HEALTH TIPS

No title

                        ನೀಚರ್ಾಲಿನಲ್ಲಿ ರಾಮಾಯಣ ಮಾಸಾಚರಣೆ- ಪುರಾಣ ವಾಚನ ವ್ಯಾಖ್ಯಾನ
    ಬದಿಯಡ್ಕ : ನೀಚರ್ಾಲು ಶ್ರೀ ಕುಮಾರಸ್ವಾಮಿ ಭಜನಾ ಸಂಘದ ವತಿಯಿಂದ ನಡೆದ 4ನೇ ವರ್ಷದ ರಾಮಾಯಣ ಮಾಸಾಚರಣೆಯ 2ನೇ ದಿನದ ಕಾರ್ಯಕ್ರಮವು ಸಭೆ ಹಾಗೂ ಪುರಾಣವಾಚನ ವ್ಯಾಖ್ಯಾನದೊಂದಿಗೆ ನಡೆಯಿತು.
ಸಮಾರಂಭದಲ್ಲಿ ಸದಾಶಿವ ಮಾಸ್ತರ್ ಬೇಳ ಅಧ್ಯಕ್ಷತೆ ವಹಿಸಿದ್ದರು. ಬಳ್ಳಂಬೆಟ್ಟು ಶ್ರೀ ಶಾಸ್ತಾರ ಕ್ಷೇತ್ರದ ಆಡಳಿತ ಮೊಕ್ತೇಸರ ಬಳ್ಳಂಬೆಟ್ಟು ಶ್ರೀಧರ ಪೈ ಬೇಳ ಅವರು ದೀಪೋಜ್ವಲನೆಗೈದು ಶುಭಹಾರೈಸಿದರು. ಶ್ರೀ ಕುಮಾರ ಸ್ವಾಮಿ ಭಜನಾ ಸಂಘದ ಅರ್ಚಕ ಸುಬ್ರಹ್ಮಣ್ಯ ಆಚಾರ್ಯ ನೀಚರ್ಾಲು ಶ್ರೀರಾಮ ನಾಮ ತಾರಕ ಮಂತ್ರ ಜಪ ಯಜ್ಞದ ನೇತೃತ್ವವನ್ನು ವಹಿಸಿದರು. ಗಣೇಶ್ ನೀಚರ್ಾಲು ನಿರೂಪಣೆಗೈದು, ಕು. ದೀಪ್ತಿ ಪ್ರಾರ್ಥನೆಗೈದಳು. ಬಿ.ಕೆ.ಟೈಲರ್ ನೀಚರ್ಾಲು ವಂದಿಸಿದರು. 
ಬಳಿಕ ಜರುಗಿದ ಪುರಾಣವಾಚನ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ದಿನೇಶ ಪ್ರಭು ಕರಿಂಬಿಲ ಹಾಗೂ ರವಿಕಾಂತ ಕೇಸರಿ ಕಡಾರು ವಾಚನ ಕಾರ್ಯಕ್ರಮದಲ್ಲಿ ಸಹಕರಿಸಿದರು. ಡಾ.ಬೇ.ಸೀ.ಗೋಪಾಲಕೃಷ್ಣ ಅವರು ವ್ಯಾಖ್ಯಾನವನ್ನು ನೀಡಿದರು. ತೊರವೆ ರಾಮಾಯಣದ ಕಿಷ್ಕಿಂದಾ ಕಾಂಡದ ಸುಗ್ರೀವ ಸಖ್ಯ ಭಾಗದ ಪ್ರವಚನ ರೂಪದಲ್ಲಿ ಅನಾವರಣಗೊಂಡಿತು. ಆಧುನಿಕ ತಾಂತ್ರಿಕ ಯುಗದ ಧಾವಂತದ ನಡುವೆ ಸಾಂಸ್ಕೃತಿಕ ಅಂಶಗಳು ಜನಮಾನಸದಿಂದ ದೂರವಾಗುತ್ತಿರುವ ಈ ಸಂಕೀರ್ಣ ಕಾಲಘಟ್ಟದಲ್ಲಿ ರಾಮಾಯಣ ಕಾವ್ಯದ ಮಹತ್ವ ಮತ್ತು ರಾಮಾಯಣ ಮಾಸಾಚರಣೆಯ ಮಹತ್ವ ಎರಡೂ ಧ್ವನಿಪೂರ್ಣವಾಗಿ ಹೊರಹೊಮ್ಮಿದ್ದು, ಸಂದರ್ಭವನ್ನು ಸ್ಮರಣಯೋಗ್ಯವನ್ನಾಗಿಸಿದರು. ಬಾಲಕೃಷ್ಣ ಆಚಾರ್ಯ ನೀಚರ್ಾಲು ಶೃತಿಯಲ್ಲಿ ಸಹಕರಿಸಿದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries