HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಶೇಣಿ ಶತಕ: ಪೆರ್ಲದಲ್ಲಿ ಆರು ದಿನಗಳ ಯಕ್ಷ ನುಡಿಸರಣಿ
    ಪೆರ್ಲ: ಶೇಣಿ ರಂಗಜಂಗಮ ಟ್ರಸ್ಟ್ ಮತ್ತು  ಯಕ್ಷಸ್ನೇಹಿ ಬಳಗ ಪೆರ್ಲ ಇದರ ಸಂಯುಕ್ತ ನೇತೃತ್ವದಲ್ಲಿ  ಶೇಣಿ ಶತಕ ಸರಣಿಯ ಏಳನೇ ಕಾರ್ಯಕ್ರಮವಾಗಿ ಆರು ದಿನಗಳ ಯಕ್ಷಕೂಟ ಸರಣಿಯು  ಆಗಸ್ಟ್ 7ರಿಂದ 12ರ ತನಕ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರ ಸಭಾಂಗಣದಲ್ಲಿ ಜರಗಲಿದೆ.
   ಸಮಾರಂಭದ ಕರೆಯೋಲೆಯನ್ನು ಇತ್ತೀಚಿಗೆ ಶೇಣಿ ಶಾರದಾಂಬಾ ವಿದ್ಯಾಮಂದಿರದಲ್ಲಿ ನಡೆದ ಶೇಣಿ ಶತಕ ಸರಣಿಯ 6ನೇ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ವೈದಿಕ ವಿದ್ವಾಂಸ  ಪಂಜ ಭಾಸ್ಕರ ಭಟ್ ಬಿಡುಗಡೆಗೊಳಿಸಿದರು. ಈ ವೇಳೆ ಹಿರಿಯ ಕಲಾವಿದ, ವಾಗ್ಮಿ ಉಜಿರೆ ಅಶೋಕ ಭಟ್, ವೇ.ಮೂ ನಡುಮನೆ ಗೋಪಾಲಕೃಷ್ಣ ಭಟ್, ಪತ್ರಕರ್ತ ಎಂ.ನಾ ಚಂಬಲ್ತಿಮಾರ್ ಮೊದಲಾದವರು ಉಪಸ್ಥಿತರಿದ್ದರು.
     ಆ.7ರಂದು ಸಂಜೆ 4.30ಕ್ಕೆ  ಸರಣಿಯ ಉದ್ಘಾಟನೆ ನಡೆಯಲಿದ್ದು, ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದ ಪ್ರಬಂಧಕ ಸೀತಾರಾಮ ಬಳ್ಳುಳ್ಳಾಯ ಉದ್ಘಾಟಿಸುವರು. ಕಣಿಪುರ ಯಕ್ಷಗಾನ ಮಾಸಪತ್ರಿಕೆ ಸಂಪಾದಕ ಎಂ.ನಾ ಚಂಬಲ್ತಿಮಾರ್ ಶೇಣಿ ಸ್ಮೃತಿಯಲ್ಲಿ ನುಡಿನಮನ ಸಲ್ಲಿಸುವರು.  ಪೆರ್ಲ ವಿದ್ಯಾರಣ್ಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಜಿ.ರಾಮಭಟ್ ಅಧ್ಯಕ್ಷತೆ ವಹಿಸುವರು. ವಿದ್ಯಾರಣ್ಯ ವಿದ್ಯಾವರ್ಧಕ ಸಂಘದ ಪ್ರಬಂಧಕ ಕೃಷ್ಣ ವಿಶ್ವಾಮಿತ್ರ ಅತಿಥಿಗಳಾಗಿ ಪಾಲ್ಗೊಳ್ಳುವರು. ಸತೀಶ ಪುಣಿಂಚಿತ್ತಾಯ ಸ್ವಾಗತಿಸಿ, ಶೇಣಿ ವೇಣುಗೋಪಾಲ ಭಟ್ ನಿರೂಪಿಸುವರು.
