HEALTH TIPS

No title

            ಬಹುನಿರೀಕ್ಷಿತ ಅಂಚೆ ಪೇಮೆಂಟ್ ಬ್ಯಾಂಕ್ಗೆ 21ರಂದು ಪ್ರಧಾನಿ ಮೋದಿ ಚಾಲನೆ
      ಹೊಸದಿಲ್ಲಿ: ಭಾರತೀಯ ಅಂಚೆಯ ಬಹುನಿರೀಕ್ಷಿತ ಪಾವತಿ ಬ್ಯಾಂಕ್ ಸೇವೆ (ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್- ಐಪಿಪಿಬಿ)ಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 21ರಂದು ಚಾಲನೆ ನೀಡಲಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ಶಾಖೆ ಅಂದು ಆರಂಭವಾಗಲಿದ್ದು, ಗ್ರಾಮೀಣ ಹಣಕಾಸು ಸೇವೆಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
    'ಐಪಿಪಿಬಿ ಸೇವೆಗಳನ್ನು ಆಗಸ್ಟ್ 21ರಂದು ಉದ್ಘಾಟಿಸಲು ಪ್ರಧಾನಿ ಒಪ್ಪಿಕೊಂಡಿದ್ದಾರೆ. ಎರಡು ಶಾಖೆಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಉಳಿದ 648 ಶಾಖೆಗಳನ್ನು (ಪ್ರತೀ ಜಿಲ್ಲೆಗೆ ಒಂದರಂತೆ) ದೇಶಾದ್ಯಂತ ಅಂದು ಆರಂಭಿಸಲಾಗುವುದು' ಎಂದು ಸಂಪರ್ಕ ಸಚಿವಾಲಯದ ಹಿರಿಯ ಅಧಿಕಾರಿ ಪಿಟಿಐಗೆ ತಿಳಿಸಿದರು.
    ಅಂಚೆ ಇಲಾಖೆ ದೇಶಾದ್ಯಂತ 1.55 ಲಕ್ಷ ಅಂಚೆ ಕಚೇರಿಗಳನ್ನು ಹೊಂದಿದ್ದು, ಅತಿದೊಡ್ಡ ಜಾಲ ಹೊಂದಿವೆ. ಗ್ರಾಮೀನ ಜನತೆಗೆ ಬ್ಯಾಂಕಿಂಗ್ ಸೇವೆ ಒದಗಿಸಲು ಅಂಚೆ ಜಾಲ ನೆರವಾಗಲಿದೆ. ಎಲ್ಲ 1.55 ಲಕ್ಷ ಅಂಚೆ ಕಚೇರಿಗಳನ್ನು ಈ ವಷರ್ಾಂತ್ಯದೊಳಗೆ ಐಪಿಪಿಬಿ ಸೇವಾ ಜಾಲದ ಜತೆ ಜೋಡಿಸಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಅಧಿಕಾರಿ ತಿಳಿಸಿದರು. ಇದರಿಂದ ಗ್ರಾಮ ಮಟ್ಟದಲ್ಲಿ ಅಸ್ತಿತ್ವ ಹೊಂದಿರುವ ಅತಿದೊಡ್ಡ ಬ್ಯಾಂಕಿಂಗ್ ಜಾಲ ಇದಾಗಲಿದೆ.
    650 ಶಾಖೆಗಳಲ್ಲಿ ಐಪಿಪಿಬಿ ಸೇವೆ ಆರಂಭವಾಗಲಿದೆ. ಜತೆಗೆ ಅಂಚೆ ಕಚೇರಿಗಳ ಪಕ್ಕದಲ್ಲೇ 3,250 ಆಕ್ಸೆಸ್ ಪಾಯಿಂಟ್ಗಳನ್ನು ಸ್ಥಾಪಿಸಲಾಗುವುದು. ಇಷ್ಟೇ ಅಲ್ಲದೆ, ಗ್ರಾಮೀನ ಹಾಗೂ ನಗರ ಪ್ರದೇಶಗಳಲ್ಲಿ 11,000 ಅಂಚೆ ಸಿಬ್ಬಂದಿ (ಪೋಸ್ಟ್ಮೆನ್) ಜನತೆಯ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸಲಿದ್ದಾರೆ ಎಂದು ಐಪಿಪಿಬಿ ಸಿಇಓ ಸುರೇಶ್ ಸೇಥಿ ಕಳೆದ ವಾರ ಪ್ರಕಟಿಸಿದ್ದರು.
