ಎಡನೀರಿನಲ್ಲಿ ಗಮನ ಸೆಳೆದ ತಾಳಮದ್ದಳೆ
ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರ 58ನೇ ಚಾತುಮರ್ಾಸ್ಯದ ಅಂಗವಾಗಿ ಮಂಗಳವಾರ ಸಂಜೆ ಶ್ರೀಮಠದ ಸಭಾಂಗಣದಲ್ಲಿ ಸಾಂಸ್ಕೃತಿಕ ಸಂಜೆಯ ಭಾಗವಾಗಿ "ಶೂರ್ಪನಖಾ-ಗುರುನೀತಿ" ಪ್ರಸಂಗಗಳ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಸತ್ಯನಾರಾಯಣ ಪುಣಿಚಿತ್ತಾಯ ಪೆರ್ಲ, ರಮೇಶ್ ಭಟ್ ಪುತ್ತೂರು, ಲಕ್ಷ್ಮೀಶ ಅಮ್ಮಣ್ಣಾಯ, ಜಗನ್ನಿವಾಸ ರಾವ್, ಉದಯ ಕುಂಬಾರ್ ಸಹಕರಿಸಿದರು. ಮುಮ್ಮೇಳದಲ್ಲಿ ಡಾ.ರಮಾನಂದ ಬನಾರಿ(ಶ್ರೀರಾಮ), ವಿದ್ವಾನ್.ಹಿರಣ್ಯ ವೆಂಕಟೇಶ್ವರ ಭಟ್ (ಶೂರ್ಪನಖಿ), ಪೆಮರ್ುದೆ ಜಯಪ್ರಕಾಶ ಶೆಟ್ಟಿ (ಲಕ್ಷ್ಮಣ), ಡಾ.ಶ್ರೀಪತಿ ಕಲ್ಲೂರಾಯ ಕೊಣಾಜೆ(ಸೀತೆ), ನಾ.ಕಾರಂತ ಪೆರಾಜೆ(ಕೃಪಾಚಾರ್ಯ), ಕೆಯ್ಯೂರು ನಾರಾಯಣ ಭಟ್(ಕೌರವ), ಡಾ.ಗೋಪಾಲಕೃಷ್ಣ ಭಟ್ ಎರುಗಲ್ಲು(ಕರ್ಣ), ರಾಜೇಂದ್ರ ಕಲ್ಲೂರಾಯ ಎಡನೀರು(ಅಶ್ವತ್ಥಾಮ)ಪಾತ್ರಗಳನ್ನು ನಿರ್ವಹಿಸುವ ಮೂಲಕ ಗಮನ ಸೆಳೆದರು.
ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆದವು. ಕಾಸರಗೋಡು ಅಣಂಗೂರಿನ ಶ್ರೀಭಿಕ್ಷು ಲಕ್ಷಣಾದಂತ ಸರಸ್ವತೀ ಮಹಿಳಾ ಭಜನಾ ಸಂಘದವರಿಂದ ಭಜನಾ ಸಂಕೀರ್ತನೆ ನಡೆಯಿತು.
ಬುಧವಾರ ಬೆಳಿಗ್ಗೆ ಚಾತುಮರ್ಾಸ್ಯದ ಪುತ್ತೂರು ಅಭಿಮಾನಿ ಶಿಷ್ಯರಿಂದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಿಂದ ಎಡನೀರು ಶ್ರೀಮಠಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಪುತ್ತೂರು ಶ್ರೀಮಹಾಲಿಂಗೇಶ್ವರ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ ಶೆಟ್ಟಿ ತೆಂಗಿನಕಾಯಿ ಒಡೆದು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿ, ಬಲರಾಮ ಆಚಾರ್ಯ, ಶ್ರೀಧರ ಬೈಪಡಿತ್ತಾಯ, ವೆಂಕಟೇಶಮೂತರ್ಿ, ಕೃಷ್ಣಪ್ರಸಾದ ಕೆದಿಲಾಯ, ಪ್ರೊ.ವೇದವ್ಯಾಸ ರಾಮಕುಂಜ, ಕೃಷ್ಣ ಬೈಪಡಿತ್ತಾಯ, ರವಿ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು. ಭಾಸ್ಕರ ಬಾರ್ಯ ಸ್ವಾಗತಿಸಿ ವಂದಿಸಿದರು.
ಶ್ರೀಎಡನೀರು ಕ್ಷೇತ್ರದಲ್ಲಿ ಬಳಿಕ ಹೊರೆಕಾಣಿಕೆ ಮೆರವಣಿಗೆಯನ್ನು ಸ್ವಾಗತಿಸಿ ಬರಮಾಡಲಾಯಿತು. ಸಂಜೆ ಸಾಂಸ್ಕೃತಿಕ ಸಂಜೆಯ ಭಾಗವಾಗಿ ರಾಮಕೃಷ್ಣ ಕಾಟುಕುಕ್ಕೆ ತಂಡದವರಿಂದ ದಾಸಸಂಕೀರ್ತನೆ ನಡೆಯಿತು.
ಗುರುವಾರ ಸಂಜೆ 6.30 ರಿಂದ ಎ.ಎನ್.ರಮೇಶ ಗುಬ್ಬಿ ಅವರಿಂದ ಚುಟುಕು ಉಪನ್ಯಾಸ, ಉಡುಪಮೂಲೆಯ ಭೂಮಿಕಾ ಪ್ರತಿಷ್ಠಾನ ಹಾಗೂ ಒಡಿಯೂರಿನ ಸಾತ್ವಿಕ ತೇಜ ಕಲಾಕೇಂದ್ರದವರಿಂದ ನೃತ್ಯ-ನಾಟ್ಯ ಕಲಾಸಿಂಚನ ನಡೆಯಲಿದೆ.