   ಬಳಿಕ ಯಕ್ಷಗಾನ ವೈಭವ ನಡೆಯಲಿದ್ದು, ಸತೀಶ ಪುಣಿಂಚಿತ್ತಾಯ ಪೆರ್ಲ, ಮನೋಹರ ಬಲ್ಲಾಳ ಅಡ್ವಳ,  ಸಮೃದ್ಧ ಪುಣಿಂಚಿತ್ತಾಯ ಪೆರ್ಲ, ಕು. ವಾಣಿಶ್ರೀ ಬಜಕೂಡ್ಲು, ರತ್ಮಮಾಲ ಎಸ್.ವಿ ಭಾಗವತರಾಗಿ ಪಾಲ್ಗೊಳ್ಳುವರು. ಹಿಮ್ಮೇಳದಲ್ಲಿ ಶ್ರೀಧರ ಎಡಮಲೆ, ಶ್ರೀಧರ ವಿಟ್ಲ ಪಾಲ್ಗೊಳ್ಳಲಿದ್ದು, ಶೇಣಿ ವೇಣುಗೋಪಾಲ ಭಟ್ ನಿರೂಪಿಸುವರು.
    ಆ. 8ರಂದು ಸಂಜೆ 4.30ರಿಂದ ಗೋವಿಂದ ಭಟ್ ಬೇಂದ್ರೋಡು ಬಳಗದವರಿಂದ ಮಾಗಧವಧೆ, 9ರಂದು ವಿಶ್ವಭಾರತಿ  ಯಕ್ಷಸಂಜೀವಿನಿ ಟ್ರಸ್ಟ್ ಮುಡಿಪು ಇವರಿಂದ ಜಾಂಬವತಿ ಕಲ್ಯಾಣ, 10ರಂದು ಧೀಶಕ್ತಿ ಮಹಿಳಾ ಯಕ್ಷಬಳಗ ಪುತ್ತೂರು ಇವರಿಂದ ಸಮರ ಸೌಗಂಧಿಕ, 11ರಂದು ಶ್ರೀವಿಷ್ಣು ವಿನಾಯಕ ಮಹಿಳಾ ಯಕ್ಷಗಾನ ಸಂಘ ಕಾವುಗೋಳಿ, ಕಾಸರಗೋಡು ಇವರಿಂದ ಕರ್ಣಬೇಧನ, 12ರಂದು ಉತ್ತರನ ಪೌರುಷ ತಾಳಮದ್ದಳೆ ಜರಗಲಿದ್ದು ಅರ್ಥಧಾರಿಗಳಾಗಿ  ವಿಟ್ಲ ಶಂಭು ಶರ್ಮ, ಮೂಲಡ್ಕ ನಾರಾಯಣ, ಶೇಣಿ ವೇಣುಗೋಪಾಲಭಟ್, ಉದಯ ಶಂಕರ ಭಟ್ ಅಮೈ ಪಾಲ್ಗೊಳ್ಳುವರು. ಸತೀಶ ಪುಣೀಂಚಿತ್ತಾಯ ಬಳಗದವರು ಹಿಮ್ಮೇಳದಲ್ಲಿ ಪಾಲ್ಗೊಳ್ಳುವರು. 12ರಂದು ನಡೆಯುವ ಸಮಾರೋಪ ಸಮಾರಂಭವನ್ನು ಬ್ರಹ್ಮಶ್ರೀ ಗಣಾಧಿರಾಜ ತಂತ್ರಿ ಕೊಲ್ಲಂಗಾನ ಉದ್ಘಾಟಿಸುವರು. ಸದಾಶಿವ ಭಟ್ ಹರಿನಿಲಯ ಅಧ್ಯಕ್ಷತೆ ವಹಿಸುವರು. ಉದ್ಯಮಿ ವೇಣುಗೋಪಾಲ್ ತತ್ವಮಸಿ, ಪೆರ್ಲ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಾಜೇಂದ್ರ ಬಿ, ಅತಿಥಿಗಳಾಗಿ ಪಾಲ್ಗೊಳ್ಳುವರು.
   
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries