ಎನ್ಆರ್ಸಿಯಲ್ಲಿ ಹೆಸರಿಲ್ಲ ಎಂದರೆ ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂಬ ಅರ್ಥವಲ್ಲ: ಚುನಾವಣಾ ಆಯೋಗ
ನವದೆಹಲಿ: ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ ಪರಿಷ್ಕೃತ ಕರಡು ಪಟ್ಟಿಯಲ್ಲಿ 40 ಲಕ್ಷ ಜನರ ಹೆಸರಿನಲ್ಲಿ ಎಂದರೆ ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂಬ ಅರ್ಥವಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದು ಎನ್ ಆರ್ ಸಿಯ ಕರಡು ಆಗಿದೆ. ಮುಂದಿನ ತಿಂಗಳ ಏಕೆ ತಮ್ಮ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಬಗ್ಗೆ 40 ಲಕ್ಷ ಜನರು ಮಾಹಿತಿ ನೀಡಬೇಕಾಗಿದೆ. ಆನಂತರ ಅವರ ಆಪೇಕ್ಷಣೆ ಸಲ್ಲಿಸಿದ ನಂತರ ಅಂತಿಮ ಎನ್ ಆರ್ ಸಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಚುನಾವಣಾ ಆಯೋಗದ ಆಯುಕ್ತ ಒ ಪಿ ರಾವತ್ ದೆಹಲಿಯಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಎನ್ ಆರ್ ಸಿಯ ಅಂತಿಮ ಕರಡು ಮುದ್ರಣದಲ್ಲಿ ಪ್ರಮುಖ ಅಂಶಗಳ ಸಂಬಂಧ ಮುಂದಿನ ವಾರ ಅಸ್ಸಾಂ ಚುನಾವಣಾ ಅಧಿಕಾರಿಗಳು ವಾಸ್ತವ ವರದಿ ಸಲ್ಲಿಸಿದ್ದಾರೆ . ಜನಪ್ರತಿನಿಧಿ ಕಾಯ್ದೆ 1950 ರ ಅಡಿಯಲ್ಲಿ ಮೂರು ಭಾಗದಲ್ಲಿ ಮತದಾರರನ್ನು ನೋಂದಣಿ ಮಾಡಿಕೊಂಡಿದ್ದು, ಪಟ್ಟಿಯಲ್ಲಿ ಹೆಸರಿಲ್ಲದವರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂಬ ಅರ್ಥವಲ್ಲ ಎಂದು ಹೇಳಿದರು.
ಮತದಾನದ ಹಕ್ಕು ಪಡೆಯಲು ಮೊದಲು ಅವರು ಭಾರತದ ನಾಗರಿಕರಾಗಿರಬೇಕು, ಎರಡನೇಯದಾಗಿ ಅವರಿಗೆ 18 ವರ್ಷ ತುಂಬಿರಬೇಕು, ಮೂರನೇಯದಾಗಿ ಯಾವುದಾದರೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅವರು ವಾಸಿಸುತ್ತಿರಬೇಕಾಗುತ್ತದೆ. ಈ ಸಂಬಂಧಿತ ಎಲ್ಲಾ ದಾಖಲೆಗಳಿದ್ದರೆ ಅವರು ಚುನಾವಣಾ ಅಧಿಕಾರಿಗಳ ಬಳಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ಅಸ್ಸಾಂ ಚುನಾವಣಾ ಆಯೋಗ ಎನ್ ಆರ್ ಸಿ ಸಮನ್ವಯ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸುವಂತೆ 2019ರ ಚುನಾವಣಾ ಪಟ್ಟಿಯಲ್ಲಿರುವ ಅರ್ಹ ಮತದಾರ ಪಟ್ಟಿ ಪಡೆಯುವಂತೆ ತಿಳಿಸಲಾಗಿದೆ. ಇದರ ಆಧಾರದ ಮೇಲೆ ಜ.4 2019ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ರಾವತ್ ತಿಳಿಸಿದ್ದಾರೆ.