ಸಂಕೀರ್ತನೆಗಳಿಂದ ಧನಾತ್ಮಕ ಶಕ್ತಿ ವೃದ್ದಿ-ಏಕತೆ ಸಾಕಾರ-ಎಡನೀರು ಶ್ರೀ
ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಪಾದಂಗಳ 58ನೇ ಚಾತುಮರ್ಾಸ್ಯದ ಐದನೇ ದಿನವಾದ ಸೋಮವಾರ ಶ್ರೀಮಠದಲ್ಲಿ ವಿವಿಧ ವೈದಿಕ, ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರದ್ದಾ ಭಕ್ತಿಯಿಂದ ನೆರವೇರಿದವು.
ಯಕ್ಷಗಾನ, ಸಂಗೀತ ಹಾಗೂ ನೃತ್ಯ ಕಲಾ ಕ್ಷೇತ್ರಗಳಲ್ಲಿ ಸ್ವತಃ ಅನುಭವಿಗಳಾದ ಶ್ರೀಕೇಶವಾನಂದ ಭಾರತೀ ಪಾದಂಗಳು ಸಾಂಸ್ಕೃತಿಕತೆಯ ಮೂಲಕ ಮಧುರ ಸಮಾಜ ನಿಮರ್ಾಣದಲ್ಲಿ ತಮ್ಮದೇ ಕೊಡುಗೆಗಳ ಮೂಲಕ ಅಸಂಖ್ಯ ಶಿಷ್ಯರನ್ನು ಹೊಂದಿದ್ದು, ಶ್ರೀಎಡನೀರು ಮಠದಲ್ಲಿ ಸೋಮವಾರ ಸಂಜೆ ಕಾಸರಗೋಡಿನ ಗೀತಾ ವಿಹಾರ ತಂಡದಿಂದ ಸುಮಧುರ ಭಜನಾ ಸಂಕೀರ್ತನೆ ನಡೆಯಿತು.
ಸಂಕೀರ್ತನಕ್ಕೂ ಮೊದಲು ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿ, ಭಗವಂತನನ್ನು ಸಂಪ್ರೀತಗೊಳಿಸುವ ಹಾಗೂ ಧನಾತ್ಮಕ ಚಿಂತನೆಗಳನ್ನು ಉದ್ದೀಪಿಸುವ ಶಕ್ತಿ ಭಜನಾ ಸಂಕೀರ್ತನೆಗಳಿಗಿವೆ. ಜೊತೆಯಾಗಿ ಏಕತೆಯಿಂದ ಭಗವದ್ ಸಂಕೀರ್ತನೆಯ ಮೂಲಕ ದೇವರನ್ನು ಒಲಿಸಿಕೊಳ್ಳುವ ಸತ್ಸಂಗಗಳು ಧರ್ಮಸಂರಕ್ಷಣೆಯ ಪ್ರಮುಖ ಅಂಗ ಎಂದು ತಿಳಿಸಿದರು.
ಗೀತಾ ವಿಹಾರದ ಪರವಾಗಿ ರಂಗ ನಿದರ್ೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ನಡೆದ ಸಂಕೀರ್ತನೆಯಲ್ಲಿ ಖ್ಯಾತ ಗಾಯಕರಾದ ಕಿಶೋರ್ ಪೆರ್ಲ, ಜಯಾನಂದ ಕುಮಾರ್ ಹೊಸದುರ್ಗ, ಹಿರಿಯ ಭಜನಾ ಸಂಕೀರ್ತನಕಾರ ಬಾಬೂಜಿ ಭಟ್, ತಾರಾನಾಥ ಭಕ್ತ, ಸತ್ಯನಾರಾಯಣ ಕೆ ವಿವಿಧ ಭಜನ್ ಗೀತೆಗಳನ್ನು ಹಾಡಿದರು. ಉಮೇಶ್ ಪೈ(ತಬಲಾ), ಸತ್ಯನಾರಾಯಣ ಐಳ(ಹಾಮರ್ೋನಿಯಂ), ಕಾಸರಗೋಡು ಚಿನ್ನಾ ಹಾಗೂ ಮಹೇಶ್ ನಾಯಕ್(ತಾಳ) ಸಹಕರಿಸಿದರು.
ಹಿರಿಯ ಭಜನಾ ಸಂಕೀರ್ತನಕಾರರಾದ ಬಾಬೂಜಿ ಭಟ್ ಅವರು ಹಳೆಯ ಶೈಲಿಯಲ್ಲಿ ಭಜನ್ ಗೀತೆಗಳನ್ನು ಹಾಡುವ ಮೂಲಕ ಗಮನ ಸೆಳೆದರು.
ಮಂಗಳವಾರ ಸಂಜೆ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಶರಸೇತು ಬಂಧನ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಪದ್ಯಾಣ ಗಣಪತಿ ಭಟ್, ದಿನೇಶ್ ಅಮ್ಮಣ್ಣಾಯ, ಪದ್ಯಾಣ ಶಂಕರನಾರಾಯಣ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಕೃಷ್ಣಪ್ರಕಾಶ ಉಳಿಯತ್ತಾಯ, ಲವಕುಮಾರ ಐಲ ಹಾಗೂ ಮುಮ್ಮೇಳದಲ್ಲಿ ಡಾ.ರಮಾನಂದ ಬನಾರಿ, ವಿದ್ವಾನ್ ಉಮಾಕಾಂತ ಭಟ್ ಮೇಲುಕೋಟೆ, ಉಜಿರೆ ಅಶೋಕ ಭಟ್ ಭಾಗವಹಿಸಿದರು.