   17 ಕೋಟಿ ಅಂಚೆ ಉಳಿತಾಯ ಖಾತೆಗಳನ್ನು (ಪಿಎಸ್ಬಿ) ಐಪಿಪಿಬಿ ಜಾಲಕ್ಕೆ ಸೇರ್ಪಡೆಗೊಳಿಸಲು ಸರಕಾರ ಅನುಮತಿ ನೀಡಿದೆ. ಗ್ರಾಮೀಣ ಮಟ್ಟದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಐಪಿಪಿಬಿ ಒದಗಿಸಲಿದೆ. ಮೊಬೈಲ್ ಆಪ್ ಮೂಲಕ ಅಥವಾ ಅಂಚೆ ಕಚೇರಿಗೆ ಭೇಟಿ ನೀಡುವ ಮೂಲಕ ಯಾವುದೇ ಖಾತೆಗೆ ಹಣ ವಗರ್ಾಯಿಸಲು ಐಪಿಪಿಬಿ ಅವಕಾಶ ಒದಗಿಸಲಿದೆ.
   ಏರ್ಟೆಲ್ ಮತ್ತು ಪೇಟಿಎಂ ಬಳಿಕ ಪಾವತಿ ಬ್ಯಾಂಕ್ ಸೇವೆಗೆ ಅನುಮತಿ ಪಡೆದುಕೊಂಡ ಮೂರನೇ ಸಂಸ್ಥೆ ಅಂಚೆ ಪಾವತಿ ಬ್ಯಾಂಕ್ ಆಗಿದೆ. ಪೇಮೆಂಟ್ ಬ್ಯಾಂಕ್ಗಳು ವ್ಯಕ್ತಿಗಳು ಮತ್ತು ಸಣ್ಣ ವ್ಯವಹಾರಸ್ಥರ ಪ್ರತಿ ಖಾತೆಗೆ 1 ಲಕ್ಷ ರೂ ವರೆಗೆ ಠೇವಣಿ ಸ್ವೀಕರಿಸಬಹುದಾಗಿದೆ.
  ಆರ್ಟಿಜಿಎಸ್, ಎನ್ಇಎಫ್ಟಿ, ಐಎಂಪಿಎಸ್ ಮೂಲಕ ಹಣ ವಗರ್ಾವಣೆಗೆ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಪರವಾನಗಿ ಪಡೆದುಕೊಂಡಿದೆ. ನರೇಗಾ ವೇತನ, ಸಬ್ಸಿಡಿಗಳು, ಪಿಂಚಣಿ ಇತ್ಯಾದಿಗಳನ್ನು ವಿತರಿಸಲು ಸರಕಾರ ಅಂಚೆ ಪೇಮೆಂಟ್ ಬ್ಯಾಂಕ್ ಸೇವೆಯನ್ನು ಬಳಸಿಕೊಳ್ಳಲಿದೆ.
   ಐಪಿಪಿಬಿ ಆಪ್ ಕೂಡ ಅದೇ ದಿನ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮೊಬೈಲ್ ರೀಚಾಜರ್್, ಬಿಲ್ ಪಾವತಿ, ವಿದ್ಯುತ್ ಬಿಲ್, ಡಿಟಿಎಚ್ ಸೇವೆಗಳ ಪಾವತಿ, ಕಾಲೇಜು ಶುಲ್ಕಗಳು ಇತ್ಯಾದಿ ಸೇರಿದಂತೆ 100ಕ್ಕೂ ಹೆಚ್ಚು ಸಂಸ್ಥೆಗಳಿಗೆ ಪಾವತಿ ಸೇವೆಯನ್ನು ಐಪಿಪಿಬಿ ಒದಗಿಸಲಿದೆ. ಪ್ರಸ್ತುತ ಭಾರತದ ರಾಷ್ಟ್ರೀಯ ಪಾವತಿ ನಿಗಮದ (ಎನ್ಸಿಪಿಐ) ಭಾರತ್ ಬಿಲ್ ಪೇಮೆಂಟ್ ವ್ಯವಸ್ಥೆಯಡಿ ಹಲವು ಪಾವತಿ ವ್ಯವಸ್ಥೆಗಳು ಲಭ್ಯವಿವೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries