ಜಲಪ್ರಳಯ : ನೆರವು ಕೇಂದ್ರ ಆರಂಭ
ಕಾಸರಗೋಡು: ಕೇರಳದಲ್ಲಿ ಸಂಭವಿಸಿರುವ ಭೀಕರವಾದ ಪ್ರಕೃತಿ ದುರಂತದಿಂದಾಗಿ ಸಂಕಷ್ಟಗಳನ್ನು ಅನುಭವಿಸುತ್ತಿರುವ ಜನರ ಕಷ್ಟ ಪರಿಹಾರಕ್ಕಾಗಿ ವಸ್ತು ರೂಪದಲ್ಲಿ ಸಹಾಯವನ್ನು ಮಾಡಲು ಕಾಸರಗೋಡು ಜಿಲ್ಲಾಡಳಿತ ನೇತೃತ್ವದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಈ ಕೆಳಗಿನಂತೆ ಸಂಗ್ರಹಣಾ ಕೇಂದ್ರಗಳನ್ನು ತೆರೆಯಲಾಗಿದೆ.
ಕಾಸರಗೋಡು ಸರಕಾರಿ ಕಾಲೇಜು, ಪಡನ್ನಕ್ಕಾಡು ಕೃಷಿ ವಿದ್ಯಾಲಯ, ತ್ರಿಕ್ಕರಿಪ್ಪುರ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಗಳಲ್ಲಿ ನೆರವನ್ನು ಸಲ್ಲಿಸಬಹುದು. ಈ ಕೇಂದ್ರಗಳಲ್ಲಿ ಚಾಜರ್್ ಆಫೀಸರ್ಗಳಾಗಿ ಡೆಪ್ಯೂಟಿ ತಹಶೀಲ್ದಾರ್ ವಿ.ಶ್ರೀಕುಮಾರ್, ಡೆಪ್ಯೂಟಿ ತಹಶಿಲ್ದಾರ್ ಎ.ಪವಿತ್ರನ್, ಡೆಪ್ಯೂಟಿ ತಹಶಿಲ್ದಾರ್ ಇ.ವಿ.ವಿನೋದ್ ಕಾರ್ಯನಿರ್ವಹಿಸುತ್ತಾರೆ. ಮಾತ್ರವಲ್ಲದೆ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೂ ಸಂಗ್ರಹಣಾ ಕೇಂದ್ರವನ್ನು ತೆರೆಯಲಾಗಿದೆ. ಈ ಮಹತ್ಕಾರ್ಯದಲ್ಲಿ ಸಾರ್ವಜನಿಕರಿಂದ ಸರ್ವ ವಿವಿಧ ಸಹಾಯ ಸಹಕಾರಗಳನ್ನು ಕೋರಿದೆ. ಹೊಸ ಬಟ್ಟೆಬರೆಗಳು, ಸಿದ್ಧ ಉಡುಪುಗಳು, ಸ್ಯಾನಿಟರಿ ನ್ಯಾಪ್ಕಿನ್ಗಳು, ಹಾಳಾಗದಂತಹ ಆಹಾರ ವಸ್ತುಗಳ ಪೊಟ್ಟಗಳು, ಹೊಸ ಪಾತ್ರೆಗಳು, ಕೇಕ್, ಬಿಸ್ಕತ್ತುಗಳು, ರಸ್ಕ್ ಎಂಬಿತ್ಯಾದಿ ಆಹಾರ ವಸ್ತುಗಳು, ಬಾಟಲಿ ನೀರು ಮುಂತಾದ ನಿತ್ಯೋಪಯೋಗಿ ವಸ್ತುಗಳನ್ನು ಈ ಕೇಂದ್ರಗಳಲ್ಲಿ ಸ್ವೀಕರಿಸಲಾಗುವುದು. ಧನಸಹಾಯವನ್ನು ನೀಡುವವರು ಕೇರಳ ಮುಖ್ಯಮಂತ್ರಿಗಳ ದುರಂತ ಪರಿಹಾರ ನಿಧಿಗೆ ಚೆಕ್/ಡಿಡಿ/ನಗದು ರೂಪದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೋ ನೇರವಾಗಿಯೋ ಜಮೆ ಮಾಡಬಹುದು.