HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಮಂತ್ರಮುಗ್ದಗೊಳಿಸಿದ ವಯಲಿನ್ ಫ್ಯೂಶನ್-
   ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರ 58ನೇ ಚಾತುಮರ್ಾಸ್ಯದ ಅಂಗವಾಗಿ ಪ್ರತಿನಿತ್ಯ ನಡೆಯುತ್ತಿರುವ ಸಾಂಸ್ಕೃತಿಕ ಸಂಜೆ ಜಿಲ್ಲೆಯ ಕಲಾಪ್ರೇಮಿಗಳಿಗೆ ಕುತೂಹಲದ ವೇದಿಕೆಯಾಗಿ ಮೂಡಿಬರುತ್ತಿದೆ.
   ಶನಿವಾರ ಸಂಜೆ ಅಂತರಾಷ್ಟ್ರೀಯ ಖ್ಯಾತಿಯ ಬೆಂಗಳೂರಿನ ಡಾ.ಜ್ಯೋಸ್ಸ್ನಾ ಶ್ರೀಕಾಂತ್ ಅವರಿಂದ ವೈವಿಧ್ಯಮಯ ಮೈನವಿರೇಳಿಸುವ ವಯಲಿನ್ ಫ್ಯೂಷನ್ ಸಂಗೀತ ಪ್ರಸ್ತುತಗೊಂಡಿತು. ಹಂಸಧ್ವನಿ ರಾಗದಲ್ಲಿ ವಾತಾಪಿ ಗಣಪತಿಂ ಕೀರ್ತನೆಯಿಂದ ಆರಂಭಗೊಂಡ ತಮ್ಮ ವಿಶಿಷ್ಟ ಶೈಲಿಯ ಕಚೇರಿಯಲ್ಲಿ ಬಳಿಕ ಸಾಮ ರಾಗದಲ್ಲಿ ಮಾನಸ ಸಂಚಾರಿಣಿ, ಕದನಕುತೂಹಲ ರಾಗದಲ್ಲಿ ರಘುವಂಶ ಸುಧಾ, ಕಾಪಿ ರಾಗದಲ್ಲಿ ಜಗದೋದ್ದಾರನ ಗೀತೆಗಳ ವಾದನವನ್ನು ಪ್ರೇಕ್ಷಕರ ಮುಕ್ತಕಂಠದ ಕರತಾಡವದೊಂದಿಗೆ ಮುನ್ನಡೆಸಿದರು. ಜೊತೆಗೆ ತಂಬೂರಿ ಮೀಟಿದವ(ಸಿಂಧೂ ಬೈರವಿ), ಮಾಧವ ಮಾವುವ ದೇವ(ನೀಲಾಂಬರಿ), ನಗುಮೇವು(ಅಬೇರಿ), ಭಜನ್(ಬಾಯೋಜಿ ಬೈರವ್) ಸಹಿತ ದಕ್ಷಿಣಾದಿಯಲ್ಲಿ ನಾಟಿರಾಗವೆಂದು ಗುರುತಿಸಬಹುದಾದ ಉತ್ತರಾದಿ ಶೈಲಿಯ ಬೌಲಿಂಗ್ ದಿ ವಯಲಿನ್ ವಿಶಿಷ್ಟವಾಗಿ ಮೂಡಿಬಂತು. ಬಾರಯ್ಯ ಕೃಷ್ಣ, ಬ್ರಹ್ಮ ಮುರಾರೆ, ದಯಾನಂದ ಸರಸ್ವತೀ ರಚನೆಯ ಭೋ ಶಂಭೋ ಮತ್ತು ಮತ್ತಯ್ಯ ಭಾಗವತರ ಆಂಗ್ಲ ಗೀತೆಯೊಂದರ ವಯಲಿನ್ ಗಾಯನ ನಡೆಸಿದರು. ರಾಗ ಪಂತುರವಾಳಿ ಹಾಗೂ ಮಧ್ಯಮಾವತಿಯಲ್ಲಿ ಪ್ರಸಿದ್ದ ಗೀತೆ ಭಾಗ್ಯದಾ ಲಕ್ಷ್ಮೀ ಬಾರಮ್ಮ ಗೀತೆಯನ್ನು ಭೀಮ್ಸೇನ್ ಜೋಶಿಯವರ ಉತ್ತರಾದಿ ಹಾಗೂ ಚಾಲ್ತಿಯ ಸ್ಥಳೀಯ ಶೈಲಿಯಲ್ಲಿ ನುಡಿಸಿ ಗಮನ ಸೆಳೆದರು. ಘನಶ್ರೀ ರಾಗದ ತಿಲ್ಲಾನ ಜನಮನಸೂರೆಗೊಂಡಿತು. ವಯಲಿನ್ನೊಂದಿಗೆ ಕೀಬೋಡರ್್ ಹಾಗೂ ರಿದಂ-ಡ್ರಮ್ಸ್ ಜೊತೆಯಾಗಿ ಹೊಸ ಸಂಗೀತ ಲೋಕ ಸೃಷ್ಟಿಗೆ ಕಾರಣವಾಗಿ ಪ್ರೇಕ್ಷಕರ ಗರಿಷ್ಠ ತೃಪ್ತಿಗೆ ಕಾರಣವಾಯಿತು. ಕೀಬೋಡರ್್ ನಲ್ಲಿ ಪ್ರಸಿದ್ದ ಚಲನಚಿತ್ರ ಗೀತ ಸಂಯೋಜಕ ಶೇಡ್ರ್ಯಾಕ್ ಸೋಲಮನ್ ಹಾಗೂ ರಿದಂಪ್ಯಾಡ್-ಡ್ರಮ್ಸ್ನಲ್ಲಿ ಅಮೋಘವರ್ಷ ಸಾಥ್ ನೀಡಿ ಗಮನ ಸೆಳೆದರು.     
   ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀಶ್ರೀಗಳು ಉಪಸ್ಥಿತರಿದ್ದರು.
  ಶುಕ್ರವಾರ ಶ್ರೀಗಳಿಂದ ದೇವಭಾವ ಸಂಗೀತ ನಡೆಯಿತು. ಹಿಮ್ಮೇಳದಲ್ಲಿ ದೀಪಕ್ ಹೆಬ್ಬಾರ್(ಕೊಳಲು), ನಾಗಭೂಷಣ ಉಡುಪ(ಕೀಬೋಡರ್್), ಜಗದೀಶ್ ಕುರ್ತಕೋಟಿ(ತಬಲ), ಬಿ.ಎಸ್.ಅರುಣ್ಕುಮಾರ್ ಬೆಂಗಳೂರು(ಡ್ರಮ್)ನಲ್ಲಿ ಸಹಕರಿಸಿದರು.
   ಭಾನುವಾರ ವಿವಿಧ ವೈದಿಕ ಧಾಮರ್ಿಕ ಕಾರ್ಯಕ್ರಮಗಳು ನೆರವೇರಿದವು. ಸಂಜೆ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಅವರಿಂದ ಶ್ರೀಭಾಗವತ ಪ್ರವಚನ ಸಪ್ತಾಹ ಆರಂಭಗೊಂಡಿತು. ಬಳಿಕ ಸುರತ್ಕಲ್ ಇಲ್ಲಿಯ ಶ್ರೀನಾಟ್ಯಾಂಜಲಿ ಕಲಾ ಅಕಾಡೆಮಿಯ ಚಂದ್ರಶೇಖರ ನಾವುಡ ಶಿಷ್ಯವೃಂದದವರಿಂದ ದಶಾವತಾರ ನೃತ್ಯ ರೂಪಕ ಹಾಗೂ ಜಾನಪದ ನೃತ್ಯಗಳು ಪ್ರದರ್ಶನಗೊಂಡಿತು.
  ಸೋಮವಾರ ಭಾಗತ ಪ್ರವಚನದ ಎರಡನೇ ದಿನದ ಪ್ರವಚನ ನಡೆಯಿತು. ಬಳಿಕ ಸದಾಶಿವ ಆಚಾರ್ ಕಾಸರಗೋಡು ಬಳಗದವರಿಂದ ಸಂಗೀತ ಸಂಜೆ ಪ್ರಸ್ತುತಗೊಂಡಿತು.





   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries