ನೇ ಜನವರಿ 8ರಂದು ಪತ್ರವೊಂದನ್ನು  ಕಳುಹಿಸಲಾಗಿತ್ತು. ಈ ಪತ್ರವನ್ನು  ಬಳಿಕ ಬಂಬ್ರಾಣ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೀಡಲಾಗಿತ್ತು. ಆ ಪತ್ರದಲ್ಲಿ  ಆವರಣ ಗೋಡೆ ನಿಮರ್ಿಸಲು ಹಾಗೂ ಶಾಲಾ ಸ್ಥಳದಲ್ಲಿ  ಖಾಸಗಿ ವ್ಯಕ್ತಿಯೋರ್ವರು ತನ್ನ  ಅಗತ್ಯಕ್ಕಾಗಿ ನಿಮರ್ಿಸಿದ ಕೊಳವೆ ಬಾವಿಯನ್ನು  ತೆರವುಗೊಳಿಸಲು ಸ್ಪಷ್ಟ  ಸೂಚನೆ ಕೊಡಲಾಗಿತ್ತು. ಆದರೆ ಈ ನಿಟ್ಟಿನಲ್ಲಿ  ಇಲ್ಲಿಯ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಂಬ್ರಾಣ ಜಿಬಿಎಲ್ಬಿ ಶಾಲೆಯ ಹಿತಸಂರಕ್ಷಣಾ ಸಮಿತಿಯು ತಿಳಿಸಿದೆ.
    ಆವರಣ ಗೋಡೆ ಇಲ್ಲದೆ ಇರುವುದರಿಂದ ಶಾಲಾ ಮೈದಾನದೊಳಗೆ ಹಲವು ಭಾಗಗಳಿಂದ ಖಾಸಗಿ ವಾಹನಗಳು ಪ್ರವೇಶಿಸುತ್ತಿವೆ. ಇದರಿಂದಾಗಿ ಶಾಲಾ ಮಕ್ಕಳಿಗೆ ಅಪಘಾತ ಸಂಭವಿಸುವ ಸಾಧ್ಯತೆಯೂ ಹೆಚ್ಚಾಗಿದೆ. ಈ ಮಧ್ಯೆ ಶಾಲಾ ಸ್ಥಳದಲ್ಲಿ  ಕೊಳವೆ ಬಾವಿ ಕೊರೆದ ಖಾಸಗಿ ವ್ಯಕ್ತಿಯು ಈ ಕೊಳವೆ ಬಾವಿಯನ್ನು  ತನ್ನ  ಸ್ವಾಧೀನದಲ್ಲಿರುವಂತೆ ತನ್ನ  ಮನೆಗೆ ಹೊಂದಿಕೊಂಡು ಆವರಣ ಗೋಡೆಯನ್ನು  ನಿಮರ್ಿಸುವ ಸಮಯದಲ್ಲಿ  ಇದನ್ನು  ಆಕ್ಷೇಪಿಸಿದ ಬಂಬ್ರಾಣ ಶಾಲಾ ಅಧ್ಯಾಪಕರೊಬ್ಬರನ್ನು  ಕುಂಬಳೆ ಗ್ರಾಮ ಪಂಚಾಯತಿ ಆಡಳಿತ ಸಮಿತಿಯ ಸದಸ್ಯರೊಬ್ಬರು ಗ್ರಾಮ ಪಂಚಾಯತಿ ಕಚೇರಿಗೆ ಕರೆಸಿ ತಾಕೀತು ನೀಡಿ ಬೆದರಿಕೆ ಒಡ್ಡಿದ್ದರು ಎಂದು ಹಿತಸಂರಕ್ಷಣಾ ಸಮಿತಿ ತಿಳಿಸಿದೆ.
   ಶಾಲಾ ಸ್ಥಳವನ್ನು  ಸಂರಕ್ಷಿಸಿ ಆವರಣ ಗೋಡೆ ನಿಮರ್ಿಸುವ ನಿಟ್ಟಿನಲ್ಲಿ  ಯೋಜಿಸಿದ ಸದ್ರಿ ಶಾಲಾ ಅಧ್ಯಾಪಕರೋರ್ವರನ್ನು  ಕಾನೂನುಬಾಹಿರವಾಗಿ ಗ್ರಾಮ ಪಂಚಾಯತಿಗೆ ಕರೆಸಿ ತಾಕೀತು ನೀಡಿದ ಪಂಚಾಯತ್ ಆಡಳಿತ ಸಮಿತಿಯ ಸದಸ್ಯನ ವಿರುದ್ಧ  ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಹಿತಸಂರಕ್ಷಣಾ ಸಮಿತಿ ಹೇಳಿದೆ. ಅಲ್ಲದೆ ಸದ್ರಿ ಶಾಲಾ ಹಿತಸಂರಕ್ಷಣಾ ದೃಷ್ಟಿಯಿಂದ ಬಂಬ್ರಾಣ ಪರಿಸರದ ನಾಗರಿಕರು ಹಾಗೂ ಹಳೆ ವಿದ್ಯಾಥರ್ಿಗಳು ಸೇರಿ ಬಂಬ್ರಾಣ ಜಿಬಿಎಲ್ಪಿ ಶಾಲೆಯ ಹಿತ ಸಂರಕ್ಷಣಾ ಸಮಿತಿಯನ್ನು ರೂಪಿಸಲಾಗಿದೆ.
   ಸಮಿತಿಯ ಅಧ್ಯಕ್ಷರಾಗಿ ಜಯರಾಮ ಪೂಜಾರಿ ಬಂಬ್ರಾಣ, ಉಪಾಧ್ಯಕ್ಷರಾಗಿ ರುಕ್ಮಾಕರ ಶೆಟ್ಟಿ  ಬಂಬ್ರಾಣಬಯಲು, ಗಣೇಶ್ ಜಿ.ಕೆ.ಬಂಬ್ರಾಣ, ಪ್ರಧಾನ ಕಾರ್ಯದಶರ್ಿಯಾಗಿ ನಾಗೇಶ ಆಚಾರ್ಯ ಬಂಬ್ರಾಣ, ಕಾರ್ಯದಶರ್ಿಗಳಾಗಿ ಮನೋಹರ ಬಂಬ್ರಾಣ, ಪ್ರವೀಣ ಕೆ.ಸಿ.ಕಳ್ಕುಳ, ಕೋಶಾಧಿಕಾರಿಯಾಗಿ ಲಿಖಿತ್ ಆಳ್ವ ಬಂಬ್ರಾಣ, ಸಂಚಾಲಕರಾಗಿ ಜಯಪ್ರಕಾಶ್ ಬಂಬ್ರಾಣ, ಸಹ ಸಂಚಾಲಕರಾಗಿ ಪ್ರದೀಪ್ಕುಮಾರ್ ಬಂಬ್ರಾಣ ಹಾಗೂ 11 ಮಂದಿಯ ಸದಸ್ಯರನ್ನು  ಒಳಗೊಂಡ ಕಾರ್ಯಕಾರಿ ಸಮಿತಿಯನ್ನು  ಆರಿಸಲಾಯಿತು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries