ಓದುವ ಹವ್ಯಾಸ ಭಾಷೆಯನ್ನು ಆತ್ಮೀಯಗೊಳಿಸುತ್ತದೆ-ಅರಿವಿನ ವಿಸ್ತಾರತೆಗೆ ಕಾರಣ-ವೆಂಕಟರಮಣ ಭಟ್ ಪೆಮರ್ುಖ
ಕನ್ನಡ ಸಾಹಿತ್ಯ ಸಿರಿ 4 ಉದ್ಘಾಟನೆ
ಬದಿಯಡ್ಕ: ಕನ್ನಡ ಭಾಷಾ ಪರಂಪರೆಯು ವಿಶಾಲ ಜ್ಞಾನನಿಧಿಯ ಆಗರವಾಗಿದೆ. ಆದರೆ ಪರಕೀಯರ ಆಕ್ರಮಣ ಮತ್ತು ಅನ್ಯ ಸಂಸ್ಕೃತಿಯ ಪ್ರಭಾವಗಳಿಂದ ಇಂದು ಕನ್ನಡ ಭಾಷೆ, ಸಂಸ್ಕೃತಿಯ ಹೊಳೆಯುವ ಬೆಳಕು ಮಬ್ಬಾಗುತ್ತಿರುವ ಭೀತಿಯಿದ್ದು, ಹೊಸ ತಲೆಮಾರಿಗೆ ಸಂಸ್ಕೃತಿ, ಸಾಂಸ್ಕೃತಿಕತೆಯ ಪ್ರೀತಿ ಮೂಡಿಸುವ ಬದಿಯಡ್ಕದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯ ನಿರಂತರ ಕಾರ್ಯಕ್ರಮಗಳು ಸ್ತುತ್ಯರ್ಹ ಎಂದು ಕುಂಬಳೆ ಉಪಜಿಲ್ಲಾ ನಿವೃತ್ತ ವಿದ್ಯಾಧಿಕಾರಿ ವೆಂಕಟರಮಣ ಭಟ್ ಪೆಮರ್ುಖ ಅಭಿಪ್ರಾಯ ವ್ಯಕ್ತಪಡಿಸಿದರು.
ಕನರ್ಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಬದಿಯಡ್ಕದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಆಯೋಜಿಸಿರುವ ತಿಂಗಳ ಕಾರ್ಯಕ್ರಮ "ಕನ್ನಡ ಸಾಹಿತ್ಯ ಸಿರಿ" ಸರಣಿ ಕಾರ್ಯಕ್ರಮದ ನಾಲ್ಕನೇ ಕಾರ್ಯಕ್ರಮವನ್ನು ಗುರುವಾರ ಅಪರಾಹ್ನ ನೀಚರ್ಾಲು ಕುಮಾರ ಸ್ವಾಮಿ ಭಜನಾ ಮಂದಿರ ಸಭಾಂಗಣದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನ ಸಂಪಾದನೆಯು ಅಜ್ಞಾನವನ್ನು ನಿವಾರಿಸಿ ಹೊಸ ಮಾರ್ಗದಶರ್ಿತ್ವ ನೀಡುತ್ತದೆ. ಈ ನಿಟ್ಟಿನಲ್ಲಿ ಪುಸ್ತಕಗಳ ಓದು ಅರಿವಿನ ವಿಸ್ತಾರತೆಯ ಪ್ರಮುಖ ಘಟಕವಾಗಿದ್ದು, ಓದುವ ಹವ್ಯಾಸವನ್ನು ವಿಸ್ತರಿಸಬೇಕಾದ ಅನಿವಾರ್ಯತೆ ಇಂದಿದೆ ಎಂದು ಅವರು ತಿಳಿಸಿದರು. ಪ್ರತಿಯೊಬ್ಬರೂ ತಿಂಗಳಿಗೊಂದು ಪುಸ್ತಕವನ್ನು ಕೊಂಡು ಓದುವ ರೂಢಿಯನ್ನು ಬೆಳೆಸಬೇಕು. ಓದುವಿಕೆ ಭಾಷೆಯ ಬಗ್ಗೆ ಆತ್ಮೀಯತೆ,ಪ್ರೀತಿ ಮೂಡಿಸುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಸಿರಿ ಬದಿಯಡ್ಕದ ಅಧ್ಯಕ್ಷ ಮೊಹಮ್ಮದಾಲಿ ಪೆರ್ಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಅಂಚೆ ಅಧಿಕಾರಿ, ಸಾಹಿತಿ ಪಿ.ಮುಕುಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಕುಂದ ಅವರ ಪತ್ನಿ ಲೀಲಾ ಪಿ.ಎಂ. ಉಪಸ್ಥಿತರಿದ್ದರು.
ಮಧುರೈ ಕಾಮರಾಜ ವಿವಿಯ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಹರಿಕೃಷ್ಣ ಭರಣ್ಯ ಪಿ.ಮುಕುಂದ ಅವರ ಕೃತಿಗಳ ಪರಿಚಯನೀಡಿ ಮಾತನಾಡಿ ಸರಳ ಭಾಷಾ ಪ್ರಯೋಗಗಳ ಮೂಲಕ ಜನಸಾಮಾನ್ಯರಿಗೆ ನಿಕಟವಾಗುವ ಬರಹಗಳು ಸರ್ವಮಾನ್ಯವಾಗುತ್ತದೆ. ಭಾಷೆಯ ಬೆಳವಣಿಗೆಯ ಜೊತೆಗೆ ಸಮಕಾಲೀನ ವಿದ್ಯಮಾನಗಳನ್ನು ದಾಖಲಿಸುವಲ್ಲಿ ಮುಕುಂದರ ಕೃತಿಗಳು ಉತ್ತಮ ಬರಹಗಳಾಗಿವೆ ಎಂದು ತಿಳಿಸಿದರು.
ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಉಪಸ್ಥಿತರಿದ್ದು ಶುಭಹಾರೈಸಿದರು. ಕೇರಳ ರಾಜ್ಯ ಬ್ಯಾರಿ ಅಕಾಡೆಮಿ ಕಾರ್ಯದಶರ್ಿ ಝಡ್ ಎಕಯ್ಯಾರು, ನಿವೃತ್ತ ಶಿಕ್ಷಣ ಇಲಾಖಾ ಅಧೀಕ್ಷಕ ಕೇಶವಪ್ರಸಾದ್ ಕುಳಮರ್ವ, ವಯೋಲಿನ್ ವಿದ್ವಾನ್ ಪ್ರಭಾಕರ ಕುಂಜಾರು, ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಬಾಲಕೃಷ್ಣ ಆಚಾರ್ಯ ನೀಚರ್ಾಲು ಉಪಸ್ಥಿತರಿದ್ದು ಮಾತನಾಡಿದರು.
ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯ ಸಂಚಾಲಕ ಕೇಳು ಮಾಸ್ತರ್ ಅಗಲ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ಸಾಹಿತ್ಯ ಸಿರಿ ಸರಣಿಯ ಬಗ್ಗೆ ಮಾಹಿತಿ ನೀಡಿದರು. ನಾರಾಯಣ ಭಟ್ ಮೈರ್ಕಳ ಸ್ವಾಗತಿಸಿ, ಡಾ.ಬೇ.ಸಿ.ಗೋಪಾಲಕೃಷ್ಣ ವಂದಿಸಿದರು. ಪ್ರೊ.ಎ.ಶ್ರೀನಾಥ್ ಸನ್ಮಾನಿತರ ಪರಿಚಯ ನೀಡಿ ಕಾರ್ಯಕ್ರಮ ನಿರೂಪಿಸಿದರು.