HEALTH TIPS

No title

          ಹುಶಾರ್ ಕಣ್ರೀ.. ದಾಖಲುಪತ್ರ ಹೊಂದದೆ ಹೊರರಾಜ್ಯ ಕಾಮರ್ಿಕರಿಗೆ ವಾಸಸೌಕರ್ಯ ಏರ್ಪಡಿಸುವ ಕಟ್ಟಡ ಮಾಲಕರ ವಿರುದ್ಧ ಕ್ರಿಮಿನಲ್ ಕೇಸು
   ಕಾಸರಗೋಡು: ಸರಿಯಾದ ದಾಖಲುಪತ್ರಗಳಿಲ್ಲದ ಹೊರರಾಜ್ಯ ಕಾಮರ್ಿಕರಿಗೆ ವಾಸ ಸೌಕರ್ಯ ಒದಗಿಸುವ ಕಟ್ಟಡ ಮಾಲಕರು ಮತ್ತು ಅವರಿಗೆ ಕೆಲಸ ಕೊಡಿಸುವ ಉದ್ಯೋಗ ಮಾಲಕರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಪೊಲೀಸರು ಮತ್ತು ಅಬಕಾರಿ ಇಲಾಖೆ ತೀಮರ್ಾನಿಸಿದೆ.
   ಇದಕ್ಕೆ ಹೊಂದಿಕೊಂಡು ಅಗತ್ಯದ ಕ್ರಮಕ್ಕೂ ಈಗಾಗಲೇ ಚಾಲನೆ ನೀಡಲಾಗಿದೆ. ಇದರಂತೆ ಹೊರರಾಜ್ಯ ಕಾಮರ್ಿಕರು ವಾಸಿಸುತ್ತಿರುವ ಎಲ್ಲಾ ಕಟ್ಟಡಗಳು, ಮನೆಗಳು ಮತ್ತು ಅವರು ದುಡಿಯುತ್ತಿರುವ ಉದ್ಯೋಗ ಸಂಸ್ಥೆಗಳಿಗೆ ತೆರಳಿ ಕಾಮರ್ಿಕ ಮಾಹಿತಿಗಳನ್ನು ಪೊಲೀಸರು ಮತ್ತು ಅಬಕಾರಿ ಇಲಾಖೆಯ ತಂಡ ಸಂಗ್ರಹಿಸತೊಡಗಿದೆ. ಹೊರರಾಜ್ಯಗಳಿಂದ ಕೇರಳಕ್ಕೆ ಕೆಲಸಕ್ಕಾಗಿ ಆಗಮಿಸುವವರು ಯಾವ ರಾಜ್ಯದವರಾಗಿದ್ದಾರೆ, ಅವರ ಹಿನ್ನಲೆಗಳು, ಆಧಾರ್ ಕಾರ್ಡ ಯಾ ಚುನಾವಣಾ ಗುರುತು ಚೀಟಿ ಇತ್ಯಾದಿ ದಾಖಲುಪತ್ರಗಳನ್ನು ಹೊಂದಿದ್ದಾರೆಯೇ ಎಂಬ ಪೂರ್ಣ ಮಾಹಿತಿಗಳನ್ನು ಸಂಗ್ರಹಿಸಿ ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಸಲ್ಲಿಸಿದ ಬಳಿಕವಷ್ಟೇ ಅವರನ್ನು ಕೆಲಸಕ್ಕೆ  ಸೇರಿಸಿ ವಾಸಸೌಕರ್ಯ ಏರ್ಪಡಿಸಬೇಕೆಂಬ ನಿದರ್ೆಶ ಸರಕಾರ ನೀಡಿದೆ. ಇಂತಹ ನಿದರ್ೆಶಗಳನ್ನು ಪಾಲಿಸದೆ ಹೊರರಾಜ್ಯ ಕಾಮರ್ಿಕರಿಗೆ ಕೆಲಸ ಕೊಡಿಸುವ ಸಂಸ್ಥೆಗಳ ಮಾಲಕರು  ಉದ್ಯೋಗ ಮತ್ತು ಏಜೆಂಟರು, ವಾಸ ಸೌಕರ್ಯ ಏರ್ಪಡಿಸುವ ಕಟ್ಟಡ ಮಾಲಕರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಪೊಲೀಸರು ಮತ್ತು ಅಬಕಾರಿ ಇಲಾಖೆ ಮುಂದಾಗಿದೆ.
   ಹೊರರಾಜ್ಯ ಕಾಮರ್ಿಕರು ರಾಜ್ಯದಲ್ಲಿ ಭಾರೀ ಸಂಖ್ಯೆಯಲ್ಲಿ ಕಂಡುಬರುತ್ತಿರುವ ಹಿನ್ನೆಲೆ,  ಕೇರಳದಲ್ಲಿ ಕೊಲೆ,ದರೋಡೆ, ಮಾದಕದ್ರವ್ಯ ಸಾಗಾಟ, ಬಳಕೆ ಇತ್ಯಾದಿ ಕ್ರಿಮಿನಲ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಹೊರರಾಜ್ಯ ಕಾಮರ್ಿಕರು ಮೂರು ಕೊಲೆಗಳನ್ನು ನಡೆಸಿರುವುದು ಈಗಾಗಲೇ ಖಾತರಿಯಾಗಿದೆ. ರಾಜ್ಯದಲ್ಲಿ ಅತೀ ಹೆಚ್ಚು ಎಂಬಂತೆ ಎನರ್ಾಕುಳಂ ಜಿಲ್ಲೆಯ ಪೆರುಂಬಾವೂರಿನಲ್ಲಿ ಮಾತ್ರವಾಗಿ ಒಂದೂವರೆ ಲಕ್ಷದಷ್ಟು ಹೊರರಾಜ್ಯ ಕಾಮರ್ಿಕರು ನೆಲೆಸಿದ್ದಾರೆ. ಈ ಪ್ರದೇಶದಲ್ಲಿ ಕಳೆದ ಒಂದು ವರ್ಷ 4550 ಕ್ರಿಮಿನಲ್ ಪ್ರಕರಣಗಳು ದಾಖಲುಗೊಂಡಿದ್ದು, ಅದರಲ್ಲಿ ಬಹುಪಾಲು ಮಂದಿ ಆರೋಪಿಗಳು ಹೊರರಾಜ್ಯ ಕಾಮರ್ಿಕರೇ ಆಗಿದ್ದಾರೆ. ಪೆರುಂಬಾವೂರಿನಲ್ಲಿ ಹೊರರಾಜ್ಯ ಕಾಮರ್ಿಕರು ಇಬ್ಬರು ಯುವತಿಯರನ್ನು ಕೊಲೆಗೈದಿದ್ದಾರೆ. ಹೊರರಾಜ್ಯಗಳಲ್ಲಿ ನಡೆದ ಕೊಲೆ ಇತ್ಯಾದಿ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಅದೆಷ್ಟೋ ಮಂದಿ ಹೊರರಾಜ್ಯ ಕಾಮರ್ಿಕರೆಂಬ ಸೋಗಿನಲ್ಲಿ ಕೇರಳಕ್ಕೆ ಬಂದು ತಲೆಮರೆಸಿಕೊಂಡು ಜೀವಿಸುತ್ತಿದ್ದಾರೆಂಬ ಮಾಹಿತಿಗಳು ಪೊಲೀಸರಿಗೆ ಲಭಿಸಿದೆ. ಹೀಗೆ ಸೇರಿರುವವರು ಅಮಲು ಪದಾರ್ಥ,ತಂಬಾಕು ಉತ್ಪನ್ನಗಳ ಸಾಗಾಟ ಮತ್ತು ಮಾರಾಟ ದಂಧೆಯಲ್ಲೂ ತೊಡಗಿದ್ದಾರೆ. ಬಾಂಗ್ಲಾದೇಶದಿಂದ ಆಕ್ರಮವಾಗಿ ಭಾರತಕ್ಕೆ ನುಸುಳಿರುವ ಬಾಂಗ್ಲಾ ಪ್ರಜೆಗಳು ಪಶ್ಚಿಮ ಬಂಗಾಳದವರೆಂಬ ಸೋಗಿನಲ್ಲಿ ಕೇರಳಕ್ಕೆ ಆಗಮಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಕ್ರಮವಾಗಿ ವಾಸಿಸತೊಡಗಿದ್ದಾರೆ. ಇದು ದೇಶದ ಆಂತರಿಕ ಭದ್ರತೆಗೆ ಆಪಾಯಕಾರಿಯಾಗಿದ್ದು ಆಂತಹವರನ್ನು ಪತ್ತೆಹಚ್ಚುವ ಕೆಲಸಕ್ಕೂ ಪೊಲೀಸರು ಚಾಲನೆ ನೀಡಿದ್ದಾರೆ. ಕೇಂದ್ರ ಸರಕಾರದ ಕಠಿಣ ನಿದರ್ೇಶಾನುಸಾರ ರಾಜ್ಯದಲ್ಲಿ ಇದೀಗ ಚುರುಕಿನ ಕ್ರಮಕ್ಕೆ ಮುಂದಾಗಬೇಕಾಗಿರುವುದು ಕಂಡುಬಂದಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries