HEALTH TIPS

No title

              ಜೈಲುಗಳ ಸಂದರ್ಶಕರ ಮಂಡಳಿ ನೇಮಕ ಮಾಡದ ರಾಜ್ಯಗಳ ವಿರುದ್ಧ ಸುಪ್ರೀಂಕೋಟರ್್ ಅಸಮಾಧಾನ
    ನವದೆಹಲಿ: ಪ್ರತಿನಿತ್ಯ ಕಾರಾಗೃಹಗಳನ್ನು ಪರಿಶೀಲಿಸುವ  ಸಂದರ್ಶಕರ  ಮಂಡಳಿಯನ್ನು  ಹಲವು  ರಾಜ್ಯಗಳಲ್ಲಿ  ಇನ್ನೂ  ನೇಮಕ ಮಾಡದಿರುವುದಕ್ಕೆ  ಸುಪ್ರೀಂಕೋಟರ್್ ತೀವ್ರ ಅಸಮಾಧಾನ  ವ್ಯಕ್ತಪಡಿಸಿದೆ.
    ಗೃಹ ಸಚಿವಾಲಯ  ಸಿದ್ಧಪಡಿಸಿರುವ  ಕಾರಾಗೃಹ  ನೀತಿ ಸಂಹಿತೆಯನ್ನು  ರಾಜ್ಯಗಳು ಏಕೆ ಪಾಲಿಸುತ್ತಿಲ್ಲ ಎಂದು ನ್ಯಾಯಮೂತರ್ಿಗಳಾದ  ಮದನ್ ಬಿ. ಲೊಕುರ್  ಮತ್ತು ದೀಪಕ್  ಗುಪ್ತ ಅವರನ್ನೊಳಗೊಂಡ ಪೀಠ , ಪ್ರಶ್ನಿಸಿದ್ದು, ಸಂದರ್ಶಕರ ಮಂಡಳಿ ನೇಮಕ ಅತ್ಯಗತ್ಯ ಎಂದು   ಅಭಿಪ್ರಾಯಪಟ್ಟಿದೆ.
   ದೆಹಲಿಯ  ತಿಹಾರ್ ಜೈಲು ಸೇರಿದಂತೆ ಹಲವು ರಾಜ್ಯಗಳಲ್ಲಿ  ಸಂದರ್ಶಕರ ಮಂಡಳಿ  ನೇಮಕ ಮಾಡಿಲ್ಲ ಎಂದು ವಕೀಲ  ಗೌರವ್ ಆಗರ್ ವಾಲ್   ಈ ಪೀಠದ ಮುಂದೆ ಮಾಹಿತಿ ನೀಡಿದ್ದರು.
   ಗೃಹ ಸಚಿವಾಲಯ ಸಿದ್ಧಪಡಿಸಿರುವ ಸ್ವೀಕಾರ್ಹ ದಾಖಲೆಗಳನ್ನು  ಗೃಹ ಇಲಾಖೆ ಏಕೆ ಪಾಲಿಸುತ್ತಿಲ್ಲ ಎಂಬುದನ್ನು ಗಮನಿಸಿಲ್ಲ ಎಂದು ನ್ಯಾಯಾಲಯ ಹೇಳಿದ್ದು,  ಸಂದರ್ಶಕರ  ಮಂಡಳಿ ನೇಮಿಸುವಂತೆ ರಾಜ್ಯಗಳಿಗೆ   ಸಲಹೆ ನೀಡುವಂತೆ  ಗೃಹ ಸಚಿವಾಲಯಕ್ಕೆ ತಿಳಿಸಿದೆ.
   ದೇಶದಲ್ಲಿನ 1382 ಕಾರಾಗೃಹಗಳು ಅಮಾನವೀಯ ಸ್ಥಿತಿಯಲ್ಲಿವೆ  ಎಂಬ ವಿಚಾರ   ಕುರಿತಂತೆ  ಸುಪ್ರೀಂಕೋಟರ್ಿನಲ್ಲಿ  ವಿಚಾರಣೆ ನಡೆಸುತ್ತಿದ್ದು, ಆಗಸ್ಟ್  8 ರಂದು ವಿಚಾರಣೆ ನಡೆಯಲಿದ್ದು, ಈ ಸಂದರ್ಭದಲ್ಲಿ  ತೆರೆದೆ  ಜೈಲುಗಳ ಬಗ್ಗೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
  ನ್ಯಾಯಾಲಯವು ದೇಶದಾದ್ಯಂತ ಮಿತಿಮೀರಿದ ಜೈಲಿಗಳಿಗೆ ತೀವ್ರವಾದ ವಿನಾಯಿತಿ ನೀಡಿದೆ. ಖೈದಿಗಳು ಕೂಡಾ ಮಾನವ ಹಕ್ಕುಗಳನ್ನು ಹೊಂದಿದ್ದು,  ಅವರನ್ನು ಪ್ರಾಣಿಗಳ ರೀತಿಯಲ್ಲಿ ಜೈಲಿನಲ್ಲಿ ಕೂಡಿಹಾಕಬಾರದು ಎಂದು ಸುಪ್ರೀಂಕೋಟರ್್   ಹೇಳಿಕೆ ನೀಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries