HEALTH TIPS

No title

                 ಕೈಮಗ್ಗ ವಲಯಕ್ಕೆ 50 ಕೋಟಿ ರೂ.ಲಾಭ
    ತಿರುವನಂತಪುರ: ರಾಜ್ಯದ ಕೈಮಗ್ಗ ವಲಯದಲ್ಲಿ 2017-18ನೇ ಆಥರ್ಿಕ ವರ್ಷ 50 ಕೋಟಿ ರೂ.ಲಾಭ ಉಂಟಾಗಿದೆ.
    ಈ ವರ್ಷ ಈ ತನಕ 140 ಕೋಟಿ ರೂ.ಗಳ ಕೈಮಗ್ಗ ಜವಳಿಗಳ ಮಾರಾಟ ನಡೆದಿದೆ.ಶಾಲಾ ಸಮವಸ್ತ್ರ ಪೊರೈಕೆಯನ್ನು ಸರಕಾರ ಜವುಳಿ ಇಲಾಖೆಗೆ ವಹಿಸಿಕೊಟ್ಟಿರುವುದೇ ಆದಾಯ ಹೆಚ್ಚಾಗಲು ಪ್ರಧಾನವಾಗಿ ದಾರಿ ಮಾಡಿಕೊಟ್ಟಿದೆ. ಸಮವಸ್ತ್ರ ವಿತರಣೆ ವತಿಯಿಂದ ಮಾತ್ರವಾಗಿ 63 ಕೋಟಿ ರೂ. ಲಭಿಸಿದೆ. ಇತರ ಉತ್ಪನ್ನಗಳನ್ನು ಮಾರುಕಟ್ಟೆಗಿಳಿಸುವ ಮೂಲಕ 27 ಕೋಟಿ ರೂ.ಗಳ ಆದಾಯ ಉಂಟಾಗಿದೆ. ಶಾಲೆಗಳಿಗೆ ಆಗತ್ಯವಿರುವ ಸಮವಸ್ತ್ರ ಉತ್ಪಾದನೆಯಲ್ಲೂ ಈ ವರ್ಷ ಹೆಚ್ಚಳ ಉಂಟಾಗಿದೆ. ಈ ವರ್ಷ 28 ಲಕ್ಷ ಮೀಟರ್ ಸಮವಸ್ತ್ರ ಉತ್ಪಾದಿಸಲಾಗಿದೆ. ಕಳೆದ ವರ್ಷ ಇದು 9.5 ಲಕ್ಷ ಮೀಟರ್ ಆಗಿತ್ತು.
   2016-17ನೆ ಆಥರ್ಿಕ ವರ್ಷ 90 ಕೋಟಿ ರೂ.ಗಳ ವ್ಯಾಪಾರ ಕೈಮಗ್ಗ ವಲಯದಲ್ಲಿ ನಡೆದಿದೆ. ಕೈಮಗ್ಗ ಜವಳಿಗಳ ಮತ್ತಿತರ ಉತ್ಪನ್ನಗಳ ಬೆಲೆಯಲ್ಲಿ ಉಂಟಾಗಿರುವ ಹೆಚ್ಚಳವೂ ಆದಾಯ ಹೆಚ್ಚಾಗಲು ಇನ್ನೂ ಕಾರಣವಾಗಿದೆ. ಹೆಚ್ಚಿನ ಕೈಮಗ್ಗ ಉತ್ಪನ್ನಗಳ ಬೆಲೆ ಶೇ.25ರಷ್ಟು ಹೆಚ್ಚಳ ಉಂಟಾಗಿದೆ.
   ಕೇರಳದಲ್ಲಿ 350ರಷ್ಟು ಕೈಮಗ್ಗ ಘಟಕಗಳಿವೆ. ಅತೀ ಹೆಚ್ಚು ತಿರುವನಂತಪುರ ಜಿಲ್ಲೆಯಲ್ಲಿದೆ. ಈ ವಲಯದ ಕಾಮರ್ಿಕರ ಸಂಖ್ಯೆಯಲ್ಲೂ ಈಗ ಹೆಚ್ಚಳ ಉಂಟಾಗಿದೆ. ಕಳೆದ ಒಂದು ವರ್ಷದಲ್ಲಿ ಸುಮಾರು 400 ರಷ್ಟು ಮಂದಿ ಹೊಸದಾಗಿ ಈ ವಲಯಕ್ಕೆ ಕೆಲಸಕ್ಕೆ ಸೇರ್ಪಡೆಗೊಂಡಿದ್ದಾರೆ. ಇದರಲ್ಲಿ ಕಣ್ಣೂರು ಜಿಲ್ಲೆಯಲ್ಲಿ ಅತೀ ಹೆಚ್ಚು ಮಂದಿ ಹೊಸದಾಗಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries