ಎರಡು ತಿಂಗಳಲ್ಲಿ ಸಾಮಾಜಿಕ ಆಡಿಟ್ ಸಲ್ಲಿಸುವಂತೆ 9 ಸಾವಿರ ಶಿಶು ಪಾಲನಾ ಕೇಂದ್ರಗಳಿಗೆ ಸಕರ್ಾರ ಆದೇಶ
ನವದೆಹಲಿ : ಮುಂದಿನ ಎರಡು ತಿಂಗಳೊಳಗೆ ದೇಶದಲ್ಲಿನ 9 ಸಾವಿರ ಶಿಶು ಪಾಲನಾ ಸಂಸ್ಥೆಗಳು ಸಾಮಾಜಿಕ ಆಡಿಟ್ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆದೇಶಿಸಿದೆ.
ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿನ ವಸತಿ ನಿಲಯಗಳಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಪ್ರಕರಣದ ವರದಿ ಬಂದ ನಂತರ ಈ ಆದೇಶ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆಡಿಟ್ ಕಾರ್ಯ ನಡೆಸಲಿದ್ದು, ಎರಡು ತಿಂಗಳೊಳಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಕ್ಕೆ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಇಂತಹ ಮಕ್ಕಳ ಪಾಲನಾ ಕೇಂದ್ರಗಳ ಪರಿಸ್ಥಿತಿ ಬಗ್ಗೆಯೂ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ದೇಶದಲ್ಲಿ ಒಟ್ಟಾರೇ 9, 462 ಶಿಶು ಪಾಲನಾ ಕೇಂದ್ರಗಳಿದ್ದು, ಈ ಪೈಕಿ 7, 109 ಕೇಂದ್ರಗಳು ಸಕರ್ಾರದೊಂದಿಗೆ ನೋಂದಣಿಯಾಗಿವೆ.ಆದಾಗ್ಯೂ, ಇಂತಹ ಸಂಸ್ಥೆಗಳಿಗೆ ಸಕರ್ಾರ ಅನುದಾನ ನೀಡುತ್ತಿದೆ. ರಾಜ್ಯಗಳಲ್ಲಿ ಇಂತಹ ಕೇಂದ್ರಗಳನ್ನು ಸಾಮಾನ್ಯವಾಗಿ ರಾಜ್ಯಗಳು ನಡೆಸುತ್ತಿರುತ್ತವೆ.
ಸ್ವಯಂ ಸೇವಾ ಸಂಸ್ಥೆಗಳಿಂದ ಮಕ್ಕಳ ಮೇಲೆ ನಿಂದನೆ ಹಾಗೂ ದುರ್ಬಳಕೆ ತಡೆಗಟ್ಟುವ ದೃಷ್ಟಿಯಿಂದ ರಾಜ್ಯಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮನೇಕಾ ಗಾಂಧಿ ಆಗ್ರಹಿಸಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿಯಿಂದ ಸ್ಪಷ್ಟನೆ ಪಡೆದ ನಂತರವೇ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ವಸತಿ ನಿಲಯಗಳಲ್ಲಿ ಮಹಿಳೆಯರು, ಬಾಲಕಿಯರು ಮತ್ತು ಮಕ್ಕಳಿಗೆ ತಾತ್ಕಾಲಿಕವಾಗಿ ವಸತಿ ಒದಗಿಸುವಂತೆ ಅವರು ಒತ್ತಾಯಿಸಿದ್ದಾರೆ.
ಇಂತಹ ವಸತಿ ನಿಲಯಗಳಲ್ಲಿ ಶೋಷಣೆಗೆ ಸಂಬಂಧಿಸಿದಂತೆ 2017 ಆಗಸ್ಟ್ ತಿಂಗಳಲ್ಲಿಯೇ ಮನೇಕಾಗಾಂಧಿ ಸಕರ್ಾರಕ್ಕೆ ಪತ್ರ ಬರೆದಿದ್ದಾಗಿ ತಿಳಿಸಿದ್ದು , ಸಂಸದರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ಶಿಶು ಪಾಲನಾ ಕೇಂದ್ರಗಳನ್ನು ಪರಿಶೀಲಿಸುವಂತೆ ಸೂಚಿಸಿದ್ದಾರೆ.