HEALTH TIPS

No title

               ಪುದುಕೋಳಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ
            ಹೊಸ ತಲೆಮಾರಿಗೆ ರಾಷ್ಟ್ರ ನಿಮರ್ಾಣದಲ್ಲಿ ಜವಾಬ್ದಾರಿಯುತ ಹೆಜ್ಜೆ ಇರಿಸಬೇಕು-ಗಣಪತಿ ಪ್ರಸಾದ್ ಕುಳಮರ್ವ                   
   ಬದಿಯಡ್ಕ: ರಾಷ್ಟ್ರದ ಸಾರ್ವಭೌಮತೆ, ಏಕತೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಯುವ ಸಮೂಹ ಮುಂದೆಬರಬೇಕು. ರಾಷ್ಟ್ರದ ಸ್ವಾತಂತ್ರ್ಯವು ತ್ಯಾಗ&ಬಲಿದಾನಗಳ ಕೊಡುಗೆಯಾಗಿದ್ದು, ಇಂದಿನ ವ್ಯಾವಹಾರಿಕ ಜಗತ್ತು ಇದನ್ನು ಅಥರ್ೈಸಬೇಕು ಎಂದು ಕಲ್ಲಕಟ್ಟ ಮಜದೂರರ ಅನುದಾನಿತ ಶಾಲಾ ನಿವೃತ್ತ ಶಿಕ್ಷಕ ಗಣಪತಿ ಪ್ರಸಾದ್ ಕುಳಮರ್ವ ಅಭಿಪ್ರಾಯ ವ್ಯಕ್ತಪಡಿಸಿದರು.
   ರಾಷ್ಟ್ರದ 72ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬುಧವಾರ ನೀಚರ್ಾಲು ಸಮೀಪದ ಪುದುಕೋಳಿಯ ಪ್ರೆಂಡ್ಸ್ ಪುದುಕೋಳಿ ತಂಡ ಪುದುಕೋಳಿ ಅಂಗನವಾಡಿ ಪರಿಸರದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಧ್ವಜಾರೋಹಣಗೈದು ಅವರು ಮಾತನಾಡಿದರು.
   ಯುವ ಸಂಘಟನೆಗಳು ಸ್ವಾವಲಂಬನೆಯ ಭವಿಷ್ಯ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಇನ್ನಷ್ಟು ಮುಂದುವರಿಯಬೇಕು ಎಂದು ತಿಳಿಸಿದ ಅವರು, ಸ್ವದೇಶಿ ಉತ್ಪನ್ನಗಳಿಗೆ ಮಹತ್ವ ನೀಡುವ ಮೂಲಕ ರಾಷ್ಟ್ರೀಯ ಆಥರ್ಿಕತೆಯ ಮಟ್ಟವನ್ನು ಬಲಪಡಿಸಬೇಕಿದೆ ಎಂದು ತಿಳಿಸಿದರು. ವಿಜ್ಞಾನ ತಂತ್ರಜ್ಞಾನಗಳ ಕೊಡುಗೆಗಳನ್ನು ಕ್ರಿಯಾತ್ಮಕವಾಗಿ ಬಳಸುವ ಮೂಲಕ ಸಮರ್ಪಕ ಬಳಕೆಯ ದೃಷ್ಟಿಯಲ್ಲಿ ಯುವ ಸಮೂಹ ಮನಮಾಡಬೇಕು. ರಾಷ್ಟ್ರದ ಅಸ್ಮಿತೆ, ಪರಂಪರೆಯ ಬಗ್ಗೆ ಹೊಸ ತಲೆಮಾರು ಜವಾಬ್ದಾರಿಯುತ ಹೆಜ್ಜೆಗಳೊಂದಿಗೆ ಭವ್ಯ ರಾಷ್ಟ್ರದ ಪುನರ್ ನಿಮರ್ಾಣದಲ್ಲಿ ಕೈಜೋಡಿಸಬೇಕು ಎಂದು ಅವರು ಕರೆನೀಡಿದರು.
   ಗ್ರಾ.ಪಂ. ಸದಸ್ಯೆ ಪ್ರೇಮಾ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ, ಶುಭಾಶಂಸನೆಗೈದು ಮಾತನಾಡಿದ ಪ್ರಗತಿಪರ ಕೃಷಿಕ ಪಿ.ಜಿ.ಶ್ರೀಕೃಷ್ಣ ಭಟ್ ಪುದುಕೋಳಿ ಅವರು, ರಾಷ್ಟ್ರದ ಪರಂಪರೆ, ಇತಿಹಾಸಗಳ ನೈಜ ವಿಷಯಗಳನ್ನು ಇಂದು ತಿರುಚಲಾಗುತ್ತಿದೆ. ರಾಷ್ಟ್ರದ ಸ್ವಾತಂತ್ರ್ಯ ಹೋರಾಟ ಸಹಿತ ಪವಿತ್ರ ಮಣ್ಣಿನ ಐತಿಹಾಸಿಕ ದಾಖಲಾತಿಗಳನ್ನು ಹೊಸ ತಲೆಮಾರಿಗೆ ತಿಳಿಯಪಡಿಸುವ ಪ್ರಯತ್ನಗಳು ಆಗಬೇಕಿದೆ ಎಂದು ತಿಳಿಸಿದರು. ಧರ್ಮ, ನ್ಯಾಯಗಳ ಮಹತ್ವದ ಬಗ್ಗೆ ಯುವ ಜನರಲ್ಲಿ ಗೌರವ ಮೂಡಿಸುವ ಕೆಲಸವಾಗಬೇಕಿದ್ದು, ವೀರ ಸೈನಿಕರಂತೆ, ಅನ್ನ  ನೀಡುವ ಕೃಷಿಕ ವರ್ಗವನ್ನು ಗೌರವಿಸುವ, ಕೃಷಿ ಕ್ಷೇತ್ರದತ್ತ ಹುಮ್ಮಸ್ಸಿನಿಂದ ತೊಡಗಿಸಿಕೊಳ್ಳುವ ಯುವಜನರಿಗೆ ಪ್ರೋತ್ಸಾಹ ಲಭ್ಯವಾಗಬೇಕು ಎಂದು ಅವರು ತಿಳಿಸಿದರು. 
   ತತ್ವಮಸಿ ಬಾಲಗೋಕುಲದ ವಿದ್ಯಾಥರ್ಿಗಳು ಪ್ರಾರ್ಥನಾಗೀತೆ, ರಾಷ್ಟ್ರಭಕ್ತಿ ಗೀತೆಗಳನ್ನು ಹಾಡಿದರು. ರಜನೀ ಸಂದೀಪ್ ಸ್ವಾಗತಿಸಿ, ಪಲ್ಲವಿ ವಂದಿಸಿದರು. ಭವ್ಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಪ್ರೆಂಡ್ಸ್ ಪುದುಕೋಳಿ ತಂಡದ ತಿಲಕ್ ರಾಜ್, ಸಂದೀಪ್, ಅಬ್ದುಲ್ಲ, ವಿಜಯನ್, ಪದ್ಮನಾಭ, ಗೋಪಾಲಕೃಷ್ಣ.ಕೆ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಸಿಹಿತಿಂಡಿ ವಿತರಿಸಲಾಯಿತು.


 
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries