HEALTH TIPS

No title

                     ಸ್ವಚ್ಛ ಸವರ್ೇಕ್ಷಣ ಗ್ರಾಮೀಣ-2018 ಸವರ್ೆಗೆ ಸಜ್ಜು
                 ಜಿಲ್ಲೆಯ ಹಲವು ಗ್ರಾ.ಪಂ ಗಳಿಗೆ ಶುಚಿತ್ವ ಮಿಶನ್ ತಜ್ಞರ ತಂಡ
     ಕುಂಬಳೆ: ರಾಜ್ಯದ ಎಲ್ಲ ಜಿಲ್ಲೆಗಳ ಪ್ರತಿಯೊಂದು ಗ್ರಾ.ಪಂಗಳಲ್ಲಿ ಪರಿಸರ ಸ್ವಚ್ಛತಾ ಕಾಳಜಿ ಬಗ್ಗೆ ಸವರ್ೇ ನಡೆಯಲಿದೆ. ನಿರ್ಮಲ ಗ್ರಾಮದ ಕನಸನ್ನು ಈಡೇರಿಸಲು ಕೈಗೊಂಡ ಕ್ರಮಗಳ ಬಗ್ಗೆ ಸವರ್ೇ ಏರ್ಪಡಿಸಿ ಪ್ರಶಸ್ತಿ ಘೋಷಿಸುವ ಯೋಜನೆಗೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ. ಸ್ವತಂತ್ರ ಏಜೆನ್ಸಿಯು ನಡೆಸುವ ಸವರ್ೇ ಕಾರ್ಯವನ್ನು ಪ್ರತಿ ಗ್ರಾ.ಪಂಗಳಲ್ಲಿ ನಡೆದ ವಿವಿಧ ಶುಚಿತ್ವ ಯೋಜನೆಗಳ ಅನುಷ್ಠಾನ, ಸ್ವಚ್ಛತಾ ಕಾರ್ಯದಲ್ಲಿ ಸ್ಥಳೀಯ ಘಟಕಗಳ ಸಹಭಾಗಿತ್ವವನ್ನು ಗಮನದಲ್ಲಿರಿಸಿ ಸವರ್ೇ ಮುನ್ನಡೆಸಲಾಗುವುದು ಎಂದು ಶುಚಿತ್ವ ಮಿಶನ್ ಅಧಿಕಾರಿಗಳು ತಿಳಿಸಿದ್ದಾರೆ.
   ಕೇಂದ್ರ ಕುಡಿನೀರು ಮತ್ತು ನೈರ್ಮಲ್ಯ ಮಂತ್ರಾಲಯ ಆಯೋಜಿಸಿರುವ 'ಸ್ವಚ್ಛ ಸವರ್ೇಕ್ಷಣ ಗ್ರಾಮೀಣ 2018' ಶೀಘ್ರದಲ್ಲೇ ಜಾರಿಗೆ ಬರಲಿದೆ. ಶಾಲೆಗಳು, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾ.ಪಂ ಪರಿಸರ, ಸಮುದ್ರ ತೀರ ಪ್ರದೇಶ, ಆರಾಧನಾಲಯಗಳು ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿನ ಪರಿಸರ ಸ್ವಚ್ಛತೆಯನ್ನು ಗಮನದಲ್ಲಿರಿಸಿ ಸವರ್ೇ ನಡೆಸಲಾಗುವುದು. ಶುಚಿತ್ವದ ವಿಷಯದಲ್ಲಿ ಜನಸಾಮಾನ್ಯರ ಕಾರ್ಯ ಚಟುವಟಿಕೆ, ಸ್ವಚ್ಛ ಭಾರತ್ ಮಿಶನ್ ಯೋಜನೆಯನ್ನು ಮುನ್ನಡೆಸುವಲ್ಲಿ ಸಾರ್ವಜನಿಕರ ಅಭಿಪ್ರಾಯ ಮೊದಲಾದ ಮಾನದಂಡಗಳ ಮೂಲಕ ಉತ್ತಮ ಶುಚಿತ್ವ ಗ್ರಾಮ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಮಿಶನ್ ತಿಳಿಸಿದೆ. ಜಿಲ್ಲಾವಾರು ವಿವಿಧ ಗ್ರಾ.ಪಂಗಳಲ್ಲಿ ಸವರ್ೇ ಕಾರ್ಯದ ನಂತರ ರ್ಯಾಂಕ್ ನಿಶ್ಚಯಿಸಲಾಗುತ್ತದೆ. ಸ್ಥಳೀಯಾಡಳಿತ ಪರಿಸರದಲ್ಲಿ ಶೌಚಾಯಗಳ ಲಭ್ಯತೆ, ಮಾಲಿನ್ಯ ಸಂಸ್ಕರಣೆ ಕ್ರಮಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಮಿಶನ್ ತಿಳಿಸಿದೆ. ಆ.31 ರ ತನಕ ನಡೆಯುವ ಸವರ್ೇ ಕಾರ್ಯ ನಡೆಯಲಿದ್ದು, ಅ. 2 ರಂದು ನಡೆಯುವ ಗಾಂಧಿ ಜಯಂತಿ ದಿನಾಚರಣೆಯಂದು ಉತ್ತಮ ನಿರ್ಮಲ ಗ್ರಾ.ಪಂ ಪ್ರಶಸ್ತಿ ಘೋಷಿಸಲಾಗುವುದು ಎಂದು ಮಿಶನ್ ಅಧಿಕೃತರು ತಿಳಿಸಿದ್ದಾರೆ.
       ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಆನ್ಲೈನ್ ಮೂಲಕ:
   ಸ್ವಚ್ಛ ಗ್ರಾಮ ಪರಿಕಲ್ಪನೆ ಯೋಜನೆಗಳ ಅನುಷ್ಠಾನ, ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಸಂಬಂಧಪಟ್ಟ ನಾಲ್ಕು ಮುಖ್ಯ ಪ್ರಶ್ನೆಗಳಿಗೆ ಸಾರ್ವಜನಿಕರು ಆನ್ಲೈನ್ ಮೂಲಕ ಉತ್ತರಿಸಬಹುದಾಗಿದೆ. ಪ್ಲೇ ಸ್ಟೋರ್ ಎಸ್ಎಸ್ಜಿ 18 ಎಂಬ ಆ್ಯಪ್ ಮಾಹಿತಿ ಸಂಗ್ರಹದಲ್ಲಿ ಸಹಕಾರಿಯಾಗಿದ್ದು, ಸಾರ್ವಜನಿಕರು ಆ್ಯಪ್ ಉಪಯೋಗಿಸಿ ತಮ್ಮ ಅಭಿಪ್ರಾಯವನ್ನು ಮುಂದಿಡಬಹುದಾಗಿದೆ. ಭಾಷೆಯ ಆಯ್ಕೆಯ ಅವಕಾಶವೂ ಆ್ಯಪ್ನಲ್ಲಿದೆ. ಕೇಂದ್ರ ಸರಕಾರ ಹಮ್ಮಿಕೊಂಡಿರುವ ಈ ಸವರ್ೇಯಲ್ಲಿ ಜಿಲ್ಲೆಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಗಳಾಗಿ ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಬೇಕು ಎಂದು ಜಿಲ್ಲಾ ಶುಚಿತ್ವ ಮಿಶನ್ ಸಂಯೋಜಕರು ತಿಳಿಸಿದ್ದಾರೆ.
      ಅ. 6 ರಂದು ವಿಶೇಷ ಸಭೆ, ವಿಚಾರಗೋಷ್ಠಿ: 
   ಸ್ವಚ್ಛ ಸವರ್ೇಕ್ಷಣ ಗ್ರಾಮೀಣ 2018 ಸಂಬಂಧಪಟ್ಟಂತೆ, ಪರಿಸರ ಸ್ವಚ್ಛತೆ ಹಾಗೂ ನಿರ್ಮಲ ಗ್ರಾಮ ಯೋಜನೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಶೇಷ ಸಭೆ ಹಾಗೂ ವಿಚಾರಗೋಷ್ಠಿಯು ಆ. 6 ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ಬೆಳಗ್ಗೆ 10.30 ಕ್ಕೆ ಆರಂಭಗೊಳ್ಳುವ ಸಭೆಯನ್ನು ಜಿ.ಪಂ ಅಧ್ಯಕ್ಷ ಎ.ಜಿ.ಸಿ ಬಶೀರ್ ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಸಭೆಯ ಅಧ್ಯಕ್ಷತೆ ವಹಿಸುವರು. ಜನಪ್ರತಿನಿಧಿಗಳು ಹಾಗೂ ಮಿಶನ್ ಅಧಿಕಾರಿಗಳು ವಿಚಾರಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. 
   ಕೇಂದ್ರದ ಸ್ವಚ್ಛ ಭಾರತ್ ಮಿಶನ್ ಮತ್ತು ರಾಜ್ಯ ಸರಕಾರ ಹಮ್ಮಿಕೊಂಡಿರುವ ಹರಿತ ಕೇರಳ ಮಿಶನ್ ಯೋಜನೆಗಳು ಜಿಲ್ಲೆಯಲ್ಲಿ ಚಾಲ್ತಿಯಲ್ಲಿವೆ. ಪರಿಸರ ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವ ಕಾರ್ಯವನ್ನು ಜಿಲ್ಲಾ ಶುಚಿತ್ವ ಮಿಶನ್ ಹಾಗೂ ಕುಟುಂಬಶ್ರೀ ಮಿಶನ್ ಮುನ್ನಡೆಸಿವೆ. ಮಾಲಿನ್ಯ ಮತ್ತು ರೋಗ ನಿಯಂತ್ರಣ, ಸಾರ್ವಜನಿಕ ಶುಚಿತ್ವ ಕಾರ್ಯ ವೈಖರಿ, ಗೃಹಶುದ್ಧಿ- ಪರಿಹಾರ ಕಾರ್ಯಗಳು, ಜಲಶುದ್ಧಿ, ಮಳೆಗಾಲದಲ್ಲಿ ಸೊಳ್ಳೆ ನಿಯಂತ್ರಣ ಕ್ರಮಗಳು, ಪ್ಲಾಸ್ಟಿಕ್ ನಿಮರ್ೂಲನೆ- ಅನುಸರಿಸಬೇಕಾದ ಕ್ರಮ ಸೇರಿದಂತೆ ಮಾಲಿನ್ಯ ಸಂಸ್ಕರಣೆ ವಿಧಾನಗಳ ಬಗ್ಗೆ ಶುಚಿತ್ವ ಮಿಶನ್ ಅರಿವು ಮೂಡಿಸಿದೆ. ಕುಟುಂಬಶ್ರೀ ಮಿಶನ್ ಮೂಲಕ ನಡೆದ ಮಾಲಿನ್ಯದಿಂದ ವಿಮೋಚನೆ ಅಭಿಯಾನ ಕಾರ್ಯಕ್ರಮಗಳು ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸಲು ಸಫಲವಾಗಿವೆ.



       

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries