HEALTH TIPS

No title

            ಪ್ರಧಾನಿಗಳಿಂದ ಸಂತ್ರಸ್ಥ ಪ್ರದೇಶಗಳ ವೈಮಾನಿಕ ಸಮೀಕ್ಷೆ=  500 ಕೋಟಿ ರೂ. ಸಹಾಯ ಘೋಷಣೆ
    ಕಾಸರಗೋಡು: ಮಹಾಪ್ರಳಯದಲ್ಲಿ ತತ್ತರಿಸಿ ಪರಿಸ್ಥಿತಿ ಕೈಮೀರಿ ಹೋಗಿರುವ ರಾಜ್ಯದ ನೆರೆಪೀಡಿತ ಪ್ರದೇಶಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ  ಬೆಳಿಗ್ಗೆ ವೈಮಾನಿಕ ಸಮೀಕ್ಷೆ ನಡೆಸಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಪಿ.ಸದಾಶಿವಂ ಮತ್ತು ಕೇಂದ್ರಸಚಿವ ಅಲ್ಫೋನ್ಸಾ ಕಣ್ಣಂತ್ತಾನಂ ಕೂಡಾ ಪ್ರಧಾನಮಂತ್ರಿಯ ಜೊತೆಗಿದ್ದರು. ಆರಂಭದಲ್ಲಿ ಬೆಳಿಗ್ಗೆ ಪ್ರತಿಕೂಲ ಹವಾಮಾನ ಕಂಡು ಬಂದ ಹಿನ್ನೆಲೆಯಲ್ಲಿ ವೈಮಾನಿಕ ಸಮೀಕ್ಷೆ ವಿಳಂಬವಾಗಿ ಆರಂಭಿಸಲಾಯಿತು.
   ಮಹಾಮಳೆ ಸೃಷ್ಟಿಸಿದ ದುರಂತಗಳ ಬಗ್ಗೆ ನೇರ ಅವಲೋಕನ ನಡೆಸಲು ಪ್ರಧಾನಿ ಶುಕ್ರವಾರ ರಾತ್ರಿ 10.50ಕ್ಕೆ ವಿಶೇಷ ವಿಮಾನದಲ್ಲಿ ದಿಲ್ಲಿಯಿಂದ ತಿರುವನಂತಪುರಕ್ಕೆ ಬಂದಿಳಿದಿದ್ದರು. ರಾತ್ರಿ ತಿರುವನಂತಪುರದಲ್ಲೇ ಉಳಿದುಕೊಂಡಿದ್ದ ಪ್ರಧಾನಿ ಶನಿವಾರ ಬೆಳಿಗ್ಗೆ ರಾಜ್ಯಪಾಲ, ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಕಣ್ಣಂತ್ತಾನಂರ ಜೊತೆ ತಿರುವನಂತಪುರದಲ್ಲಿ ಸ್ಥಿತಿಗತಿಗಳ ಬಗ್ಗೆ ಸಮಾಲೋಚನೆ ನಡೆಸಿದ ಬಳಿಕ ವಿಮಾನದಲ್ಲಿ ಅವರೊಂದಿಗೆ ಕೊಚ್ಚಿಗೆ ಬಂದಿಳಿದರು. ಅಲ್ಲಿಂದ ನೌಕಾಪಡೆಯ ವಿಶೇಷ ಹೆಲಿಕಾಪ್ಟರ್ನಲ್ಲಿ ಮುಖ್ಯ ಮಂತ್ರಿ ಮತ್ತು ರಾಜ್ಯಪಾಲರ ಜೊತೆ ಪ್ರಳಯ ಪೀಡಿತ ಪ್ರದೇಶಗಳಿಗೆ ವೈಮಾನಿಕ ಸಮೀಕ್ಷೆ ನಡೆಸಲು ಮುಂದಾಗಿರುವಂತೆಯೇ ಪ್ರತಿಕೂಲ ಹವಾಮಾನದಿಂದ ವೈಮಾನಿಕ ಸಮೀಕ್ಷೆ ನಡೆಸುವುದು ಭದ್ರತೆ ದೃಷ್ಟಿಯಿಂದ ಕೈ ಬಿಡುವಂತೆ ನೌಕಾಪಡೆಯ ಉನ್ನತ ಅಧಿಕಾರಿಗಳು ವಿನಂತಿಸಿದರು. ಆ ಹಿನ್ನೆಲೆಯಲ್ಲಿ ವೈಮಾನಿಕ ಸಮೀಕ್ಷೆಯನ್ನು ದಿಢೀರ್ ರದ್ದುಪಡಿಸುವ ತೀಮರ್ಾನ ಕೈಗೊಳ್ಳಲಾಯಿತಾದರೂ, ಬಳಿಕ ಅದನ್ನು ಹಿಂತೆಗೆದುಕೊಳ್ಳಲಾಯಿತು.
   ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿಯಿಂದ ಮಳೆಯ ಬಿರುಸು ತಗ್ಗತೊಡಗಿದೆ. ಕೋಟ್ಟಯಂ, ತಿರುವನಂತಪುರ ಮತ್ತು ಚೆಂಗನ್ನೂರಿನಲ್ಲಿ  ಭಾರೀ ಮಳೆ ಮುಂದುವರಿದಿದೆ.   ಇಡುಕ್ಕಿ ಮತ್ತು ಮುಲ್ಲಪೆರಿಯಾರ್ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಕುಸಿಯತೊಡಗಿದ್ದು, ಧೈರ್ಯ ತಂದಿದೆ. ನೆರೆಯಿಂದ ಆವೃತ್ತವಾಗಿರುವ ಚಾಲಕ್ಕುಡಿ ಸಹಿತ  ಇತರ ಪ್ರದೇಶಗಳಲ್ಲಿ ನೆರೆ ನೀರು ತಗ್ಗತೊಡಗಿದೆ. ಪತ್ತನಂತಿಟ್ಟ ಜಿಲ್ಲೆಯಲ್ಲಿ ಹಲವು ಪ್ರದೇಶಗಳಲ್ಲಿ ನೆರೆ ನೀರು ಇನ್ನೂ ಮುಂದುವರಿಯುತ್ತಿದೆ. ಪ್ರಳಯ ಪೀಡಿತ ಎಲ್ಲಾ ಜಿಲ್ಲೆಗಳಲ್ಲಿ ಸೇನಾ ಪಡೆ, ನೌಕಾಪಡೆ ಮತ್ತು ವ್ಯೋಮಸೇನಾ ಪಡೆಯ ಹಲವು ತುಕಡಿಗಳು ಅಹೋರಾತ್ರಿ ನಿರಂತರವಾಗಿ ರಕ್ಷಾ ಕಾಯರ್ಾಚರಣೆ ನಡೆಸುತ್ತಿದೆ.
    ಮಳೆಗಾಲ ಆರಂಭಗೊಂಡ ಬಳಿಕ ರಾಜ್ಯದಲ್ಲಿ ಪ್ರಾಕೃತಿಕ ವಿಕೋಪದಲ್ಲಿ ಈ ತನಕ ಒಟ್ಟು 324 ಮಂದಿಯ ಪ್ರಾಣ ಕಳಕೊಂಡಿದ್ದಾರೆ. ನಾಲ್ಕು ಲಕ್ಷ ಜನರು ಈಗ ನಿರಾಶ್ರಿತ ಶಿಬಿರಗಳಲ್ಲಿ ಕಳೆಯುತ್ತಿದ್ದಾರೆ. ಶುಕ್ರವಾರವೊಂದೆ 45 ಮಂದಿ ಸಾವನ್ನಪ್ಪಿದ್ದಾರೆ.  ಆ ಮೂಲಕ ಕಳೆದ ಎರಡು ದಿನಗಳಲ್ಲಿ ಸಾವು ಸಂಖ್ಯೆ 15ಕ್ಕೇರಿದೆ. 82,442 ಮಂದಿಯನ್ನು ರಕ್ಷಿಸಲಾಗಿದೆ. ರೈಲು, ಭೂಸಾರಿಗೆ ಮತ್ತು ವಿಮಾನ ಸೇವೆಯೂ ಅಸ್ತವ್ಯಸ್ತವಾಗಿದೆ. ಮಂಗಳೂರಿನಿಂದ ಕಲ್ಲಿಕೋಟೆ ತನಕ ಮಾತ್ರವೇ ಈಗ ರೈಲು ಸೇವೆ ನಡೆಯುತ್ತಿದೆ. ಸಹಸ್ರಾರು ಮಂದಿ ತಮ್ಮ ಮನೆ ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಕೃಷಿ ನಾಶ ನಷ್ಟವನ್ನು ಇನ್ನಷ್ಟೇ ಲೆಕ್ಕಹಾಕಬೇಕಾಗಿದೆ. ಪ್ರವಾಹ ಪೀಡಿತ ಕೇರಳಕ್ಕೆ ಎಲ್ಲೆಡೆಗಳಿಂದ ಆಥರ್ಿಕ ಸಹಾಯಗಳು ಹರಿದು ಬರತೊಡಗಿದೆ.
   ರಾಜಕೀಯ ಮರೆತು ಮಾನವೀಯ ನೆರವು:
         ಮಹಾಪ್ರಳಯ ದಲ್ಲಿ ಸಿಲುಕಿ ತತ್ತರಿಸುತ್ತಿರುವ ಕೇರಳಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ತುತರ್ಾಗಿ 500 ಕೋಟಿ ರೂ.ಗಳ ಮಧ್ಯಂತರ ಪರಿಹಾರ ಘೋಷಿಸಿದ್ದಾರೆ.ಈ ಹಿಂದೆಂದೂ ಕಂಡರಿಯದ ರೀತಿಯ ಮಹಾಪ್ರಳಯ ಕೇರಳದಲ್ಲಿ  ಈಗ ತಲೆದೋರಿದೆ. ಈ ಬಗ್ಗೆ ಪ್ರಧಾನಿ ನರೇಂದ್ರಮೋದಿಯವರು ಬೆಳಿಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಪಿ. ಸದಾಶಿವಂರ ಜೊತೆ  ಸಮಗ್ರವಾಗಿ ಚಚರ್ಿಸಿದ ಬಳಿಕ ಕೇರಳಕ್ಕೆ ತುತರ್ಾಗಿ 500 ಕೋಟಿ ರೂ.ಗಳ ಮಧ್ಯಂತರ ಪರಿಹಾರವನ್ನು ಪ್ರಧಾನಿ ತಕ್ಷಣ ಘೋಷಿಸಿದ್ದಾರೆ.  ಪ್ರವಾಹದಿಂದ ಕೇರಳಕ್ಕೆ ಸಹಸ್ರಾರು ಕೋಟಿ ರೂ.ಗಳ ನಾಶನಷ್ಟ ಉಂಟಾಗಿದೆ. ಅದಕ್ಕೆ ಹೊಂದಿಕೊಂಡು ಕೇಂದ್ರ ಸಹಾಯ ಒದಗಿಸಬೇಕೆಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಧಾನಿಯವರಲ್ಲಿ ವಿನಂತಿಸಿದರು. ಅದರಂತೆ ಈಗ ಮಧ್ಯಂತರ ಸಹಾಯವಾಗಿ 500 ಕೋಟಿ ರೂ. ನೀಡಲಾಗುವುದೆಂದೂ, ಅಗತ್ಯದ ಸಹಾಯ ಮುಂದೆ  ನೀಡಲಾಗುವುದೆಂದು ಪ್ರಧಾನಿ  ಭರವಸೆ ನೀಡಿದರು.
  ಇದೇ ವೇಳೆ ನೆರೆ ಸಂತ್ರಸ್ಥ ಘಟನೆ ಬಳಸಿ ಕೆಲವು ರಾಜಕೀಯ, ಮೂಲಭೂತವಾದಿ ಸಂಘಟನೆಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೆಣಗುತ್ತಿದ್ದು, ಈ ವರೆಗೆ ರಾಜ್ಯದ ದೃಶ್ಯ ಮಾಧ್ಯಮಗಳು ಪ್ರಧಾನಿಯನ್ನು ಗುರಿಯಾಗಿಸಿ ಮೋದಿ ನೆರವನ್ನು ನೀಡಲು ಉತ್ಸುಕರಾಗಿಲ್ಲ. ರಾಜಕೀಯ ಹಗೆ ಸಾಧಿಸುತ್ತಿದ್ದಾರೆ ಎಂಬ ರೀತಿಯ ವಿಚಾರಗಳನ್ನು ಹರಿಯಬಿಡುತ್ತಿದ್ದರು. ಆದರೆ ಓರ್ವ ಜನಪ್ರಿಯ ಪ್ರಧಾನಿಯಾಗಿ ರಾಜ್ಯಕ್ಕೆ ಐದುನೂರು ಕೋಟಿಗಳ ನೆರವು ನೀಡಿರುವುದನ್ನು ಹೇಗೆ ಉಲ್ಲೇಖಿಸಲಿದೆ ಎಂಬುದನ್ನು ಕಾದುನೋಡುವ ಕುತೂಹಲ ರಾಜ್ಯದ ನಾಗರಿಕರದ್ದಾಗಿದೆ.
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries