ಶ್ರೀ ಗಣೇಶೋತ್ಸವದ ವಿಗ್ರಹ ರಚನೆಯ ಮುಹೂರ್ತ
ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯುವ 39 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿಗ್ರಹ ರಚನೆಯ ಮುಹೂರ್ತವನ್ನು ಇತ್ತೀಚೆಗೆ ವೇದಮೂತರ್ಿ ಶ್ರೀ ವಿಷ್ಣು ಭಟ್ ಅವರು ನೆರವೇರಿಸಿದರು. ಬಳಿಕ ಗಣಹೋಮ ನಡೆಯಿತು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.