ಚಾತುಮರ್ಾಸ್ಯದಲ್ಲಿ ರಂಜಿಸಿದ ನೃತ್ಯೋತ್ಸವ
ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಪಾದಂಗಳ 58ನೇ ಚಾತುಮರ್ಾಸ್ಯದ ನಾಲ್ಕನೇ ದಿನವಾದ ಭಾನುವಾರ ಶ್ರೀಮಠದಲ್ಲಿ ವಿವಿಧ ವೈದಿಕ, ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರದ್ದಾ ಭಕ್ತಿಯಿಂದ ನೆರವೇರಿದವು.
ಯಕ್ಷಗಾನ, ಸಂಗೀತ ಹಾಗೂ ನೃತ್ಯ ಕಲಾ ಕ್ಷೇತ್ರಗಳಲ್ಲಿ ಸ್ವತಃ ಅನುಭವಿಗಳಾದ ಶ್ರೀಕೇಶವಾನಂದ ಭಾರತೀ ಪಾದಂಗಳು ಸಾಂಸ್ಕೃತಿಕತೆಯ ಮೂಲಕ ಮಧುರ ಸಮಾಜ ನಿಮರ್ಾಣದಲ್ಲಿ ತಮ್ಮದೇ ಕೊಡುಗೆಗಳ ಮೂಲಕ ಅಸಂಖ್ಯ ಶಿಷ್ಯರನ್ನು ಹೊಂದಿದ್ದು, ಶ್ರೀಎಡನೀರು ಮಠದಲ್ಲಿ ಭಾನುವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಜೇಶ್ವರದ ನಾಟ್ಯನಿಲಯಂನ ನಿದರ್ೇಶಕ ಗುರು ಬಾಲಕೃಷ್ಣ ಮಾಸ್ತರ್ ಅವರ ಶಿಷ್ಯವೃಂದದವರಿಂದ "ನೃತ್ಯೋತ್ಸವಂ" ವಿಶೇಷ ನೃತ್ಯ ಕಾರ್ಯಕ್ರಮ ಪ್ರೇಕ್ಷಕರ ಸಂತೋಷಕ್ಕೆ ಕಾರಣವಾಯಿತು.
ನಾಟ್ಯನಿಲಯಂನ ಬದಿಯಡ್ಕ, ಕಾಸರಗೋಡು ಹಾಗೂ ಮಂಜೇಶ್ವರ ನೃತ್ಯ ಕೇಂದ್ರಗಳ 35 ಕ್ಕಿಂತಲೂ ಮಿಕ್ಕಿದ ಕಲಾವಿದರಿಂದ ಶಾಸ್ತ್ರೀಯ ನೃತ್ಯಗಳು ಪ್ರದರ್ಶನಗೊಂಡವು. ನೃತ್ಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕುತ್ತಿಕೋಲ್ ಉಣ್ಣಿಕೃಷ್ಣನ್, ಉಣ್ಣಿಕೃಷ್ಣನ್ ವೀಣಾಲಯ,ವಿಠಲ ಶೆಟ್ಟಿ, ಸುರೇಶ್ ಕಾಂಞಿಂಗಾಡು(ಹಾಡುಗಾರಿಕೆ), ಕಣ್ಣನ್ ಕೊಯಂಬುತ್ತೂರ್(ಮೃದಂಗ), ತಂಬಾನ್ ಮಾಣಿಯಾಟ್(ತಬಲಾ), ಬಾಲಕೃಷ್ಣನ್ ನೀಲೇಶ್ವರ(ಕೀಬೋಡರ್್), ಕೃಷ್ಣನ್(ರಿದಂಪ್ಯಾಡ್) ಜಯಪ್ರಕಾಶ್ ಕಣ್ಣೂರು(ಕೊಳಲು) ಸಹಕರಿಸಿದರು. ಗುರು ಬಾಲಕೃಷ್ಣ ಮಂಜೇಶ್ವರ ನಟುವಾಂಗದಲ್ಲಿ ಭಾಗವಹಿಸಿದರು. ಕಿರಣ್ಕುಮಾರ್ ಮಂಜೇಶ್ವರ ಸಹಕರಿಸಿದರು.
ನಿವೃತ್ತ ಶಿಕ್ಷಣಾಧಿಕಾರಿ ವೇಣುಗೋಪಾಲ ಎಡನೀರು ಸ್ವಾಗತಿಸಿ, ಪ್ರೊ.ಎ.ಶ್ರೀನಾಥ್ ವಂದಿಸಿದರು.
ಭಾನುವಾರ ಬೆಳಿಗ್ಗೆ ಶ್ರೀಗಳ ಚಾತುಮರ್ಾಸ್ಯ ಎಡನೀರು ಘಟಕದ ನೇತೃತ್ವದಲ್ಲಿ ಹೊರೆಕಾಣಿಕೆ ಮೆರವಣಿಗೆ ಆಗಮಿಸಿತು. ಶ್ರೀಕೇಶವಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಿದರು. ರಾಮಕೃಷ್ಣ ರಾವ್, ಬಾಲಕೃಷ್ಣ ಪೊಕರ್ೂಡ್ಳು, ಸೂರ್ಯನಾರಾಯಣ ಎಡನೀರು, ಚಾತುಮರ್ಾಸ್ಯ ನಿರ್ವಹಣಾ ಸಮಿತಿ ಕಾಯರ್ಾಧ್ಯಕ್ಷ ಡಾ.ಬಿ.ಎಸ್.ರಾವ್, ಕೆ.ವಿ.ಬಾಲಕೃಷ್ಣನ್, ಸ್ವಾಗತ ಸಮಿತಿ ಅಧ್ಯಕ್ಷ ಸುರೇಶ್ ನಾಯಕ್ ಪೂನಾ, ಜಯರಾಮ ಮಂಜತ್ತಾಯ ಎಡನೀರು,ನ್ಯಾಯವಾದಿ ಐ.ವಿ.ಭಟ್ ಮೊದಲಾದವರು ಉಪಸ್ಥಿತರಿದ್ದರು.
ಸೋಮವಾರ ಸಂಜೆ ಕಾಸರಗೋಡಿನ ಗೀತಾ ವಿಹಾರ ತಂಡದವರಿಂದ ಭಜನಾ ಸಂಕೀರ್ತನೆ ನಡೆಯಿತು. ಮಂಗಳವಾರ ಸಂಜೆ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಶರಸೇತು ಬಂಧನ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಪದ್ಯಾಣ ಗಣಪತಿ ಭಟ್, ದಿನೇಶ್ ಅಮ್ಮಣ್ಣಾಯ, ಪದ್ಯಾಣ ಶಂಕರನಾರಾಯಣ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಕೃಷ್ಣಪ್ರಕಾಶ ಉಳಿಯತ್ತಾಯ, ಲವಕುಮಾರ ಐಲ ಹಾಗೂ ಮುಮ್ಮೇಳದಲ್ಲಿ ಡಾ.ರಮಾನಂದ ಬನಾರಿ, ವಿದ್ವಾನ್ ಉಮಾಕಾಂತ ಭಟ್ ಮೇಲುಕೋಟೆ, ಉಜಿರೆ ಅಶೋಕ ಭಟ್ ಭಾಗವಹಿಸುವರು.