HEALTH TIPS

No title

               ಎಡನೀರಿನಲ್ಲಿ ಕಿಕ್ಕಿರಿದ ಪ್ರೇಕ್ಷಕರ ಗಮನ ಸೆಳೆದ ಕನಕಾಂಗಿ ಕಲ್ಯಾಣ ಬಯಲಾಟ
   ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯ ವ್ರತಾನುಷ್ಠಾನದ ಅಂಗವಾಗಿ ಶ್ರೀಎಡನೀರು ಮಠದಲ್ಲಿ ದಿನನಿತ್ಯ ವಿವಿಧ ವೈಧಿಕ, ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, 15ನೇ ದಿನವಾದ ಗುರುವಾರ ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು ನೆರವೇರಿದವು.
   ಸಂಜೆ ಶ್ರೀಗಳಿಂದ ಭಕ್ತಿಸಂಕೀರ್ತನೆ, ಬಳಿಕ ಸಾಂಸ್ಕೃತಿಕ ಸಂಜೆಯ ಭಾಗವಾಗಿ ಕನಕಾಂಗಿ ಕಲ್ಯಾಣ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ದಿನೇಶ್ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ(ಭಾಗವತಿಕೆ),ಪದ್ಯಾಣ ಶಂಕರನಾರಾಯಣ ಭಟ್, ಕೃಷ್ಣಪ್ರಕಾಶ ಉಳಿಯತ್ತಾಯ, ಲವಕುಮಾರ ಐಲ(ಚೆಂಡೆ ಹಾಗೂ ಮೃದಂಗ) ದಲ್ಲಿ ಸಹಕರಿಸಿದರು. ಮುಮ್ಮೇಳದಲ್ಲಿ ಶಿವರಾಮ ಜೋಗಿ(ಘಟೋಟ್ಗಜ), ಶಶಿಧರ ಕುಲಾಲ್ ಕನ್ಯಾನ(ಅಭಿಮನ್ಯು), ಅಕ್ಷಯಕುಮಾರ್ ಮಾನರ್ಾಡು(ಕನಕಾಂಗಿ), ಲಕ್ಷ್ಮಣ ಕುಮಾರ್ ಮರಕಡ(ಬಲರಾಮ), ಶ್ರೀಧರ ಭಂಡಾರಿ ಪುತ್ತೂರು(ಕೃಷ್ಣ), ನಾ.ಕಾರಂತ ಪೆರಾಜೆ(ಸುಭದ್ರೆ), ಮಾಧವ ಪಾಟಾಳಿ ನೀಚರ್ಾಲು(ಇರಾವಂತ), ಶ್ರೀಕೃಷ್ಣ ದೇವಕಾನ(ಕೌರವ), ಮಧುರಾಜ್ ಎಡನೀರು(ಲಕ್ಷಣಕುಮಾರ), ಬಂಟ್ವಾಳ ಜಯರಾಮ ಆಚಾರಿ, ಬಾಲಕೃಷ್ಣ ಮವ್ವಾರು(ಹಾಸ್ಯ ಹಾಗೂ ಸಖರು), ಗುರುತೇಜ(ಸಖಿ), ಪ್ರಣವ್ ಕೃಷ್ಣ, ಸಚಿನ್ ಪಾಟಾಳಿ ಮೊದಲಾದವರು ವಿವಿಧ ಪಾತ್ರಗಳಿಗೆ ಜೀವತುಂಬಿದರು.
   ಶುಕ್ರವಾರ ಸಂಜೆ ಎಡನೀರು ಶ್ರೀಗಳಿಂದ ಪ್ರವಚನ ನಡೆಯಿತು. ಶನಿವಾರ ಸಂಜೆ 6.30 ರಿಂದ ಜಯಪ್ರಕಾಶ್ ಕಣ್ಣೂರು ತಂಡದವರಿಂದ ಪಹಾಡಿಯಾ ಜಾನಪದ ಕೊಳಲು-ಬ್ಯಾಂಡ್ ವಾದನ ನಡೆಯಲಿದೆ.




    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries