HEALTH TIPS

No title

              ಭಕ್ತಿರಸದಲ್ಲಿ ತೇಲಾಡಿಸಿದ ಶ್ರೀಗಳ ಕಥಾ ಸಂಕೀರ್ತನೆ
    ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಸವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯದ ಭಾಗವಾಗಿ ಬುಧವಾರ ಶ್ರೀಮಠದಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು. ಸಂಜೆ ನಡೆದ ಸಾಂಸ್ಕೃತಿಕ ಸಂಜೆಯಲ್ಲಿ ಎಡನೀರು ಶ್ರೀಗಳಿಂದ ರುಕ್ಮಿಣೀ ಸ್ವಯಂವರ ಕಥಾ ಭಾಗದ ಹರಿಕಥಾ ಸಂಕೀರ್ತನೆ ವಿಶಿಷ್ಟವಾಗಿ ನೆರವೇರಿತು. ಸಂಕೀರ್ತನೆಗೆ ಹಿನ್ನೆಲೆಯಲ್ಲಿ ಲವಕುಮಾರ ಐಲ ಹಾಗೂ ಸತ್ಯನಾರಾಯಣ ಐಲ ಸಹಕರಿಸಿದರು.
   ಪರಮಾತ್ಮ ಶ್ರೀಕೃಷ್ಣನು ರುಕ್ಮಿಣಿಯ ಅಚಲ ಭಕ್ತಿ, ಶ್ರದ್ದೆಗಳಿಗೆ ಒಲಿದ ಪರಿಯನ್ನು ವಿವರಿಸಿದ ಶ್ರೀಗಳು ಭಗವಂತನಲ್ಲಿ ನಾವು ಹೊಂದುವ ಅಚಲವಾದ ಆಂತರಂಗಿಕ ಭಕ್ತಿಯಿಂದ ಧನಾತ್ಮಕ ಫಲ ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು. ಬದುಕಿನಲ್ಲಿ ಎದುರಾಗುವ ಸಂಕಷ್ಟಗಳಿಂದ ದೃತಿಗೆಡದೆ ಸದಾ ಭಗವನ್ನಾಮ ಸಂಕೀರ್ತನೆಯಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಎಂದು ಶ್ರೀಗಳು ತಿಳಿಸಿದರು. 
    .ಶುಕ್ರವಾರ  ಸಂಜೆ 6.30 ರಿಂದ ಕಣ್ಣನ್ ಬಾಲಕೃಷ್ಣ ಚೆನ್ನೈ ಅವರಿಂದ ಮಧುರ ವೀಣಾ ವಾದನ ನಡೆಯಲಿದ್ದು, ಗಣರಾಜ ಕಾಲರ್ೆ(ವಯಲಿನ್), ನಿಕ್ಷಿತ್ ಪುತ್ತೂರು(ಮೃದಂಗ), ತ್ರಿಚ್ಚಿ ಕೆ.ಆರ್.ಕುಮಾರ್(ಘಟಂ)ನಲಲಿ ಸಹಕರಿಸುವರು.

    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries