ಕೇರಳದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ವಲಸೆಗಾರರು
ನಿಖರ ಲೆಕ್ಕಾಚಾರ ರಾಜ್ಯ ಸರಕಾರದ ಬಳಿಯೇ ಇಲ್ಲ!
ತಿರುವನಂತಪುರ: ಬಾಂಗ್ಲಾದೇಶದ ಗಡಿಯಾದ ಅಸ್ಸಾಂನಲ್ಲಿ ವಾಸಿಸುತ್ತಿರುವ 40 ಲಕ್ಷದಷ್ಟು ಮಂದಿ ಭಾರತೀಯರಲ್ಲ ಎಂದು ರಾಷ್ಟ್ರೀಯ ನಾಗರಿಕ ನೋಂದಾವಣೆ (ಎನ್ಆರ್ಸಿ)ಯ ಅಂತಿಮ ಕರಡು ಪಟ್ಟಿಯಲ್ಲಿ ತಿಳಿಸಲಾಗಿದ್ದರೂ, ಅದೆಷ್ಟೋ ಮಂದಿ ಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ಭಾರತದೊಳಗೆ ನುಸುಳಿ ಕೇರಳದಲ್ಲಿ ಅನಧಿಕೃತವಾಗಿ ನೆಲೆಸಿದ್ದಾರೆಂಬ ಬಗ್ಗೆ ಮಾಹಿತಿಯಿದೆ.
ಆದರೆ ಈ ಕುರಿತು ರಾಜ್ಯ ಸರಕಾರಕ್ಕೆ ಯಾವುದೇ ಸ್ಪಷ್ಟ ವಿವರ ಇಲ್ಲ ಎಂಬುದು ಅಚ್ಚರಿ ಮೂಡಿಸುತ್ತಿದೆ. ಎನ್ಆರ್ಸಿ ಅಂದಾಜು ಪ್ರಕಾರ ಗಡಿದಾಟಿ ಭಾರತಕ್ಕೆ ನುಸುಳಿರುವ ಬಾಂಗ್ಲಾದೇಶದ ಪ್ರಜೆಗಳಲ್ಲಿ ಸಾವಿರಾರು ಮಂದಿ ಕೇರಳಕ್ಕೆ ತೆರಳಿ ನಕಲಿ ಹೆಸರು ಮತ್ತು ವಿಳಾಸ ನೀಡಿ ಅಕ್ರಮವಾಗಿ ನೆಲೆಸಿದ್ದಾರೆಂದು ತಿಳಿದುಬಂದಿದೆ. ಹೀಗೆ ಎಷ್ಟೋ ಜನ ವಿದೇಶಿಯರು ರಾಜ್ಯದಲ್ಲಿ ನೆಲೆಸಿದ್ದಾರೆಂಬ ನಿಖರ ಮಾಹಿತಿ ಕೇರಳ ಪೊಲೀಸ್ ಇಲಾಖೆಯ ಬಳಿಯಿಲ್ಲ.
ರಾಜ್ಯದಲ್ಲಿ ದುಡಿಯುತ್ತಿರುವ ಹೊರರಾಜ್ಯ ಕಾಮರ್ಿಕರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಕೇರಳ ಸರಕಾರವು ಆವಾಜ್ ಎಂಬ ಹೆಸರಿನಲ್ಲಿ ಹೊಸ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಲ್ಲಿ 2,89,324 ಮಂದಿ ಮಾತ್ರವೇ ಸೇರ್ಪಡೆಗೊಂಡಿದ್ದಾರೆ. ಆದರೆ ಪೊಲೀಸ್ ಗುಪ್ತಚರ ಇಲಾಖೆಯ ಅಂದಾಜಿನಂತೆ ಕೇರಳದಲ್ಲಿ ಹದಿನೈದು ಲಕ್ಷಕ್ಕಿಂತಲೂ ಹೆಚ್ಚು ಮಂದಿ ಅನ್ಯರಾಜ್ಯ ಕಾಮರ್ಿಕರು ವಿವಿಧ ವಲಯಗಳಲ್ಲಿ ದುಡಿಯುತ್ತಿದ್ದಾರೆ.
ಹೀಗೆ ರಾಜ್ಯದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶದ ವಲಸಿಗರು ಕೇರಳ ಮಾತ್ರವಲ್ಲದೆ ಭಾರತದ ಆಂತರಿಕ ಭದ್ರತೆಗೆ ಅಪಾಯ ಒಡ್ಡುತ್ತಿದ್ದಾರೆಂದು ಕೇಂದ್ರ ಗುಪ್ತಚರ ವಿಭಾಗವೂ ಸ್ಪಷ್ಟ ಮುನ್ನೆಚ್ಚರಿಕೆ ಕೊಟ್ಟಿದೆ. ಕೇರಳದಲ್ಲಿ ಹೊರರಾಜ್ಯ ಕಾಮರ್ಿಕರು ನಡೆಸುತ್ತಿರುವ ಕೊಲೆ, ಅತ್ಯಾಚಾರ, ದರೋಡೆ, ಕಳವು ಮುಂತಾದ ಪ್ರಕರಣಗಳ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ.
ರಾಜ್ಯದಲ್ಲಿ ಅತೀ ಹೆಚ್ಚು ಎಂಬಂತೆ ಎನರ್ಾಕುಳಂ ಜಿಲ್ಲೆಯಲ್ಲಿ ಹೊರರಾಜ್ಯ ಕಾಮರ್ಿಕರು ದುಡಿಯುತ್ತಿದ್ದಾರೆ. ಅನ್ಯರಾಜ್ಯ ಕಾಮರ್ಿಕರು ನಡೆಸುತ್ತಿರುವ ದುಷ್ಕೃತ್ಯಗಳು ಒಂದೆಡೆ ಹೆಚ್ಚಾಗುತ್ತಿದ್ದರೆ, ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದು ನೆಲೆಸುತ್ತಿರುವವರ ಉಪಟಳ ಇನ್ನೊಂದೆಡೆ ಅತಿಯಾಗುತ್ತಿದೆ. ಹೀಗೆ ಕೇರಳಕ್ಕೆ ಬಂದು ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶ ಪ್ರಜೆಗಳ ಪೈಕಿ ಕೆಲವರು ದೇಶದ್ರೋಹದ ಚಟುವಟಿಕೆಗಳಲ್ಲೂ ನಿರತರಾಗಿದ್ದಾರೆಂಬ ಮಾಹಿತಿಯೂ ಕೇಂದ್ರ ಮತ್ತು ರಾಜ್ಯದ ಗುಪ್ತಚರ ವಿಭಾಗಗಳಿಗೆ ದೊರೆತಿದೆ.
ಆದರೆ ಅಂತಹ ಅಕ್ರಮ ವಲಸೆಗಾರರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಲ್ಲಿ ಉಂಟಾಗುತ್ತಿರುವ ವಿಳಂಬ ನೀತಿ ಮುಂದೆ ಕೇರಳ ಮಾತ್ರವಲ್ಲದೆ ದೇಶಕ್ಕೇ ಬಹುದೊಡ್ಡ ಮಾರಕವಾಗಿ ಪರಿಣಮಿಸಲಿದೆ ಎಂದು ಗುಪ್ತಚರ ವಿಭಾಗವು ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ಕೇರಳ ಸರಕಾರವು ಇನ್ನಾದರೂ ಎಚ್ಚರ ವಹಿಸಿ ಅಗತ್ಯದ ಕಾನೂನು ವ್ಯವಸ್ಥೆಗಳನ್ನು ಕೈಗೊಳ್ಳಲೇಬೇಕಾಗಿದೆ.
ಭದ್ರತೆಗೆ ಗಮನಹರಿಸದ ಕೇರಳ ಸರಕಾರ : ರಾಜ್ಯ ಸರಕಾರವು ಕೇರಳದ ಭದ್ರತೆ ವಿಚಾರದಲ್ಲಿ ಗಮನ ಹರಿಸುತ್ತಿಲ್ಲ ಎಂಬ ಆರೋಪ ಹೆಚ್ಚಾಗಿ ಕೇಳಿಬರುತ್ತಿದೆ. ರಾಜ್ಯವು ಪ್ರವಾಸೋದ್ಯಮ ವಲಯದಲ್ಲಿ ಅತೀ ಹೆಚ್ಚು ಆಕಷರ್ಿತವಾಗಿರುವುದರಿಂದ ಈ ನೆಪವೊಡ್ಡಿ ವಿದೇಶಿಯರು ಹಾಗೂ ಅನ್ಯರಾಜ್ಯಗಳ ವಲಸಿಗರು ಕೇರಳಕ್ಕೆ ಹೆಚ್ಚು ಸಂಖ್ಯೆಯಲ್ಲಿ ಬಂದು ಭಯೋತ್ಪಾದನೆಯಂತಹ ದೇಶದ್ರೋಹಿ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆಂಬ ಆತಂಕದ ವಿಷಯ ಹೊರಬಿದ್ದಿದೆ. ಆದರೂ ರಾಜ್ಯವನ್ನಾಳುತ್ತಿರುವ ಎಲ್ಡಿಎಫ್ ಸರಕಾರಕ್ಕೆ ಇದೆಲ್ಲ ಗೋಚರಿಸದಿರುವುದು ಪ್ರಜ್ಞಾವಂತ ನಾಗರಿಕರನ್ನು ಆಕ್ರೋಶಕ್ಕೀಡು ಮಾಡಿದೆ.