ದುಖಃದಿಂದ ಪಾರಾಗುವುದು ಮತ್ತು ಗಳಿಕೆಯಿಂದ ಕೊಡುವುದು ಹೊರೆಕಾಣಿಕೆ-ಎಡನೀರು ಶ್ರೀ
ಎಡನೀರು ಶ್ರೀಗಳ ಚಾತುಮರ್ಾಸ್ಯ ಕಾರ್ಯಕ್ರಮದಲ್ಲಿ ಬದಿಯಡ್ಕ ಪೇಟೆ ಘಟಕದ ಹೊರೆಕಾಣಿಕೆ ಸಮರ್ಪಣೆ
ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಶ್ರೀಗಳ 58ನೇ ವರ್ಷದ ಚಾತುಮರ್ಾಸ್ಯ ವ್ರತಾಚರಣೆಯ ಪ್ರಯುಕ್ತ ಶ್ರೀಮದ್ ಎಡನೀರು ಮಠದ ಸಭಾಂಗಣದಲ್ಲಿ ನಡಯುತ್ತಿರುವ ಚಾತುಮರ್ಾಸ್ಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರುವಾರ ಸಂಜೆ ಕಾಸರಗೋಡಿನ ವಿದುಷಿಃ ಉಷಾ ಈಶ್ವರ ಭಟ್ ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ ಜರುಗಿತು.
ಕಚೇರಿಯ ಪಕ್ಕವಾದ್ಯದಲ್ಲಿ ಗಣರಾಜ ಕಾಲರ್ೆ (ವಯಲಿನ್), ಡಾ.ವಿ.ಆರ್.ನಾರಾಯಣ ಪ್ರಕಾಶ್ ಕೋಯಿಕ್ಕೋಡ್(ಮೃದಂಗ) ಈಶ್ವರ ಭಟ್ (ಘಟಂ) ಹಾಗೂ ರಾಜೀವ್ಗೋಪಾಲ್ (ಮೌತ್ ಓರ್ಗನ್)ನಲ್ಲಿ ಸಹಕರಿಸಿದರು.
ಇದಕ್ಕೂ ಮೊದಲು ಚಾತುಮರ್ಾಸ್ಯದ ಅಂಗವಾಗಿ ಬದಿಯಡ್ಕ ಪೇಟೆಯ ಭಕ್ತಾದಿಗಳಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಗೆ ಶ್ರೀಮಠಕ್ಕೆ ಆಗಮಿಸಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಕೇಶವಾನಂದ ಭಾರತೀ ಶ್ರೀಗಳು, ಶ್ರೀದೇವರಿಗೆ ಸಮಪರ್ಿಸುವ ಹೊರೆ ಕಾಣಿಕೆ ಎಂಬ ಪರಿಕಲ್ಪನೆಯು ವಿಶಾಲ ಅರ್ಥಹೊಂದಿದ್ದು, ಬದುಕಿನ ಜಂಜಡಗಳಿಂದ ನಮ್ಮಲ್ಲುಂಟಾಗುವ ಕ್ಲೇಶಗಳ ಹೊರೆಯನ್ನು ಭಗವಂತನ ಸನ್ನಿಧಿಯಲ್ಲಿ ಇಳಿಸಿ ದುಖಃದಿಂದ ಪಾರಾಗುವುದು ಮತ್ತು ನಮ್ಮ ಅಗತ್ಯದ ವಸ್ತುಗಳಲ್ಲಿ ಒಂದಷ್ಟನ್ನು ಪರರಿಗೂ ಮೀಸಲಿಟ್ಟು ಬದುಕಿನ ಸಾರ್ಥಕತೆಯನ್ನು ಪಡೆಯುವುದು ಆಗಿದೆ ಎಂದು ತಿಳಿಸಿದರು. ಭಕ್ತಿ, ಶ್ರದ್ದೆ ಮತ್ತು ಭಗವದ್ ನಾಮ ಸಂಕೀರ್ತನೆಯ ನಿತ್ಯಾನುಷ್ಠಾನ ಪ್ರತಿಯೊಬ್ಬರ ಹೃದಯದಲ್ಲಿ ಹುಟ್ಟಿ ಬೆಳೆಯಲಿ ಎಂದು ಶ್ರೀಗಳು ಆಶೀರ್ವಚನಗೈದು ಹಾರೈಸಿದರು.
ಚಾತುಮರ್ಾಸ್ಯ ಸಮಿತಿ ಕಾಯರ್ಾಧ್ಯಕ್ಷ ಡಾ.ಬಿ.ಎಸ್.ರಾವ್, ಪ್ರಧಾನ ಕಾರ್ಯದಶರ್ಿ ಕೆಯ್ಯೂರು ನಾರಾಯಣ ಭಟ್, ಜಯರಾಮ ಮಂಜತ್ತಾಯ ಎಡನೀರು, ಅರವಿಂದಕುಮಾರ ಅಲೆವೂರಾಯ, ಸೀತಾರಾಮ ಕುಂಜತ್ತಾಯ, ಚೇತನ್ ಕುಣಿಕುಳ್ಳಾಯ, ಅಶೋಕ ಪುಣಿಚಿತ್ತಾಯ, ಡಾ.ಗೋಪಾಲಕೃಷ್ಣ ಭಟ್ ಎರುಗಲ್ಲು, ನ್ಯಾಯವಾದಿ ನಾರಾಯಣ ಭಟ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ದಿನದ ವಿಶೇಷತೆಯಾಗಿ ಪ್ರದೋಷ ಸೇವೆಗಳು ನೆರವೇರಿದವು.
ಶನಿವಾರ ಸಂಜೆ 6.30 ರಿಂದ 8ರ ವರೆಗೆ ಮಂಗಳೂರಿನ ಪ್ರಸಿದ್ಧ ಭರತನಾಟ್ಯ ಕಲಾವಿದರಾದ ಅಥರ್ಾ ಪೆರ್ಲ ಮತ್ತು ಅಯನಾ ಪೆರ್ಲ ಅವರಿಂದ ವಿಶೇಷ ಭರತನಾಟ್ಯ ಪ್ರದರ್ಶನ ಜರಗಲಿದೆ. ಬಳಿಕ 9 ಗಂಟೆಯವರೆಗೆ ಅಂತರಾಷ್ಟ್ರೀಯ ಖ್ಯಾತಿಯ ಕಾಸರಗೋಡಿನ ಶ್ರೀಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ತಂಡದವರಿಂದ ಕೆ.ವಿ.ರಮೇಶ್ ಅವರ ನಿದರ್ೇಶನದಲ್ಲಿ ನರಕಾಸುರ ವಧೆ-ಗರುಡ ಗರ್ವಭಂಗ ಬೊಂಬೆಯಾಟ ಪ್ರದರ್ಶನ ನಡೆಯಲಿದೆ.