HEALTH TIPS

No title

                'ಯಕ್ಷ ಬಳಗ ಹೊಸಂಗಡಿ'  ಆಷಾಢಮಾಸ ತಾಳಮದ್ದಳೆ ಸಮಾರೋಪ
                      ಮದಂಗಲ್ಲು ಆನಂದ ಭಟ್ಟರಿಗೆ ಸನ್ಮಾನ
     ಮಂಜೇಶ್ವರ: ಯಕ್ಷಬಳಗ ಹೊಸಂಗಡಿದ ನೇತೃತ್ವದಲ್ಲಿ  27ನೇ ವರ್ಷದ ಆಷಾಢಮಾಸ ಸಾಪ್ತಾಹಿಕ ತಾಳಮದ್ದಳೆಯನ್ನು  ಕಳೆದ ಒಂದು ತಿಂಗಳಿಂದ ವಿವಿಧ ಕ್ಷೇತ್ರಗಳಲ್ಲಿ ನಡೆಸಿಕೊಂಡು ಬರುತ್ತಿದ್ದು ಇತ್ತೀಚೆಗೆ ಮೀಯಪದವು ವಿದ್ಯಾವರ್ಧಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ರಾಮಕೃಷ್ಣ ರಾವ್ ವೇದಿಕೆಯಲ್ಲಿ ಸಮಾರೋಪಗೊಂಡಿತು. ಜೊತೆಗೆ  ಮೂಲತಃ ಮೀಯಪದವು ಸಮೀಪದ ಮದಂಗಲ್ಲು ಮನೆಯವರಾಗಿದ್ದು ದೂರದ ಪೂನಾದಲ್ಲಿ ಯಕ್ಷಗಾನ ಕಲಾ ಸೇವೆ ಗೈಯುತ್ತಿರುವ ಹಿರಿಯ ಯಕ್ಷಗಾನ ಕಲಾವಿದ ಮದಂಗಲ್ಲು ಆನಂದ ಭಟ್ ಪೂನ ಇವರಿಗೆ ಯಕ್ಷಬಳಗದ 27ನೇ ವರ್ಷದ ವಾಷರ್ಿಕ ಸನ್ಮಾನ ಗೌರವವನ್ನು ಗಣ್ಯರ ಸಮಕ್ಷಮ ಅಪರ್ಿಸಲಾಯಿತು.
    ಸಮಾರಂಭವನ್ನು ಮಾಜಿ ಶಾಸಕ ಹಾಗೂ ಕನರ್ಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬಳೆ ಸುಂದರ ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ತಾಳಮದ್ದಳೆ ಅರ್ಥಧಾರಿ ಹಾಗೂ ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಷಿ ಈ ಸಂದರ್ಭ ಮಾತನಾಡಿ, ಕನರ್ಾಟಕ ಯಕ್ಷಗಾನ ಅಕಾಡೆಮಿಯು ಹೊರರಾಜ್ಯಗಳಲ್ಲಿ ಅನ್ಯ ಭಾಷಿಕರ ಮಧ್ಯೆ ಯಕ್ಷಗಾನವನ್ನು ಕಲಿಸಿ ಉಳಿಸಿ ಬೆಳೆಸುವ ಕಲಾವಿದರನ್ನು ಗುರುತಿಸಿ ಗೌರವಿಸುವ ಹಾಗೂ ಎಲ್ಲಾ ರೀತಿಗಳಿಂದಲೂ ಪ್ರೋತ್ಸಾಹಿಸುವ ಕೆಲಸಮಾಡಬೇಕು. ಗಡಿನಾಡು ಕಾಸರಗೋಡಿನ ಮೀಯಪದವು  ಮದಂಗಲ್ಲು ಮನೆಯಲ್ಲಿ ಜನಿಸಿ ಕಳೆದ ನಾಲ್ಕು ದಶಕಗಳಿಂದ ಮಹಾರಾಷ್ಟ್ರದ ಪೂನ ದಲ್ಲಿ ಸಾವಿರಾರು ಮಂದಿಗೆ ಯಕ್ಷಗಾನ ಕಲಿಸಿ ರಂಗ ವೇರುವಂತೆ ಮಾಡುವ ಮದಂಗಲ್ಲು ಆನಂದ ಭಟ್ಟರು ಅಕಾಡೆಮಿ ಪುರಸ್ಕಾರಕ್ಕೆ ಅರ್ಹರು. ಅವರಿಗೆ ಅಕಾಡೆಮಿ ಪ್ರೋತ್ಸಾಹ ದೊರೆಯಲಿ, ಯಕ್ಷಬಳಗ ದಂತಹ ತಾಳಮದ್ದಳೆ ನಡೆಸುವ ಕಲಾ ಸಂಘಗಳಿಂದಲೇ  ತಾಳಮದ್ದಳೆ ಅರ್ಥಧಾರಿಗಳು ಸಿದ್ದಗೊಳ್ಳಬೇಕು ಹೊರತು ನೇರವಾಗಿ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುವ ಕಲಾವಿದನಿಗೆ ಭವಿಷ್ಯವಿಲ್ಲ. ಆತ ಅನುಭವದಲ್ಲಿ ಅಪಕ್ವನಾಗಿರುತ್ತಾನೆ ಎಂದು ಸನ್ಮಾನಿತರನ್ನು ಅಭಿನಂದಿಸಿ ಮುಕ್ತ ಕಂಠದಿಂದ ಪ್ರಶಂಸಿ ತನ್ನ ಅನಿಸಿಕೆಯನ್ನು ಹಂಚಿಕೊಂಡರು.
 ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕ ರಾಜಾರಾಮ ರಾವ್ ಮೀಯಪದವು ಅಭಿನಂದನಾ ಭಾಷಣಗೈದು ಸನ್ಮಾನಿತರ ಬಾಲ್ಯ, ಮನೆತನ, ಯಕ್ಷಗಾನ ವೇಷಗಾರಿಕೆ ಹಾಗೂ ಸೇವೆಯ ಬಗೆಗೆ ಎಳೆ ಎಳೆಯಾಗಿ ಸಭಿಕರಿಗೆ ತಿಳಿಸಿದರು. ವಿದ್ಯಾವರ್ಧಕ ಕಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಸಂಚಾಲಕ ಶ್ರೀಧರ ರಾವ್ ಆರ್ ಎಂ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
     ಯಕ್ಷಬಳಗ ಹೊಸಂಗಡಿ ತಂಡದ ಸಂಚಾಲಕ ಸತೀಶ ಅಡಪ ಸಂಕಬೈಲು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದಶರ್ಿ ನಾಗರಾಜ ಪದಕಣ್ಣಾಯ ನಿರೂಪಿಸಿ ವಂದಿಸಿದರು. ತಂಡದ ಭಾಗವತ ಶುಭಾನಂದ ಶೆಟ್ಟಿ ಕುಳೂರು ಸನ್ಮಾನ ಪತ್ರ ವಾಚಿಸಿದರು.
   ಬಳಿಕ ಯಕ್ಷಬಳಗ ಹೊಸಂಗಡಿ ತಂಡದ ಸಂಯೋಜನೆಯಲ್ಲಿ 'ಅಂಗದ ಸಂಧಾನ' ತಾಳಮದ್ದಳೆ ಜರಗಿತು. ಭಾಗವತರಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಶುಭಾನಂದ ಶೆಟ್ಟಿ ಕುಳೂರು, ರಾಜ ಭಟ್ ಬರೆಮನೆ ಚೆಂಡೆ-ಮದ್ದಳೆಯಲ್ಲಿ ರಾಜಾರಾಮ ಬಲ್ಲಾಳ ಚಿಪ್ಪಾರು, ಲವ ಕುಮಾರ ಐಲ,  ಮಯೂರ ನಾಯ್ಗ ಮಾಡೂರು, ಭಾರ್ಗವ ಕೃಷ್ಣ ಬಲಿಪಗುಳಿ ಹಾಗೂ ಅರ್ಥಧಾರಿಗಳಾಗಿ ಕುಂಬಳೆ ಸುಂದರ ರಾವ್, ಡಾ. ಎಂ ಪ್ರಭಾಕರ ಜೋಷಿ, ಸತೀಶ ಅಡಪ ಸಂಕಬೈಲು, ವಿಠಲ ಭಟ್ ಮೊಗಸಾಲೆ, ನಾಗರಾಜ ಪದಕಣ್ಣಾಯ ಮೂಡಂಬೈಲು, ಹರಿಶ್ಚಂದ್ರ ನಾಯ್ಗ ಮಾಡೂರು ಭಾಗವಹಿಸಿದ್ದರು.


   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries