44 ಸರಕಾರಿ ಆಸ್ಪತ್ರೆಗಳಲ್ಲಿ ಹೊಸ ಡಯಾಲಿಸಿಸ್ ಕೇಂದ್ರ
ತಿರುವನಂತಪುರ: ರಾಜ್ಯದ 44 ಸರಕಾರಿ ಆಸ್ಪತ್ರೆಗಳ್ಲಲಿ ಹೊಸದಾಗಿ ಡಯಾಲಿಸಿಸ್ ಚಿಕಿತ್ಸಾ ಕೇಂದ್ರ ಆರಂಭಿಸಲಾಗುವುದೆಂದೂ ಅವುಗಳಿಗೆ ಶೀಘ್ರ ಆಡಳಿತಾನುಮತಿ ನೀಡಲಾಗುವುದೆಂದೂ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ತಿಳಿಸಿದ್ದಾರೆ. ಇದಕ್ಕಾಗಿ ಕೇರಳ ಮೆಡಿಕಲ್ ಸವರ್ೀಸ್ ಕಾರ್ಪರೇಷನ್ಗೆ 69 ಕೋಟಿ ರೂ.ಬಿಡುಗಡೆಗೊಳಿಸಲಾಗಿದೆ. ಕಿಫ್ಬಿ ಕ್ಯಾನ್ಸರ್ ರೋಗ ಚಿಕಿತ್ಸೆಯನ್ನು ಇನ್ನಷ್ಟು ಸಮರ್ಪಕಗೊಳಿಸುವ ಸಲುವಾಗಿ ಕೇರಳದ ವೈದ್ಯಕೀಯ ಕಾಲೇಜ್ಗಳಲ್ಲಿ ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಲಾಗುವುದು.
ಕ್ಯಾನ್ಸರ್ ರೋಗಿಗಳಿಗೆ ನೀಡಲಾಗುವ ವೇದನೆ ಸಂಹಾರಿ ಮಾತ್ರೆಗಳಿಗೆ ಯಾವುದೇ ರೀತಿಯ ಕೊರತೆಯೂ ಇಲ್ಲವೆಂದು ಇದೇ ಸಂದರ್ಭದಲ್ಲಿ ಸಚಿವರು ಸ್ಪಷ್ಟಪಡಿಸಿದ್ದಾರೆ. ಇತರ ಮಾತ್ರೆಗಳಂತೆ ವೇದನೆ ಸಂಹಾರಿ ಮಾತ್ರೆಗಳನ್ನು ರೋಗಿಗಳಿಗೆ ಆಮಿತವಾಗಿ ನೀಡುವಂತಿಲ್ಲ. ಓರ್ವ ರೋಗಿಗೆ 50 ರಿಂದ 100ರ ತನಕ ಇಂತಹ ಮಾತ್ರೆಯ ಅಗತ್ಯವಿದೆ. ಅದಕ್ಕಿಂತ ಹೆಚ್ಚು ಮಾತ್ರೆ ನೀಡುವಂತಿಲ್ಲ. ಈ ಮಾತ್ರೆ ವಿತರಣೆಯನ್ನು ನಿಯಂತ್ರಿಸುವುದು ಅಥವಾ ಪಡೆಯುವ ಬಗ್ಗೆಯಾಗಲೀ ಸರಕಾರ ಯಾವುದೇ ರೀತಿಯ ನಿಯಂತ್ರಣಾ ನಿದರ್ೆಶ ನೀಡಿಲ್ಲವೆಂದೂ ಸಚಿವರು ತಿಳಿಸಿದ್ದಾರೆ.
ರಾಜ್ಯದ 220 ಆಂಗೀಕೃತ ಔಷಧ ಅಂಗಡಿ ವ್ಯಾಪಾರಿಗಳಿಗೆ ಮೋಫರ್ಿನ್ ಮಾತ್ರೆ ಮತ್ತು ಸಿರಪ್ ದಾಸ್ತಾನು ಇರಿಸುವ ಅನುಮತಿ ನೀಡಲಾಗಿದೆ ಎಂದೂ ಸಚಿವರು ತಿಳಿಸಿದ್ದಾರೆ.