ಶ್ರೀಶಂಕರ ಭಗವದ್ಪಾದರ ಯತಿ ಪರಂಪರೆಯ ಮುಕುಟ ಎಡನೀರು ಮಠ-ವಿದ್ವಾನ್.ವಿ.ಬಿ.ಹಿರಣ್ಯ
ಎಡನೀರು ಶ್ರೀಗಳ ಚಾತುಮರ್ಾಸ್ಯದ ಎರಡನೇ ದಿನ ವಿಶೇಷೋಪನ್ಯಾಸ
ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಪಾದಂಗಳ 58ನೇ ಚಾತುಮರ್ಾಸ್ಯದ ಎರಡನೇ ದಿನವಾದ ಶುಕ್ರವಾರ ಶ್ರೀಮಠದಲ್ಲಿ ವಿವಿಧ ವೈದಿಕ, ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರದ್ದಾ ಭಕ್ತಿಯಿಂದ ನೆರವೇರಿದವು.
ಧಾಮರ್ಿಕ-ಸಾಂಸ್ಕೃತಿಕ ಶಕ್ತಿಕೇಂದ್ರವಾಗಿ, ಶ್ರೀಶಂಕರ ಭಗವದ್ಪಾದರ ಜನ್ಮ ಭೂಮಿಯಾದ ಕೇರಳ ಏಕೈಕ ಶ್ರೀಶಂಕರರ ಶಿಷ್ಯ ಶ್ರೀತೋಟಕಾಚಾರ್ಯರ ಅವಿಚ್ಚಿನ್ನ ಪರಂಪರೆಯಲ್ಲಿ ಬಂದಿರುವ ಶ್ರೀಎಡನೀರು ಮಠದಲ್ಲಿ ಶುಕ್ರವಾರ ಸಂಜೆ ನಡೆದ ವಿಶೇಷೋಪನ್ಯಾಸ ಕಾರ್ಯಕ್ರಮ ಗಮನ ಸೆಳೆಯಿತು.
ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಅವರು ನಡೆಸಿಕೊಟ್ಟ "ಯತಿ ಚಾತುಮರ್ಾಸ್ಯ" ವಿಶೇಷೋಪನ್ಯಾಸವು ನೆರೆದ ಭಗವದ್ಬಕ್ತರ ಧಾಮರ್ಿಕ ಅರಿವನ್ನು ಜಾಗೃತಗೊಳಿಸುವಲ್ಲಿ ಸಫಲವಾಯಿತು.
ವಿದ್ವಾನ್ ಹಿರಣ್ಯ ಅವರು ತಮ್ಮ ಉಪನ್ಯಾಸದಲ್ಲಿ ಮಾತನಾಡಿ, ಶ್ರೀಶಂಕರ ಭಗವದ್ಪಾದರ ಪರಂಪರೆಯಲ್ಲಿ ಅನುಷ್ಠಾನ ಮತ್ತು ಶ್ರೀಶಂಕರರ ತತ್ವಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಶ್ರೀಎಡನೀರು ಮಠ ನಮಗೊದಗಿ ಬಂದಿರುವುದು ಈ ಮಣ್ಣಿನ ಪುಣ್ಯ ಎಂದು ತಿಳಿಸಿದರು.ಆದ್ದರಿಂದ ಶಂಕರ ಭಗವದ್ಪಾದರ ಯತಿ ಪರಂಪರೆಯ ಮುಕುಟವಾಗಿ ಎಡನೀರು ಮಠ ಭಕ್ತರನ್ನು ಉದ್ದರಿಸಿದೆ ಎಂದು ಅವರು ತಿಳಿಸಿದರು.
ಅವರು ಮುಂದುವರಿದು ತಮ್ಮ ಉಪನ್ಯಾಸದಲ್ಲಿ, ಭಗವಂತನಲ್ಲಿ ನಾವು ಹೊಂದಿರುವ ಭಕ್ತಿಯನ್ನು ಗುರುಗಳಲ್ಲೂ ಕಾಣಬೇಕು. ಶ್ರೀಶಂಕರರು "ಮಠ" ಕಲ್ಪನೆಗೆ ವಿಶೇಷ ಅರ್ಥನೀಡಿ ಪರಿವ್ರಾಜಕಾಚಾರ್ಯರನ್ನು ರಾಷ್ಟ್ರದ ನಾಲ್ಕು ಪೀಠಗಳ ಮೂಲಕ ಸ್ಥಾಪಿಸಿ ಸನಾತನ ಧರ್ಮ ಸಂರಕ್ಷಣೆ ದಾರಿಮಾಡಿಕೊಟ್ಟರು ಎಂದು ತಿಳಿಸಿದರು. ಚಾತುಮರ್ಾಸ್ಯ ಆಚರಣೆಯು ಕುಟುಂಬಿಕನಿಗೂ, ಯತಿಗಳಿಗೂ ಹೇಳಲ್ಪಟ್ಟಿದೆ. ಭಗವದ್ಪಾದರು ಹಾಕಿಕೊಟ್ಟಿರುವ ಚಾತುಮರ್ಾಸ್ಯ ಕ್ರಮಗಳನ್ನು ಹೆಚ್ಚೂ-ಕಡಿಮೆಯೂ ಆಗದಂತೆ ಮೂಲ ನಿದರ್ೇಶನದಲ್ಲಿ ಪಾಲಿಸಿದಾಗಷ್ಟೆ ಉದ್ದೇಶಿತ ಸಂಕಲ್ಪ ಪ್ರಾಪ್ತಿಯಾಗುವುದು ಎಂದು ತಿಳಿಸಿದರು.
ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಪಾದಂಗಳು ಉಪಸ್ಥಿತರಿದ್ದರು. ಬಳಿಕ ಕರಾವಳಿಯ ಸುಪ್ರಸಿದ್ದ ನೃತ್ಯ ವಿದ್ವಾನ್ ಚಂದ್ರಶೇಖರ ನಾವಡ ಅವರ ಸುಪುತ್ರಿ ಶ್ರೀಮತಿ ರಂಜನೀ ಕೃಷ್ಣ ಪ್ರಸಾದ್ ಅವರಿಂದ ಭರತನಾಟ್ಯ ಪ್ರದರ್ಶನ ಪ್ರಸ್ತುತಗೊಂಡಿತು.