HEALTH TIPS

No title

              ಚಾತುಮರ್ಾಸ್ಯದಲ್ಲಿ ಗಮನ ಸೆಳೆದ ಹಿಂದೂಸ್ಥಾನೀ ಭಜನ್ ಸಂಧ್ಯಾ
    ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಪಾದಂಗಳ 58ನೇ ಚಾತುಮರ್ಾಸ್ಯದ ಮೂರನೇ ದಿನವಾದ ಶನಿವಾರ ಶ್ರೀಮಠದಲ್ಲಿ ವಿವಿಧ ವೈದಿಕ, ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರದ್ದಾ ಭಕ್ತಿಯಿಂದ ನೆರವೇರಿದವು.
   ಧಾಮರ್ಿಕ-ಸಾಂಸ್ಕೃತಿಕ ಶಕ್ತಿಕೇಂದ್ರವಾಗಿ, ಶ್ರೀಶಂಕರ ಭಗವದ್ಪಾದರ ಶಿಷ್ಯ ಶ್ರೀತೋಟಕಾಚಾರ್ಯರ ಅವಿಚ್ಚಿನ್ನ ಪರಂಪರೆಯಲ್ಲಿ ಬಂದಿರುವ ಕೇರಳದ ಏಕೈಕ ಶ್ರೀಶಂಕರರ ಪೀಠವಾದ ಶ್ರೀಎಡನೀರು ಮಠದಲ್ಲಿ ಶನಿವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಜಾತಾ ಗುರವ್ ಧಾರವಾಡ ಅವರಿಂದ ಹಿಂದೂಸ್ಥಾನೀ ಗಾಯನ ಗಮನ ಸೆಳೆಯಿತು.
    ಸಮಾರಂಭದ ಮೊದಲಿಗೆ ಮಾತನಾಡಿದ ಹಿರಿಯ ಚಲನಚಿತ್ರನಟ-ರಂಗ ನಿದರ್ೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಪಾದಂಗಳು ಉಪಸ್ಥಿತರಿದ್ದರು. ಬಳಿಕ ನಡೆದ ಹಿಂದೂಸ್ಥಾನೀ ಭಜನ್ ಸಂಧ್ಯಾದಲ್ಲಿ ಧಾರವಾಡ ವಿ.ವಿ.ಯ ಸಂಗೀತ ವಿಭಾಗದ ಮುಖ್ಯಸ್ಥೆ ಸುಜಾತಾ ಗುರವ್ ಸುಶ್ರಾವ್ಯವಾದ ವಿವಿಧ ಗೀತೆಗಳನ್ನು ಪ್ರಸ್ತುತಪಡಿಸಿದರು. ಎರಡು ಗಂಟೆಗಳಷ್ಟು ಕಾಲ ನಡೆದ ಭಜನ್ ಸಂಧ್ಯಾ ನೆರೆದ ಭಕ್ತಜನರನ್ನು ಮಂತ್ರಮುಗ್ದರಾಗಿಸಿತು. ಹಿನ್ನೆಲೆಯಲ್ಲಿ ತಬಲಾದಲ್ಲಿ ಅಭಿಜಿತ್ ಶೆಣೈ, ಹಾಮರ್ೋನಿಯಂ ನಲ್ಲಿ ಜಗನ್ನಾಥ ಶೆಣೈ ಹಾಗೂ ತಾಳದಲ್ಲಿ ಕಾಸರಗೋಡು ಚಿನ್ನಾ ಸಾಥ್ ನೀಡಿದರು.
   ಭಾನುವಾರ ಮಂಜೇಶ್ವರದ ನಾಟ್ಯನಿಲಯಂ ಬಾಲಕೃಷ್ಣ ಮಾಸ್ತರ್ ರವರ ಶಿಷ್ಯಂದಿರಿಂದ ಭರತನಾಟ್ಯ ವೈಭವ ನೃತ್ಯೋತ್ಸವಂ ಪ್ರಸ್ತುತಗೊಂಡಿತು. ಸೋಮವಾರ ಕಾಸರಗೋಡಿನ ಗೀತಾ ವಿಹಾರದವರಿಂದ ಭಜನಾ ಸಂಕೀರ್ತನೆ ನಡೆಯಲಿದೆ.

    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries