ಸಂಘಟನೆಗಳು ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯನಿರ್ವಹಿಸಬೇಕು-ಎಸ್ಐ ಶಿವದಾಸನ್
ಎಸ್ಎಸ್ಎಸ್ ರಾಂಗ್ರಂಗ್ ಉದ್ಘಾಟನೆ
ಕುಂಬಳೆ: ಯುವ ಮನಸ್ಸುಗಳನ್ನು ಬೆಸೆಯುವ ಸಾಂಸ್ಕೃತಿಕ ಕಾರ್ಯಚಟುವಟಿಕೆಗನ್ನು ಪ್ರೋತ್ಸಾಹಿಸುವಲ್ಲಿ ಸಂಘಟನೆಗಳು ಕಾರ್ಯಪ್ರವೃತ್ತರಾಗುವುದರಿಂದ ಸಾಮಾಜಿಕ ಏಕತೆ ಸಾಧ್ಯವಿದೆ. ಅಪರಾಧ, ಕುಕೃತ್ಯಗಳ ಘಾತುಕ ಮನಸ್ಸುಗಳನ್ನು ನಾಶಗೊಳಿಸುವ ಶಕ್ತಿ ಸಂಗೀತ-ಹಾಡುಗಾರಿಕೆಗಳಲ್ಲಿವೆ ಎಂದು ಕುಂಬಳೆ ಪೋಲೀಸ್ ಠಾಣಾಧಿಕಾರಿ ಶಿವದಾಸನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಜುಂಗಾವಿನ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಯಾದ ಎಸ್.ಎಸ್.ಎಸ್.(ಸತ್ಯ-ಸನ್ಮಾರ್ಗ, ಶ್ರೇಯಸ್) ನೇತೃತ್ವದಲ್ಲಿ ಇತ್ತೀಚೆಗೆ ನಾಯ್ಕಾಪು ಸಮೀಪದ ನಾರಾಯಣಮಂಗಲ ಗಣೇಶ ಮಂದಿರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಗ್ರಂಗ್ ಸಂಗೀತ ಸಂಜೆ ಹಾಗೂ ಗೌರವಾಭಿನಂದನಾ ಸಮಾರಂಭವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘಟನೆಗಳು ಸಾಮಾಜಿಕ ಕಳಕಳಿಯೊಂದಿಗೆ ಆಯೋಜಿಸುವ ಕಾರ್ಯಕ್ರಮಗಳು ಪರಿವರ್ತನೆಗೆ ಕಾರಣವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಕಷ್ಟಕ್ಕೊಳಗಾಗಿರುವ ಜನಸಾಮಾನ್ಯರಿಗೆ ಕೈಲಾದ ನೆರವು ನೀಡುವಲ್ಲಿ ಸಂಘಟನೆಗಳು ಪ್ರಯತ್ನಿಸಬೇಕು ಎಂದು ಅವರು ತಿಳಿಸಿದರು. ಎಸ್ಎಸ್ಎಸ್ ಸಂಘಟನೆಯ ಕಾರ್ಯಚಟುವಟಕೆಗಳು ಗುಣಮಟ್ಟಾತ್ಮಕವಾಗಿ ಸಾಮಾಜಿಕ ಕಳಕಳಿಯೊಂದಿಗೆ ಸ್ತುತ್ಯರ್ಹವಾಗಿದೆ ಎಂದು ಅವರು ತಿಳಿಸಿದರು.
ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯ ಸತ್ಯಶಂಕರ ಭಟ್ ಹಿಳ್ಳೆಮನೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸ ತಲೆಮಾರಿಗೆ ಪರಂಪರೆಯ ಅರಿವು ಮೂಡಿಸುವ ಚಟುವಟಿಕೆಗಳು ಇಂದು ಅಗತ್ಯವಿದೆ. ಸಾಂಸ್ಕೃತಿಕತೆಯಲ್ಲಿ ಆಸಕ್ತಿ ಕಳೆದುಕೊಳ್ಳುವ ಯುವ ಸಮೂಹ ಯಾಂತ್ರಿಕ ಜಗತ್ತಿನಲ್ಲಿ ಕತ್ತಲೆಯತ್ತ ಸಾಗುತ್ತಿರುವುದು ಆತಂಕಾರಿಯಾಗಿದ್ದು, ಪ್ರಾದೇಶಿಕ ಕಲೆ, ಸಂಸ್ಕೃತಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಅವರು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಅಮ್ಮಣ್ಣಾಯ, ಗಣೇಶ ಮಂದಿರದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಹಾಗೂ ನಾರಾಯಣಮಂಗಲದ ಚೀರುಂಭಾ ಭಗವತಿ ಕ್ಷೇತ್ರದ ಕೃಷ್ಣ ಕಾರ್ನವರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.ಶ್ರೀನಿಧಿ, ಯೆಯ್ಯಾರು ಸತೀಶ ಭಟ್, ವಿಜಯಲಕ್ಷ್ಮೀ ಜಿ.ಕೆ.ಭಟ್ ಉಪಸ್ಥಿತರಿದ್ದರು.ಎಸ್ಎಸ್ಎಸ್ ಸಂಘಟನೆಯ ಸಂಚಾಲಕ ಜಿ.ಕೆ.ಭಟ್ ಮಜಲು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಂಕರಪ್ರಸಾದ್ ಮಜಲು ವಂದಿಸಿದರು.
ಬಳಿಕ ಸಂಗೀತ ಸಂಜೆ ರಾಗ್ರಂಗ್ ಪ್ರದರ್ಶನಗೊಂಡಿತು. ಜಿ.ಕೆ.ಭಟ್ ಮಜಲು, ಸಂತೋಷ್ ಅನಂತಪುರ, ಸವಿತಾ ಉಪ್ಪಳ, ಸುಂದರ ಮಾಯಿಪ್ಪಾಡಿ, ಗಾಯತ್ರೀ ಎಚ್, ವಿಜಯಲಕ್ಷ್ಮೀ ಜಿ.ಕೆ.ಭಟ್ ವಿವಿಧ ಭಾಷೆಗಳಲ್ಲಿ ಜಾನಪದ ಹಾಗೂ ಭಾವಗಾನಗಳನ್ನು ಹಾಡಿದರು. ಅಮ್ಮು ಮಾಸ್ತರ್(ಕೋಬೋಡರ್್), ಜಗದೀಶ್ ಉಪ್ಪಳ(ತಬಲಾ) ಹಾಗೂ ರವಿಕಾಂತ್ ನೆಲ್ಲಿಕಟ್ಟೆ(ರಿದಂ ರ್ಪಯಾಡ್)ನಲ್ಲಿ ಸಹಕರಿಸಿದರು.