HEALTH TIPS

No title

                 ಸಂಪುಷ್ಟ  ಕೇರಳ ಯೋಜನೆಗೆ 23.81 ಕೋಟಿ ರೂ.
                   ನಾಲ್ಕು ಜಿಲ್ಲೆಗಳಲ್ಲಿ  ಪ್ರಥಮ ಹಂತದಲ್ಲಿ  ಜಾರಿ
    ತಿರುವನಂತಪುರ:  ಕೇರಳದಲ್ಲಿ  ಮಹಿಳೆಯರು ಮತ್ತು  ಮಕ್ಕಳು ಇನ್ನು  ಮುಂದೆ ಪೋಷಕ ಆಹಾರ ಕೊರತೆಯಿಂದ ಅಸ್ವಸ್ಥರಾಗುವ ಸ್ಥಿತಿ ಬರದು ಎಂದು ವಿಶ್ಲೇಷಿಸಲಾಗಿದೆ. ಈ ನಿಮಿತ್ತ  ಕೇಂದ್ರ ಮತ್ತು  ಕೇರಳ ಸರಕಾರಗಳ ಜಂಟಿ ಸಹಭಾಗಿತ್ವದಲ್ಲಿ  ಈ ನಿಟ್ಟಿನಲ್ಲಿ  ವಿಶೇಷವಾದ ಯೋಜನೆಯೊಂದನ್ನು  ಜಾರಿಗೆ ತರಲಾಗಿದೆ.
ಮಹಿಳೆಯರು ಹಾಗೂ ಮಕ್ಕಳ ಪೋಷಕ ಆಹಾರ ಕೊರತೆ ಪರಿಹರಿಸುವ ಉದ್ದೇಶದೊಂದಿಗೆ ನ್ಯಾಷನಲ್ ನ್ಯೂಟ್ರೀಷಿಯನ್ ಮಿಶನ್ ಅಭಿಯಾನದ ಅಂಗವಾಗಿ ಕೇರಳ ಸರಕಾರವು ಮಹಿಳಾ ಮತ್ತು  ಶಿಶು (ಮಕ್ಕಳು) ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಸಂಪುಷ್ಟ  ಕೇರಳ ಎಂಬ ವಿನೂತನ ಯೋಜನೆಯನ್ನು  ಕಾರ್ಯಗತಗೊಳಿಸಲು 23,81,86,000ರೂ. ಗಳ ಆಡಳಿತಾನುಮತಿ ನೀಡಿರುವುದಾಗಿ ಆರೋಗ್ಯ ಮತ್ತು  ಸಾಮಾಜಿಕ ನ್ಯಾಯ ಇಲಾಖೆ ತಿಳಿಸಿದೆ.
   ಮೊದಲ ಹಂತದಲ್ಲಿ  ಕಾಸರಗೋಡು, ಕಣ್ಣೂರು, ವಯನಾಡು, ಮಲಪ್ಪುರಂ ಜಿಲ್ಲೆಗಳಲ್ಲಿ  ಈ ಯೋಜನೆಯನ್ನು  ಕಾರ್ಯರೂಪಕ್ಕೆ ತರಲಾಗುತ್ತಿದೆ. ಈ ಜಿಲ್ಲೆಗಳ 8,534 ಅಂಗನವಾಡಿಗಳು ಹೊಸ ಯೋಜನೆಯಲ್ಲಿ  ಒಳಪಡುತ್ತಿವೆ. ಉಳಿದ 10 ಜಿಲ್ಲೆಗಳಲ್ಲಿ  ಮುಂದಿನ ವರ್ಷ ಯೋಜನೆಯನ್ನು  ಜಾರಿಗೊಳಿಸಲಾಗುವುದು ಎಂದು ಇಲಾಖೆ ಹೇಳಿದೆ. ಜೊತೆಗೆ ಇದೀಗ ನಿರ್ಧರಿಸಲಾದ ನಾಲ್ಕು ಜಿಲ್ಲೆಗಳಲ್ಲಿ  ಯೋಜನೆಯು ಯಾವ ರೀತಿ ಫಲಪ್ರದವಾಗುತ್ತದೆ ಎಂಬುದನ್ನು  ಗಮನಿಸಿಕೊಂಡು ಮುಂದಿನ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು.
   ಸಂಪುಷ್ಟ  ಕೇರಳ ಯೋಜನೆಗೆ ಕೇಂದ್ರ ಹಾಗೂ ಕೇರಳ ಸರಕಾರವು ಸಂಯುಕ್ತವಾಗಿ ಅನುದಾನ ಒದಗಿಸುತ್ತಿವೆ. 6 ವಯಸ್ಸಿನ ವರೆಗಿನ ಮಕ್ಕಳು, ಹದಿಹರೆಯದವರಾದ ಹೆಣ್ಮಕ್ಕಳು, ಗಭರ್ಿಣಿಯರು, ಎದೆಹಾಲುಣಿಸುವ ತಾಯಂದಿರು ಮುಂತಾದವರಿಗೆ ಮೂರು ವರ್ಷದೊಳಗೆ ಅಗತ್ಯದ ಪೋಷಕ ಆಹಾರಗಳನ್ನು  ನೀಡಲು ಯೋಜನೆಯ ಮೂಲಕ ಉದ್ದೇಶಿಸಲಾಗಿದೆ.
   ಜಿಲ್ಲೆಗಳ ಎಲ್ಲ  ಅಂಗನವಾಡಿ ಕಾರ್ಯಕರ್ತರಿಗೆ, ಐಸಿಡಿಎಸ್ ಸೂಪರ್ವೈಸರ್ಗಳಿಗೆ ಸ್ಮಾಟರ್್ ಫೋನ್ಗಳನ್ನು  ಲಭ್ಯಗೊಳಿಸಲಾಗುವುದು. ಫಲಾನುಭವಿಗಳಿಗೆ ಸಂಬಂಧಿಸಿದ ಎಲ್ಲ  ಮಾಹಿತಿಗಳನ್ನು  ಫೋನ್ ಅಪ್ಲಿಕೇಶನ್ ಮುಖೇನ ಅಂಗನವಾಡಿ ಕಾರ್ಯಕತರ್ೆಯರು ನೀಡಬೇಕಿದೆ. ಈ ನಿಟ್ಟಿನಲ್ಲಿ  ಅವರಿಗೆ ಸಮರ್ಪಕವಾದ ತರಬೇತಿಯನ್ನೂ  ಒದಗಿಸಲು ತೀಮರ್ಾನ ಕೈಗೊಳ್ಳಲಾಗಿದೆ.
   ಅಂಗನವಾಡಿಗಳಲ್ಲಿ  ಈಗ ಉಪಯೋಗಿಸುತ್ತಿರುವ 11 ರಿಜಿಸ್ಟರ್ಗಳನ್ನು  ಇನ್ನು  ಮುಂದೆ ಹೊಸ ಯೋಜನೆಯಡಿ ನಿಲ್ಲಿಸಲಾಗುವುದು. ಕೇರಳದಲ್ಲಿ  ಇದಕ್ಕಾಗಿ ಮೊದಲ ಹಂತದಲ್ಲಿ  8,500 ಫೋನ್ಗಳನ್ನು  ಖರೀದಿಸಲು ನಿರ್`ರಿಸಲಾಗಿದೆ. ಮಕ್ಕಳ ತೂಕ ಹಾಗೂ ಎತ್ತರ ಅಳತೆ ಮಾಡಲಿರುವ ಉಪಕರಣಗಳನ್ನೂ  ನೀಡಲು ತೀಮರ್ಾನಿಸಲಾಗಿದೆ. ಇದರನುಸಾರ ಮಕ್ಕಳ ಭಾರ - ಅಳತೆ ತೆಗೆದು ಕೇಂದ್ರೀಕೃತ ಸರ್ವರ್ಗೆ ಅಪ್ಲೋಡ್ ಮಾಡಲಾಗುವುದು.
  ಮಹಿಳಾ ಹಾಗೂ ಶಿಶು ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಆರೋಗ್ಯ ಇಲಾಖೆ, ಆಯುಷ್ ಇಲಾಖೆ, ಶಿಕ್ಷಣ, ಸ್ಥಳೀಯಾಡಳಿತ, ಆಹಾರ ಮತ್ತು  ನಾಗರಿಕಾ ಪೂರೈಕೆ ಖಾತೆ, ಕೃಷಿ, ಪರಿಶಿಷ್ಟ  ಜಾತಿ - ಪರಿಶಿಷ್ಟ  ವರ್ಗ ಕಲ್ಯಾಣ, ಕುಟುಂಬಶ್ರೀ, ಆಹಾರ ಭದ್ರತೆ, ಎಂಜಿಎನ್ಆರ್ಇಜಿಎಸ್, ಶುಚಿತ್ವ ಮಿಷನ್, ಜಲ ಪ್ರಾಕಾರ ಇವುಗಳ ಸಹಕಾರದೊಂದಿಗೆ ಸಂಪುಷ್ಟ  ಕೇರಳ ಯೋಜನೆಯನ್ನು  ಹಂತ ಹಂತವಾಗಿ ಅನುಷ್ಠಾನಕ್ಕೆ ತರಲು ಸಿದ್ಧತೆಗಳನ್ನು  ಮಾಡಿಕೊಳ್ಳಲಾಗುತ್ತಿದೆ.
    ಮಹಿಳಾ ಮತ್ತು  ಶಿಶು ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಸ್ಟೇಟ್ ಕನ್ವರೇಜಸ್ ಆಕ್ಷನ್ ಪ್ಲಾನ್ ತಯಾರಿಸಲಾಗುವುದು. ಆರೋಗ್ಯ ಇಲಾಖೆಯ ಅಡಿಷನಲ್ ಮುಖ್ಯ ಕಾರ್ಯದಶರ್ಿ ಅಧ್ಯಕ್ಷರಾಗಿರುವ ರಾಜ್ಯ ಏಕೋಪನಾ ಸಮಿತಿಯು ಯೋಜನೆಯನ್ನು  ತಯಾರಿಸಲಿದೆ. ಇತರ ಸಂಬಂಧಿತ ಎಲ್ಲ  ಇಲಾಖೆಗಳ ಕಾರ್ಯದಶರ್ಿಗಳು ಸಮಿತಿಯ ಸದಸ್ಯರಾಗಿರುತ್ತಾರೆ. ಸಮಾನವಾದ ಸಮಿತಿಗಳನ್ನು  ಜಿಲ್ಲಾ  ಮತ್ತು  ಬ್ಲಾಕ್ ಪಂಚಾಯತ್ ಮಟ್ಟಗಳಲ್ಲಿ  ರಚಿಸಲಾಗುವುದು. ರಾಜ್ಯ ಮಟ್ಟದ ಸ್ಟೇಟ್ ಪ್ರಾಜೆಕ್ಟ್  ಮೆನೇಜ್ಮೆಂಟ್ ಘಟಕ (ಎಸ್ಎಂಪಿಯು)ವು ರಾಜ್ಯ ನ್ಯೂಟ್ರೀಷಿಯನ್ ರಿಸೋಸರ್್ ಕೇಂದ್ರವಾಗಿ ಕಾಯರ್ಾಚರಿಸಲಿದೆ.
      ಕಾಸರಗೋಡಿನಲ್ಲಿ  ಅನುಷ್ಠಾನ :
   ಸಂಪುಷ್ಟ  ಕೇರಳ ಯೋಜನೆಯನ್ನು  ಕಾಸರಗೋಡು ಜಿಲ್ಲೆಯಲ್ಲಿ  ಫಲಪ್ರದವಾಗಿ ಅನುಷ್ಠಾನಕ್ಕೆ ತರಲು ಸಿದ್ಧತೆಗಳನ್ನು  ನಡೆಸಲಾಗುತ್ತಿದೆ. ಮಹಿಳಾ ಮತ್ತು  ಶಿಶು ಕಲ್ಯಾಣ ಇಲಾಖೆಯ ಮುಂದಾಳುತ್ವದಲ್ಲಿ  ಐಸಿಡಿಎಸ್ ಸೂಪರ್ವೈಸರ್ಗಳ ನೇತೃತ್ವದಲ್ಲಿ ಯೋಜನೆಯನ್ನು  ಕಾರ್ಯಗತಗೊಳಿಸಲು ಪ್ರಾಥಮಿಕ ಹಂತದ ಕೆಲಸ ಕಾರ್ಯಗಳನ್ನು  ನಿರ್ವಹಿಸಲಾಗುತ್ತಿದೆ. ಇದಕ್ಕಾಗಿ ಸಮಿತಿಗಳನ್ನು  ರಚಿಸಲು ನಿರ್ಧರಿಸಲಾಗಿದೆ. ತಾಲೂಕು ಮಟ್ಟದಲ್ಲಿ  ಸಮಿತಿಗಳಿಗೆ ರೂಪು ನೀಡಲಾಗುವುದು. ಈ ಮೂಲಕ ಜಿಲ್ಲೆಯಲ್ಲಿ  ಯೋಜನೆಯನ್ನು  ಕ್ರಮಬದ್ಧವಾಗಿ ಜಾರಿಗೆ ತಂದು ಮಹಿಳೆಯರು ಮತ್ತು  ಮಕ್ಕಳಿಗೆ ಅಗತ್ಯದ ಪೋಷಕಾಹಾರ ಲಭಿಸುವಂತೆ ಮಾಡುವ ಉದ್ದೇಶ ಹೊಂದಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries