HEALTH TIPS

No title

                 ಪ್ರಭಾಕರನ್ ಆಯೋಗ ಶಿಫಾರಸಿನಂತೆ ಮಧೂರು ಶಾಲೆಗೆ ಅಂಗೀಕಾರ ನೀಡಿದ ಕಾಮಗಾರಿ ಶೀಘ್ರ ಆರಂಭಿಸಲು ಆಗ್ರಹ
    ಮಧೂರು: ರಾಜ್ಯದಲ್ಲೇ ಉತ್ತಮ ಶಾಲೆ ಎಂಬ ಪರಿಗಣನೆಗೆ ಪಾತ್ರವಾಗಿದ್ದರೂ ಸೌಲಭ್ಯಗಳ ಕೊರತೆಯಿರುವ ಮಧೂರು ಕಿರಿಯ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಮಂಜೂರಾದ 25 ಲಕ್ಷ ರೂ.ಯನ್ನು ಬಳಸಿ ಶೀಘ್ರವೇ ಕಾಮಗಾರಿ ಆರಂಭಿಸಬೇಕೆಂದು ಹಳೆ ವಿದ್ಯಾಥರ್ಿ ಸಂಘ ಸಂಬಂಧಪಟ್ಟವರನ್ನು ಆಗ್ರಹಿಸಿದೆ.
   234 ವಿದ್ಯಾಥರ್ಿಗಳಿರುವ ಈ ಶಾಲೆಗೆ ಇತರ ಕಟ್ಟಡಗಳನ್ನು ಒದಗಿಸಬೇಕೆಂದೂ, ಶಾಲೆಯನ್ನು ಹಿರಿಯ ಬುನಾದಿ ಶಾಲೆಯಾಗಿ ಭಡ್ತಿಗೊಳಿಸಬೇಕೆಂದೂ ಸಂಘವು ಗ್ರಾ.ಪಂ.  ಅಧ್ಯಕ್ಷರನ್ನು, ಸ್ಥಳೀಯ ಶಾಸಕರನ್ನು ವಿನಂತಿಸಿದೆ.
   ವಿದ್ಯಾಭ್ಯಾಸಕ್ಕೆ ಪ್ರತ್ಯೇಕ ಮುತುವಜರ್ಿ ವಹಿಸುವ ಇಂದಿನ ಸರಕಾರವು ಶಾಲೆಯಲ್ಲಿ ಕಟ್ಟಡಗಳ ಕೊರತೆ ಇರುವ ಈ ಶಾಲೆಯನ್ನು ಪ್ರತ್ಯೇಕ ಪರಿಗಣಿಸಿ ಸೌಲಭ್ಯವನ್ನು ಒದಗಿಸಬೇಕೆಂದು ಕೇಳಿಕೊಂಡಿದೆ. ಎಲ್ಕೆಜಿ, ಯುಕೆಜಿ ಸಹಿತ ಒಂದರಿಂದ ನಾಲ್ಕನೇ ತರಗತಿ ತನಕ ಕನ್ನಡ ಮತ್ತು ಮಲಯಾಳ ಮಾಧ್ಯಮಗಳಲ್ಲಿ ಹತ್ತು ತರಗತಿಗಳು ಕೇವಲ ಒಂದು ಹಳೆ ಕಟ್ಟಡ ಮತ್ತು ಎಸ್ಎಸ್ಎ ನೀಡಿದ ಒಂದು ಕಟ್ಟಡದಲ್ಲಿ ನಡೆಸಬೇಕಾದ ದುಸ್ಥಿತಿ ಈ ಶಾಲೆಗಿದೆ.
   ಹಳೆ ವಿದ್ಯಾಥರ್ಿ ಸಂಘದ ಅಧ್ಯಕ್ಷ ಕೆ.ನಾರಾಯಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದಶರ್ಿ ತಾರಾನಾಥ ಮಧೂರು ಸ್ವಾಗತಿಸಿ ವರದಿ ಮಂಡಿಸಿದರು. ಮುಖ್ಯೋಪಾಧ್ಯಾಯ ವಿನೋದ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ ಉಪಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸದಾಶಿವ ಭಟ್, ಸುರೇಶ್ ಕಲ್ಲೂರಾಯ, ಗೋಪಾಲಕೃಷ್ಣ, ಕೆ.ಚಂದ್ರಹಾಸ, ಯೋಗೀಶ್ ಎಂ.ಆರ್, ಬಾಲಕೃಷ್ಣ ನಂಬೀಶನ್, ಸತೀಶ ಬಿ, ಉಮೇಶ ಗಟ್ಟಿ ಉಳಿಯ, ಅಶ್ರಫ್, ಅಬ್ದುಲ್ ಅಸೀಸ್, ಬಾಲಕೃಷ್ಣ ನಂಬೀಶನ್, ಅನಿಲ್ ಕುಮಾರ್ ಮಾಸ್ಟರ್ ಮೊದಲಾದವರು ಮಾತನಾಡಿದರು.
   ನೂತನ ಪದಾಧಿಕಾರಿಗಳಾಗಿ ಯು.ವಿಷ್ಣು ಆಸ್ರ ಉಳಿಯ(ಗೌರವಾಧ್ಯಕ್ಷ), ತಾರಾನಾಥ ಮಧೂರು(ಅಧ್ಯಕ್ಷ), ಚಂದ್ರಹಾಸ ಕೆ, ಬಾಲಕೃಷ್ಣ ನಂಬೀಶನ್, ಬಿ.ಸತೀಶ್(ಉಪಾಧ್ಯಕ್ಷರು), ಅನಿಲ್ ಕುಮಾರ್ ಮಾಸ್ಟರ್(ಪ್ರಧಾನ ಕಾರ್ಯದಶರ್ಿ), ಅಶ್ರಫ್ ಮಧೂರು, ಉಮೇಶ್ ಉಳಿಯ, ಉಷಾ ಸುರೇಶ್(ಕಾರ್ಯದಶರ್ಿಗಳು), ಮುಖ್ಯೋಪಾಧ್ಯಾಯ ವಿನೋದ್ ಕುಮಾರ್(ಕೋಶಾಧಿಕಾರಿ) ಸಹಿತ 21 ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ ಮತ್ತು ನಿವೃತ್ತ ಉಪಜಿಲ್ಲಾಧಿಕಾರಿ ಮಾಧವ ಹೊಳ್ಳ ಅವರ ಅಗಲುವಿಕೆಗೆ ಸಂತಾಪ ಸೂಚಿಸಲಾಯಿತು. ಜಸೀರ್ ಮಧೂರು ವಂದಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries