HEALTH TIPS

No title

           ಸಾಮಾಜಿಕ ಮಾದ್ಯಮಗಳಲ್ಲಿ ಚುನಾವಣಾ ಪ್ರಕ್ರಿಯೆ ದುರ್ಬಳಕೆಗೆ ಅವಕಾಶವಿಲ್ಲ: ರವಿಶಂಕರ್ ಪ್ರಸಾದ್
    ನವದೆಹಲಿ: ಸಾಮಾಜಿಕ ಜಾಲತಾಣದ ದುರ್ಬಳಕೆ ವಿರುದ್ಧ ಭಾರತ ಗಂಬೀರವಾದ ಕ್ರಮ ತೆಗೆದುಕೊಳ್ಳುವುದಕ್ಕೆ ನಿರ್ಧರಿಸಿದೆ. ಇಂತಹಾ ತಾಣಗಳ ಬಲಸಿಕೊಂಡು ಚುನಾವಣೆ ಪ್ರಕ್ರಿಯೆಯನ್ನು ಟೀಕೆಸುವುದನ್ನು ಸಹಿಸಲಾಗುವುದಿಲ್ಲ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
   ಅಜರ್ೆಂಟೈನಾದ ಸಲಾಟದಲ್ಲಿ ಜಿ -20 ಡಿಜಿಟಲ್ ಎಕಾನಮಿ ಮಿನಿಸ್ಟೋರಿಯಲ್ ಮೀಟಿಂಗ್ ನಲ್ಲಿ ಮಾತನಾಡಿದ ಪ್ರಸಾದ್ ಶುದ್ದ ಪ್ರಜಾಪ್ರಭುತ್ವದ ಪ್ರಕ್ರಿಯೆಯ ಕುರಿತು ಎಂದಿಗೂ ರಾಜಿಯಾಗುವುದಿಲ್ಲ. ಇಂತಹಾ ಪ್ರಕ್ರಿಯೆಯನ್ನು ದುರ್ಬಲಗೊಳಿಸುವವರ ಕುರಿತು ಅದಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಒತ್ತಿ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದ ವೇದಿಕೆ ಮೂಲಕ  ಡೇಟಾವನ್ನು ದುರುಪಯೋಗಪಡಿಸಿಕೊಂಡದ್ದು ಕಂಡುಬಂದಲ್ಲಿ ಭಾರತವು ಗಂಭೀರವಾದ ಕ್ರಮ ಜರುಗಿಸಲಿದೆ.ಚುನಾವಣಾ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳಲು ನಾವು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಪ್ರಸಾದ್ ನುಡಿದರು.
   ಸಾಮಾಜಿಕ ಮಾದ್ಯಮ ದುರ್ಬಳಕೆ ವಿಚಾರ ಇದೇ ಕೆಲ ದಿನಗಳಲ್ಲಿ ದೇಶದಲ್ಲಿ ಚಚರ್ೆಯ ವಿಷಯವಾಗಿದ್ದು ಪ್ರಸಾದ್ ಅವರು ಮಾತನಾಡಿ ಈ ದುರ್ಬಳಕೆ ಸಂಬಂಧ ಸಕರ್ಾರ ಯಾವ ಕ್ರಮಕ್ಕೆ ಸಹ ಸಿದ್ದ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
  ಇತ್ತೀಚೆಗೆ ಸಿಬಿಐಬ್ರಿಟಿಷ್ ರಾಜಕೀಯ ಸಲಹಾ ಸಂಸ್ಥೆಯಾದ ಕೇಂಬ್ರಿಡ್ಜ್ ಅನಾಲಿಟಿಕ ವಿರುದ್ಧ ಪ್ರಾಥಮಿಕ ತನಿಖೆಗೆ ಚಾಲನೆ ನೀಡಿದೆ.
ಇದೇ ವೇಳೆ ಪ್ರಸಾದ್ ಮಾತನಾಡಿ  ಡಿಜಿಟಲ್ ಪ್ಲಾಟ್ ಫಾಮರ್್ ಗಳ ಳ ಆದಾಯದ ಕೆಲ ಭಾಗಗಳನ್ನು ಅತಿಥೇಯ ಮಾರುಕಟ್ಟೆಯಲ್ಲಿ ಮರು ವಿನಿಯೋಗಿಸುವ ಅಗತ್ಯವಿದೆ ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries