ಇಂದಿನಿಂದ ಎಡನೀರು ಮಠಾಧೀಶರ ಚಾತುಮರ್ಾಸ್ಯ ವ್ರತ ಆರಂಭ
ನೆರವೇರಿದ ಉಗ್ರಾಣ ಮುಹೂರ್ತ-ಹೊರೆಕಾಣಿಕೆ ಮೆರವಣಿಗೆ
ಬದಿಯಡ್ಕ: ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ 58 ನೇ ಚಾತುಮರ್ಾಸ್ಯ ವ್ರತ ಆ.2 ರಿಂದ ಆರಂಭಗೊಂಡು ಸೆ.25 ರ ವರೆಗೆ 53 ದಿನಗಳ ಪರ್ಯಂತ ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು, ಬುಧವಾರ ಸಂಜೆ ಉಗ್ರಾಣ ಮುಹೂರ್ತ ವಿದ್ಯುಕ್ತವಾಗಿ ನೆರವೇರಿತು.
ಬುಧವಾರ ಸಂಜೆ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಉಗ್ರಾಣ ಮುಹೂರ್ತ ನೆರವೇರಿಸಿದರು. ಬಳಿಕ ಪೂಜ್ಯ ಶ್ರೀಗಳು ಸೇವಾ ಕಾರ್ಯಲಯವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಶ್ರೀಗಳು ನೆರೆದ ಭಕ್ತರಿಗೆ ಆಶೀರ್ವಚನಗೈದು, ಲೋಕದ ಸಮಸ್ತ ಒಳಿತಿಗೆ ಭಗವದನುಗ್ರಹ ಪ್ರಾಪ್ತಿ ಅಗತ್ಯವಿದೆ. ಪ್ರತಿಯೊಬ್ಬನ ಹೃದಯದಲ್ಲೂ ಪರಮಾತ್ಮನ ಚಿಂತನೆ, ಸನ್ಮಾರ್ಗದ ಆಲೋಚನೆಗಳಿಂದ ಧನಾತ್ಮಕತೆ ವೃದ್ದಿಯಾಗಿ ಐಶ್ವರ್ಯಗಳು ವೃದ್ದಿಸಲಿ ಎಂದು ಹಾರೈಸಿದರು. ಚಾತುಮರ್ಾಸ್ಯ ವ್ರತಾಚರಣೆಯ ಮೂಲಕ ಸನ್ಮಂಗಲದ ಸೃಷ್ಟಿ ಸಾಧ್ಯವಾಗುವುದು ಎಂದು ಅವರು ಈ ಸಂದರ್ಭ ತಿಳಿಸಿದರು.
ಚಾತುಮರ್ಾಸ್ಯ ವ್ರತಾಚರಣ ಸಮಿತಿ ಕಾಯರ್ಾದ್ಯಕ್ಷ ಡಾ.ಬಿ.ಎಸ್.ರಾವ್, ಪ್ರಧಾನ ಕಾರ್ಯದಶರ್ಿ ಕೈಯ್ಯೂರು ನಾರಾಯಣ ಭಟ್, ಪ್ರಮುಖರಾದ ಡಾ.ಗೋಪಾಲಕೃಷ್ಣ ಭಟ್ ಎರುಗಲ್ಲು, ಪ್ರೊ.ಎ.ಶ್ರೀನಾಥ್, ಬಾಲಕೃಷ್ಣ ವೊಕರ್ೂಡ್ಳು, ಅರವಿಂದ ಅಲೆವೂರಾಯ, ರಾಮ್ ಪ್ರಸಾದ್ ಕಾಸರಗೋಡು, ವೆಂಕಟರಮಣ ಹೊಳ್ಳ ಕೆ.ಎನ್, ಜಯರಾಮ ಮಂಜತ್ತಾಯ ಎಡನೀರು ಮೊದಲಾದವರು ಉಪಸ್ಥಿತರಿದ್ದರು.
ಚಾತುಮರ್ಾಸ್ಯದ ಅಂಗವಾಗಿ ಸಂಜೆ ಚಾತುಮರ್ಾಸ್ಯ ಕಾಸರಗೋಡು ಘಟಕದ ನೇತೃತ್ವದಲ್ಲಿ ಶ್ರೀಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆಗಮಿಸಿತು. ಶ್ರೀಮಠದ ವತಿಯಿಂದ ಸ್ವಾಗತಿಸಲಾಯಿತು.
ಆ.2 ರಂದು ಸಂಜೆ 6.30 ರಿಂದ ಉದ್ಘಾಟನಾ ಸಮಾರಂಭ ನಡೆಯಲಿದೆ. ಕನರ್ಾಟಕ ಲೋಕಸೇವಾ ಆಯೋಗ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಅವರ ಅಧ್ಯಕ್ಷತೆಯಲ್ಲಿ ಕನರ್ಾಟಕ ಬ್ಯಾಂಕ್ ಆಡಳಿತ ನಿದರ್ೇಶಕ ಮಹಾಬಲೇಶ್ವರ ಎಂ.ಎಸ್. ಅವರು ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಕನರ್ಾಟಕ ಬ್ರಾಹ್ಮಣ ಸಭಾ ಬೆಂಗಳೂರು ಇದರ ಅಧ್ಯಕ್ಷ ಕೆ.ಎನ್.ವೆಂಕಟ್ ನಾರಾಯಣ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಡಾ.ನರಸಿಂಹ ಅಡಿಗ ಭಾಗವಹಿಸುವರು.
ರಾತ್ರಿ 8 ರಿಂದ ಶ್ರೀಗಳವರಿಂದ ದೇವರ ನಾಮ ಕಾರ್ಯಕ್ರಮ ನಡೆಯಲಿದೆ. ಟಿ.ಜಿ.ಗೋಪಾಲಕೃಷ್ಣನ್ ವಯಲಿನ್, ಎಂ.ಕೆ.ಪ್ರಾಣೇಶ್ ಕೊಳಲು, ಆನೂರು ಅನಂತಕೃಷ್ಣ ಶರ್ಮ ಮೃದಂಗ, ಕಿರಣ್ ಗೋಡ್ಖಿಂಡಿ ತಬಲದಲ್ಲಿ ಸಹಕರಿಸುವರು.