HEALTH TIPS

No title

       ರಾಜ್ಯದ ಜಲಪ್ರಳಯ-ಪ್ರವಾಹ: ಸಾವಿನ ಸಂಖ್ಯೆ 67ಕ್ಕೆ ಏರಿಕೆ, ಮುಲ್ಲಾಪೆರಿಯಾರ್ ಡ್ಯಾಂ ನೀರಿನ ಪ್ರಮಾಣ ತಗ್ಗಿಸಿ; ತಮಿಳುನಾಡಿಗೆ ಮುಖ್ಯಮಂತ್ರಿ ಮನವಿ
    ತಿರುವನಂತಪುರಂ: ದೇವರನಾಡು ಕೇರಳದಲ್ಲಿ ಮತ್ತೆ ಮುಂಗಾರು ಮಳೆ ಆರ್ಭಟಿಸಿದ್ದು,  ಭೀಕರ ಪ್ರವಾಹದಿಂದ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ.
   ಈಗಾಗಲೇ ರಾಜ್ಯದ 12 ಜಿಲ್ಲೆಗಳಲ್ಲಿ ರೆಡ್ ಅಲಟರ್್ ಘೋಷಣೆ ಮಾಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು, ಮುಲ್ಲಪೆರಿಯಾರ್ ಡ್ಯಾಮ್ ನ ನೀರಿನ ಪ್ರಮಾಣವನ್ನು ತಗ್ಗಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ ಅವರಿಗೆ ಬುಧವಾರ ಮನವಿ ಮಾಡಿದ್ದಾರೆ.
   ಮುಲ್ಲಾಪೆರಿಯಾರ್ ಡ್ಯಾಮ್ ನ ನೀರಿನ ಪ್ರಮಾಣ ಈಗ 142 ಅಡಿ ಇದ್ದು. ಅದನ್ನು 139 ಅಡಿಗೆ ತಗ್ಗಿಸುವಂತೆ ಕೇರಳ ಸಿಎಂ ತಮಿಳುನಾಡು ಸಿಎಂಗೆ ಪತ್ರ ಬರೆದಿದ್ದಾರೆ. ಅಲ್ಲದೆ ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ರಾಜ್ಯಕ್ಕೆ ಕೇಂದ್ರ ಸಕರ್ಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿರುವುದಾಗಿ ಪಿಣರಾಯ್ ವಿಜಯನ್ ಟ್ವೀಟ್ ಮಾಡಿದ್ದಾರೆ.
   ಮಲ್ಲಾಪೆರಿಯಾರ್ ಡ್ಯಾಮ್ ಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, ಈಗಾಗಲೇ ಡ್ಯಾಮ್ ನ ಗರಿಷ್ಠ ಮಟ್ಟ ಅಂದರೆ 142 ಅಡಿ ತಲುಪಿದೆ. ಡ್ಯಾಂನ ಎಲ್ಲ 13 ಗೇಟ್ ಗಳನ್ನು ತೆರೆದು ನೀರನ್ನು ಹೊರ ಬಿಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಮುಲ್ಲಾ ಪೆರಿಯಾರ್ ಡ್ಯಾಮ್ ಸುತ್ತಮುತ್ತಲ ಪ್ರದೇಶದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದಾರೆ.
  ಇಡುಕ್ಕಿ ಡ್ಯಾಂನಿಂದಲೂ ನೀರು ಬಿಡುವ ಪ್ರಕ್ರಿಯೆ ಮುಂದುವರೆದಿದ್ದು, ಎಲ್ಲ ಐದೂ ಗೇಟ್ ಗಳನ್ನು ತೆರೆದು ಅಪಾರ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇಲ್ಲಿ ಪ್ರತೀ ಒಂದು ಸೆಕೆಂಡಿಗೆ 8.5 ಲಕ್ಷ ಲೀಟರ್ ನೀರನ್ನು ಡ್ಯಾಂನಿಂದ ಹೊರಗೆ ಬಿಡಲಾಗುತ್ತಿದೆ. ಕೇರಳದ ಇತಿಹಾಸದಲ್ಲಿಯೇ ಇದೇ ಮೊದಲು ಎಂಬಂತೆ ಇಲ್ಲಿ ಬಾರಿ ಪ್ರಮಾಣದ ನೀರನ್ನು ನಿರಂತರವಾಗಿ ಹೊರಗೆ ಬಿಡಲಾಗುತ್ತಿದೆ. ಪರಿಣಾಮ ಇಡುಕ್ಕಿ ಡ್ಯಾಂ ಸುತ್ತಮುತ್ತಲ ಸುಮಾರು 50 ಗ್ರಾಮಗಳ 10 ಸಾವಿರಕ್ಕೂ ಅಧಿಕ ಮಂದಿ ಸಂತ್ರಸ್ಥರಾಗಿದ್ದಾರೆ.
     67ಕ್ಕೇರಿದ ಸಾವಿನ ಸಂಖ್ಯೆ:
   ಕೇರಳದಲ್ಲಿ ಮಳೆಯಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 67ಕ್ಕೇ ಏರಿಕೆಯಾಗಿದ್ದು, ಕಂಜೂರಿನಲ್ಲಿ ನಿನ್ನೆ ಐದು ಮಂದಿ ಹಾಗೂ ಇಂದು ಒಂದೇ ದಿನ 25 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ರೆಡ್ ಅಲಟರ್್ ಘೋಷಣೆಯಾಗಿರುವ ಎಲ್ಲ 12 ಜಿಲ್ಲೆಗಳಲ್ಲೂ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ರಸ್ತೆ, ರೈಲು ಸಂಚಾರ ಸ್ಥಗಿತವಾಗಿದೆ. ಭಾರತೀಯ ಸೇನೆ ಮತ್ತು ಎನ್ ಡಿಆರ್ ಎಫ್ ತಂಡಗಳು ರಕ್ಷಣಾ ಕಾಯರ್ಾಚರಣೆಯಲ್ಲಿ ತೊಡಗಿವೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries