ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರ ತಿಳಿಯುವ ಅವಕಾಶ ಕಲ್ಪಿಸಿ-ಶಂಕರ್ ಸಾರಡ್ಕ
ಮುಳ್ಳೇರಿಯ: ನಮ್ಮ ಇಷ್ಟಾರ್ಥ ಸಿದ್ಧಿಸಲು ನಾವು ಪೂಜೆ, ವ್ರತ ನಿಷ್ಠರಾಗುತ್ತೇವೆ. ಸುಮಂಗಲಿಯರು ತನ್ನ ಗಂಡನ ಮತ್ತು ಕುಟುಂಬದ ಕ್ಷೇಮಕ್ಕೆ ವರಮಹಾಲಕ್ಷ್ಮೀ ವ್ರತ, ಪೂಜೆಯನ್ನು ಶ್ರಾವಣ ಮಾಸದ ಹುಣ್ಣಿಮೆಯ ಮೊದಲ ಶುಕ್ರವಾರ ಮಾಡುತ್ತಾರೆ. ಆಸ್ತಿಕರಾಗಿ, ಮಾನವೀಯ ಧರ್ಮವನ್ನು ಆಚರಿಸಿ. ನಮ್ಮ ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರ ತಿಳಿಯುವ ಅವಕಾಶ ಕಲ್ಪಿಸಿ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಶಂಕರನಾರಾಯಣ ಭಟ್ ಹೇಳಿದರು.
ಅವರು ಅಡೂರು ವಿದ್ಯಾ ಭಾರತಿ ವಿದ್ಯಾಲಯದಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಶ್ರೀ ವರ ಮಹಾಲಕ್ಷ್ಮೀ ಪೂಜೆಯ ಧಾಮರ್ಿಕ ಸಭೆಯಲ್ಲಿ ಧರ್ಮ ಜಾಗೃತಿ ಕುರಿತು ಉಪನ್ಯಾಸ ನೀಡಿದರು.
ಇಂದು ಸಮಾಜದಲ್ಲಿ ಸಂಸ್ಕೃತಿ ಸಂಸ್ಕಾರ ಮಾಯವಾಗುತ್ತಿದೆ. ಮಕ್ಕಳನ್ನು ಮನೆಯಲ್ಲಿ ಮೊಬೈಲ್ ಕೊಟ್ಟು ಕುಳ್ಳಿರಿಸದೆ ನಮ್ಮ ಜೊತೆಗೆ ಅವಕಾಶ ಸಿಕ್ಕದಾಗಲೆಲ್ಲ, ದೇವಸ್ಥಾನಕ್ಕೆ, ಧಾಮರ್ಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತಾಯ ಪೂರ್ವಕವಾದರೂ ಸರಿ ಕರೆದು ಕೊಂಡು ಹೋಗಿ. ಇದು ಮುಂದೆ ಅವರಿಗೆ ಬದುಕಿ ಬಾಳಲು, ಇತರರೊಂದಿಗೆ ಹೊಂದಣಿಕೆಯಿಂದಿರಲು ಸಹಕಾರಿಯಾಗುತ್ತದೆ. ಸಂದರ್ಭ ಸಿಕ್ಕದಾಗಲೆಲ್ಲ ಮಕ್ಕಳಿಗೆ ಸಂಸ್ಕಾರ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ, ಸಂಸ್ಕಾರಯುತ ಉಡುಗೆ ತೊಡುಗೆಗೆಳ ಬಗ್ಗೆ ತಿಳಿ ಹೇಳುವ ಅಗತ್ಯವಿದೆ. ಕುಟುಂಬದಲ್ಲಿ ತಾಯಿಯ ತಂದೆಯ ಕರ್ತವ್ಯವಿದು ಎಂದರು.
ಸಭೆಯ ಅಧ್ಯಕ್ಷತೆಯನ್ನು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷೆ ಶೋಭಾವತಿ ವಹಿಸಿದ್ದರು. ವಿದ್ಯಾಭಾರತಿ ವಿದ್ಯಾಲಯ ಅಡೂರಿನ ಸಂಚಾಲಕಿ ಪ್ರೇಮಾ ಬಾರಿತ್ತಾಯ ಸೇವಾ ಭಾರತಿ ಸಂಘದ ವತಿಯಿಂದ ನೆರೆ ಪರಿಹಾರ ನಿಧಿಗೆ ಧನ ಸಹಾಯ ನೀಡಿ, ನಿಧಿ ಹುಂಡಿಯನ್ನು ಉದ್ಘಾಟಿಸಿದರು.
ಶ್ರೀ ವರ ಮಹಾಲಕ್ಷ್ಮೀ ಪೂಜಾ ಸಮಿತಿ ಕಾರ್ಯದಶರ್ಿ ವೀಣಾ ಸ್ವಾಗತಿಸಿ, ಜೊತೆ ಕಾರ್ಯದಶರ್ಿ ವಿದ್ಯಾ ವಂದಿಸಿದರು. 700 ಕ್ಕೂ ಹೆಚ್ಚು ಮಂದಿ ಶ್ರೀ ವರಮಹಾಲಕ್ಷ್ಮೀ ಪೂಜೆಯಲ್ಲಿ ಭಾಗವಹಿಸಿದ್ದರು.