ಭಾರತೀಯರೆಂಬ ಅವಿನಾಭಾವ ಸಂಬಂಧ ನಮ್ಮನ್ನು ಬೆಸೆದಿದೆ = ಸಾಹಿತಿ ಅಪ್ಪಯ್ಯ ಯಾದವ್
ಬದಿಯಡ್ಕ: ದೇಶವು ಸ್ವತಂತ್ರವಾಗಿ 72 ವರ್ಷಗಳಾದುವು. ಪರಕೀಯರ ಕಪಿಮುಷ್ಟಿಯಲ್ಲಿ ನಲುಗಿದ ದೇಶವೊಂದು ಜನರ ಅತೀವ ಪರಿಶ್ರಮ, ಒಗ್ಗಟ್ಟು ಹಾಗೂ ಹೋರಾಟದ ಮೂಲಕ ಸ್ವತಂತ್ರವಾಯಿತು. ಜೊತೆಗೆ ತಾನು ಕಳೆದುಕೊಂಡ ಸಂಪತ್ತು ಸಮೃದ್ಧಿಯನ್ನು ಮರಳಿ ಪಡೆಯವಲ್ಲಿ ಸಫಲವಾಯಿತು. ವೈವಿದ್ಯತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಹಲವಾರು ಜಾತಿ, ಮತ, ಆಚರಣೆಗಳು, ಚಾಲ್ತಿಯಲ್ಲಿವೆಯಾದರೂ ನಾವೆಲ್ಲರೂ ಭಾರತೀಯರೆಂಬ ಅವಿನಾಭಾವ ಸಂಬಂಧ ನಮ್ಮನ್ನು ಬೆಸೆದಿದೆ ಎಂದು ಸಾಹಿತಿ ಅಪ್ಪಯ್ಯ ಯಾದವ್ ತಿಳಿಸಿದರು.
ಎಂ. ಜಿ. ಎಲ್. ಪಿ ಶಾಲೆ ಪೆರಡಾಲ ಹಾಗೂ ಮೀಡಿಯಾ ಕ್ಲಾಸಿಕಲ್ ಕಾಸರಗೋಡು ಇದರ ಜಂಟಿ ಅಶ್ರಯದಲ್ಲಿ ಪೆರಡಾಲದ ಕೊರಗ ಕಾಲನಿಯಲ್ಲಿ ನಡೆಸಿದ 72ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಗೈದು ಅವರು ಮಾತನಾಡಿದರು.
ಎಂ. ಜಿ. ಎಲ್. ಸಿ ಶಿಕ್ಷಕ ಬಾಲಕೃಷ್ಣ ಅಚ್ಚಾಯಿ ಅಧ್ಯಕ್ಷತೆ ವಹಿಸಿದರು. ಮೀಡಿಯಾ ಕ್ಲಾಸಿಕಲ್ ಅಧ್ಯಕ್ಷ ಶ್ರೀಕಾಂತ್ ನೆಟ್ಟಣಿಗೆ , ಶಾಲಾ ರಕ್ಷಕ ಶಿಕ್ಷಕ ಸಂಘದ ಅದ್ಯಕ್ಷೆ ಸುಶಿಲಾ,ಅಂಗನವಾಡಿ ಶಿಕ್ಷಕಿ ಪುಷ್ಪಾ, ಹಾಗೂ ಕಾಲನಿ ನಿವಾಸಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಖಿಲೇಶ್ ನಗುಮುಗಂ ಸ್ವಾಗತಿಸಿ, ನಿತಿನ್ ಮೀಡಿಯಾ ಕ್ಲಾಸಿಕಲ್ ವಂದಿಸಿದರು.
ಪೆರಡಾಲ ಕಾಲನಿಯ ಮಕ್ಕಳು ದೇಶಭಕ್ತಿಗೀತೆಗಳನ್ನು ಹಾಡಿದರು. ಕಾಲನಿಯ ನಿವಾಸಿಗಳು ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.