ಅಮರನಾಥ ಯಾತ್ರೆ ಮುಕ್ತಾಯ; 2.85 ಲಕ್ಷ ಯಾತ್ರಾಥರ್ಿಗಳಿಂದ ದರ್ಶನ
ಶ್ರೀನಗರ: ಉಗ್ರ ದಾಳಿ ಆತಂಕ ಮತ್ತು ಭೂಕುಸಿತದ ಸಮಸ್ಯೆ ನಡುವೆಯೇ 40 ದಿನಗಳ ಪವಿತ್ರ ಅಮರನಾಥ್ ಯಾತ್ರೆ ಅಂತ್ಯಗೊಂಡಿದ್ದು, ಈ ಬಾರಿ ಒಟ್ಟು 2.85 ಲಕ್ಷ ಯಾತ್ರಾಥರ್ಿಗಳು ಅಮರನಾಥನ ದರ್ಶನ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮರನಾಥ ಯಾತ್ರೆ ಆಯೋಜಕ ಅಧಿಕಾರಿಗಳು ನೀಡಿರುವ ದತ್ತಾಂಶಗಳ ಅನ್ವಯ ಈ ಬಾರಿ ಒಟ್ಟು 2,85,006 ಯಾತ್ರಿಗಳು ಪವಿತ್ರ ಶಿವಲಿಂಗದ ದರ್ಶನ ಮಾಡಿದ್ದಾರೆ. ಕಳೆದ ಜೂನ್ 28ರಿಂದ ಆರಂಭವಾಗಿದ್ದ ಯಾತ್ರೆ 40 ದಿನಗಳ ಬಳಿಕ ಅಂದರೆ ಇಂದು ಮುಕ್ತಾಯಗೊಂಡಿದೆ. ಇನ್ನು ಈ ಬಾರಿಯೂ ವಿವಿಧ ಅವಘಡಗಳಲ್ಲಿ ಒಟ್ಟು 38 ಮಂದಿ ಸಾವನ್ನಪ್ಪಿದ್ದು, ಈ ಪೈಕಿ ಯಾತ್ರಾಥರ್ಿಗಳು, ಅವರಿಗೆ ಸೇವೆ ಒದಗಿಸುವ ಸ್ವಯಂ ಸೇವಕರು, ಪೋನಿ ವಾಲಾಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಅಂತೆಯೇ ಹವಾಮಾನ ವೈಪರೀತ್ಯ ಮತ್ತು ಹವಾಮಾನಕ್ಕೆ ತಡೆದುಕೊಳ್ಳಲಾಗದೇ ಸಾವನ್ನಪ್ಪಿರುವವ ಸಂಖ್ಯೆ ಕೂಡ ಇದರಲ್ಲಿ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಉಗ್ರದಾಳಿಯ ಹೊರತಾಗಿಯೂ ಒಟ್ಟು 2.60ಲಕ್ಷ ಮಂದಿ ಅಮರನಾಥನ ದರ್ಶನ ಮಾಡಿದ್ದರು. ಹೀಗಾಗಿ ಈ ಬಾರಿ ಕಳೆದ ವರ್ಷಕ್ಕಿಂತಲೂ ಹೆಚ್ಚು ಭದ್ರತೆ ಒದಗಿಸಲಾಗಿತ್ತು. ಕಳೆದ ಬಾರಿ ಯಾತ್ರಾಥರ್ಿಗಳ ಮೇಲೆ ಉಗ್ರರು ದಾಳಿ ನಡೆಸಿದ್ದರಿಂದ ಈ ಬಾರಿ ಇದೇ ಮೊದಲ ಬಾರಿಗೆ ಯಾತ್ರಾಥರ್ಿಗಳಿಗೆ ರೇಡಿಯೋ ಟ್ಯಾಗ್ ಅಳವಡಿಸುವ ಕೆಲಸ ಮಾಡಲಾಗಿತ್ತು. ಇದರಿಂದ ಯಾತ್ರೆಗೆ ಆಗಮಿಸುವ ವಾಹನಗಳನ್ನು ಟ್ರ್ಯಾಕ್ ಮಾಡಲು ಸುಲಭ ಸಾಧ್ಯವಾಗಿತ್ತು.
ಇದೇ ವೇಳೆ ಇದೇ ಮೊದಲ ಬಾರಿಗೆ ರೈಲ್ವೇ ಭದ್ರತಾ ಅಧಿಕಾರಿಗಳು ಮೊಟಾರ್ ಬೈಕ್ ಗಾಡರ್್ ಗಳನ್ನು ಭದ್ರತೆಗೆ ನಿಯೋಜಿಸಿದ್ದು ವಿಶೇಷವಾಗಿತ್ತು.
ಜಮ್ಮು ಮತ್ತು ಕಾಶ್ಮೀರ ಪೊಲೀಸರು, ರೈಲ್ವೇ ಭದ್ರತಾ ಪಡೆಗಳು, ತುತರ್ು ಪ್ರಹಾರ ದಳ, ಬಾಂಬ್ ನಿಷ್ಕ್ರಿಯ ದಳ, ಭಾರತೀಯ ಸೇನೆಯ ಸೈನಿಕರು ಸೇರಿ ಒಟ್ಟು 40 ಸಾವಿರಕ್ಕೂ ಅಧಿಕ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.