ಓಣಂ, ಬಕ್ರೀದ್ ಸಂತೆ ಉದ್ಘಾಟನೆ
ಆಮಂತ್ರಣ ಮಲಯಾಲದಲ್ಲಿ ಮಾತ್ರ : ಬಿಜೆಪಿ ಬಹಿಷ್ಕಾರ
ಕಾಸರಗೋಡು: ಸಪ್ಲೈಕೋ ನೇತೃತ್ವದಲ್ಲಿ ನಡೆಯುವ ಓಣಂ-ಬಕ್ರೀದ್ ಸಂತೆಯ ಜಿಲ್ಲಾ ಮಟ್ಟದ ಉದ್ಘಾಟನೆ ಕಾಸರಗೋಡಿನಲ್ಲಿ ಶುಕ್ರವಾರ ನಡೆಯಿತು.
ಕಾಸರಗೋಡು ಎಂ.ಜಿ. ರಸ್ತೆಯ ವಿ.ಪಿ.ಟವರ್ನಲ್ಲಿ ಸಂತೆ ಕಾಯರ್ಾಚರಿಸಲಿದೆ. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು.
ಕುಟುಂಬಶ್ರೀ ಸಾಫ್, ಮಿಲ್ಮಾ, ಕಯರ್ಫೆಡ್ ಗಳ ಉತ್ಪನ್ನಗಳ ಜೊತೆಗೆ ಎಲ್ಲಾ ವಿಧದ ನಿತ್ಯೋಪಯೋಗಿ ಸಾಮಗ್ರಿಗಳೂ ಸಂತೆಯಲ್ಲಿದೆ. ಹದಿನೈದು ದಿನಗಳ ಕಾಲ ನಡೆಯುವ ಸಂತೆಯಲ್ಲಿ ದಿನಂಪ್ರತಿ ಚೀಟಿ ಎತ್ತುವ ಮೂಲಕ ಬಹುಮಾನ ಯೋಜನೆಯನ್ನೂ ಹಮ್ಮಿಕೊಂಡಿದೆ.
ಬಿಜೆಪಿ ಬಹಿಷ್ಕಾರ :
ಕಾಸರಗೋಡು ನಗರದಲ್ಲಿ ಶುಕ್ರವಾರ ಬೆಳಗ್ಗೆ ಆರಂಭಗೊಂಡ ಓಣಂ-ಬಕ್ರೀದ್ ಸಂತೆಯ ಉದ್ಘಾಟನಾ ಕಾರ್ಯಕ್ರಮವನ್ನು ಬಿಜೆಪಿ ಬಹಿಷ್ಕರಿಸಿತು. ಆಮಂತ್ರಣ ಪತ್ರಿಕೆಯನ್ನು ಮಲಯಾಳದಲ್ಲಿ ಮಾತ್ರ ಮುದ್ರಿಸಿದ್ದು, ಕನ್ನಡವನ್ನು ಅವಗಣಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಅವರ ನೇತೃತ್ವದಲ್ಲಿ ಬಹಿಷ್ಕರಿಸಿತು. ಇತ್ತೀಚೆಗೆ ನಡೆದ ಆರ್ಡಿಒ ಕಚೇರಿಯ ಉದ್ಘಾಟನೆಯ ಆಮಂತ್ರಣ ಪತ್ರಿಕೆಯನ್ನು ಕೂಡಾ ಕನ್ನಡದಲ್ಲಿ ಪ್ರಕಟಿಸದಿರುವುದನ್ನು ಪ್ರತಿಭಟಿಸಿ ಕಾರ್ಯಕ್ರಮವನ್ನು ಬಿಜೆಪಿ ಬಹಿಷ್ಕರಿಸಿತ್ತು.