HEALTH TIPS

No title

            ರಾಜ್ಯದ ಪ್ರವಾಹ; ಮುಂದಿನ 5 ದಿನ ಸಾಧಾರಣ ಮಳೆ: ಐಎಂಡಿ
      ನವದೆಹಲಿ: ಪ್ರವಾಹ ಪೀಡಿತ ಕೇರಳದಲ್ಲಿ ಮುಂದಿನ ಐದು ದಿನಗಳ ಕಾಲ ಭಾರಿ ಮಳೆಯಾಗುವುದಿಲ್ಲ. ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಭಾನುವಾರ ಹೇಳಿದೆ. ಇದರಿಂದ ಜೀವ ಉಳಿಸಿಕೊಂಡರೆ ಸಾಕು ಎನ್ನುತ್ತಿರುವ ಸಾವಿರಾರು ಜನ ನಿಟ್ಟೂಸಿರು ಬಿಡುವಂತಾಗಿದೆ.
   ಶತಮಾನದ ಅತ್ಯಂತ  ಭೀಕರ ಪ್ರವಾಹದ ಹೊಡೆತಕ್ಕೆ ಸಿಲುಕಿ ದೇವರ ನಾಡು ಕೇರಳದಲ್ಲಿ ಈಗಾಗಲೇ 197 ಮಂದಿ ಪ್ರಾಣ ಕಳೆದುಕೊಂಡಿದ್ದು, ಅಲಪುಳ, ತ್ರಿಶೂರ್ ಮತ್ತು ಎನರ್ಾಕುಲಂ ಜಿಲ್ಲೆಗಳಲ್ಲಿ ಇನ್ನೂ ನೂರಾರು ಮಂದಿ ತಮ್ಮ ಮನೆಯಲ್ಲಿ ಆಹಾರ, ಕುಡಿಯಲು ನೀರು ಸಿಗದೆ ಪರದಾಡುತ್ತಿದ್ದಾರೆ.
  ಭಾನುವಾರ  ಸ್ವಲ್ಪ ಮಟ್ಟಿಗೆ ಮಳೆ ತಗ್ಗಿದ್ದು, ರಕ್ಷಣಾ ಕಾಯರ್ಾಚರಣೆ ಭರದಿಂದ ಸಾಗುತ್ತಿದೆ. 8 ಜಿಲ್ಲೆಗಳಲ್ಲಿ 58 ಎನ್ ಡಿಆರ್ ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಡಿಜಿ ತಿಳಿಸಿದ್ದಾರೆ.
   ಈ ಮಧ್ಯೆ ಪ್ರಯಾಣಿಕರ ಅನಾನುಕೂಲತೆಯನ್ನು ತಗ್ಗಿಸಲು ದೇಶೀಯ ವಿಮಾನಯಾನ ಸಂಸ್ಥೆಯು ತಿರುವನಂತಪುರ, ಕ್ಯಾಲಿಕಟ್ ಮತ್ತು ಕೊಯಮತ್ತೂರು ವಿಮಾನ ನಿಲ್ದಾಣಗಳಿಗೆ ಹೆಚ್ಚುವರಿ ವಿಮಾನಗಳನ್ನು ಅಳವಡಿಸಿವೆ. ಒಂಬತ್ತು ವಿದೇಶಿ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳ  ಸೇವೆಯ ಅವಧಿಯನ್ನು  ಮರುಹೊಂದಿಸಲಾಗಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
   ಸಂತ್ರಸ್ತರ ನೆರವಿಗಾಗಿ ದೇಶಾದ್ಯಂತ ನೆರವಿನ ಭರಪೂರವೇ ಹರಿದುಬರುತ್ತಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನಜರ್ಿ  10 ಕೋಟಿ ರೂಪಾಯಿ ಪರಿಹಾರವನ್ನು ನೀಡಿದ್ದಾರೆ.
  ಆಂಧ್ರಪ್ರದೇಶದ ಐಎಎಸ್ ಅಧಿಕಾರಿಗಳ ಸಂಘದಿಂದ ಒಂದು ದಿನದ ಸಂಬಳವನ್ನು ಪರಿಹಾರವಾಗಿ ನೀಡುವುದಾಗಿ ತಿಳಿಸಿದೆ. ಅನ್ ಬೊಡು ಕೊಚಿ ಸ್ವಯಂ ಸೇವಾ ಸಂಸ್ಥೆ ಪರಿಹಾರ ಸಾಮಾಗ್ರಿಗಳನ್ನು ಸಂಗ್ರಹಿಸಲು ಸಂಗ್ರಹಣ ಕೇಂದ್ರವನ್ನು ತೆರೆದಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries